ADVERTISEMENT

ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು | ಮಲೆನಾಡಿಗರ ಮನವಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 19:45 IST
Last Updated 10 ಜುಲೈ 2019, 19:45 IST

ಲಿಂಗನಮಕ್ಕಿ ಜಲಾಶಯದಿಂದ 400 ಕಿ.ಮೀ ದೂರದ ಬೆಂಗಳೂರಿಗೆ ನೀರು ಪೊರೈಸುವ ಯೋಜನೆಯು ಅವೈಜ್ಞಾನಿಕವಷ್ಟೇ ಅಲ್ಲ, ಮಲೆನಾಡಿಗರ ಭಾವನೆಗೆ ಧಕ್ಕೆ ತರುವಂಥದ್ದೂ ಆಗಿದೆ. ಬೇರೆಬೇರೆ ಯೋಜನೆಗಳಿಗಾಗಿ ಹಿಂದೆ ಭೂಮಿಯನ್ನು ಬಿಟ್ಟುಕೊಟ್ಟಿದ್ದ ಇಲ್ಲಿನ ಜನರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಸಾಗರ ತಾಲ್ಲೂಕಿನಿಂದ ಬೆಂಗಳೂರಿಗೆ ನೀರು ಸಾಗಿಸುವ ಯೋಜನೆಗೆ ಸರಿಸುಮಾರು 750 ಮೆಗಾವಾಟ್ ವಿದ್ಯುತ್ ಬೇಕು. ಅಲ್ಲದೆ ಈ ಯೋಜನೆ ಜಾರಿಯಾದರೆ, ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶವಾಗುತ್ತದೆ. ಪೈಪ್‌ಲೈನ್‌ಗಾಗಿ ಹಲವರು ಭೂಮಿ ಬಿಟ್ಟುಕೊಡಬೇಕಾಗುತ್ತದೆ.

ಹುಲಿ ಯೋಜನೆ, ಚೆಕ್ ಡ್ಯಾಂ ಯೋಜನೆ ಮುಂತಾದವುಗಳಿಂದ ಈಗಾಗಲೇ ಈ ಭಾಗದ ಜನರು ಬೇಸತ್ತಿದ್ದಾರೆ. ಇದರ ಜೊತೆಗೆ ಪ್ರಸಕ್ತ ಯೋಜನೆಯೂ ಜಾರಿಯಾದರೆ ಜೀವಸಂಕುಲ, ಅರಣ್ಯ ನಶಿಸಿ ಹೋಗುತ್ತವೆ. ಈಗಾಗಲೇ ಅರಣ್ಯ ನಾಶದಿಂದ ಈ ಭಾಗದ ವಾರ್ಷಿಕ ಸರಾಸರಿ ಮಳೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೊಸನಗರ, ಸೊರಬ, ಸಾಗರ, ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಾವಿಗಳು ಬತ್ತಿವೆ. ಅಂತರ್ಜಲ ಕುಸಿದಿದೆ. ಇಂಥ ಸ್ಥಿತಿಯಲ್ಲಿ ಹೊಸ ಯೋಜನೆಯನ್ನು ಒಪ್ಪಿಕೊಳ್ಳಲು ಇಲ್ಲಿನ ಜನ ಸಿದ್ಧರಿಲ್ಲ. ‘ಜೀವ ಬಿಟ್ಟೇವು ಶರಾವತಿ ಬಿಡೆವು’ ಎಂಬ ಕೂಗು ಪ್ರತಿಧ್ವನಿಸುತ್ತಿದೆ.

–ಶ್ವೇತಾ ಎನ್., ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.