ADVERTISEMENT

ಜಲ ಸುಸ್ಥಿರತೆ: ವೈಜ್ಞಾನಿಕ ಮಾದರಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 17 ಮೇ 2019, 16:32 IST
Last Updated 17 ಮೇ 2019, 16:32 IST

ಮೋಡ ಬಿತ್ತನೆ ಮಾಡಿ ಮಳೆ ಬರಿಸುವ ಅಸ್ಪಷ್ಟ, ನಿಖರತೆ ಇಲ್ಲದ ಯೋಜನೆಗೆ ರಾಜ್ಯ ಸರ್ಕಾರ ₹ 88 ಕೋಟಿ ವ್ಯಯಿಸಲು ಮುಂದಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ, ಸುಮಾರು ನಾನೂರು ವರ್ಷಗಳ ಹಿಂದಿನ, ಎರಡು ಎಕರೆ ವಿಸ್ತೀರ್ಣದ ಕೆರೆಯ ಹೂಳು ತೆಗೆಯುವುದಕ್ಕೆ ₹ 25 ಲಕ್ಷ ಖರ್ಚಾಯಿತು ಎಂದು ಹೇಳಲಾಗಿದೆ.

ಇನ್ನು₹88 ಕೋಟಿಯಲ್ಲಿ ಇಂತಹ ನೂರಾರು ಕೆರೆಗಳ ಹೂಳು ತೆಗೆಯಬಹುದು. ಆ ಮೂಲಕ, ಜಲ ಶೇಖರಣೆಗೆ ಅನುವು ಮಾಡಿಕೊಟ್ಟರೆ ಸುತ್ತಲ ಕಾಡು, ಜಮೀನು, ಬಾವಿಗಳಲ್ಲಿ ತಾನಾಗಿಯೇ ಜಲ ಮಟ್ಟ ಏರಿ, ಮುಂದಿನ ಅನೇಕ ವರ್ಷಗಳ ಕಾಲ ಜಲ ಸುಸ್ಥಿರತೆ ಕಾಪಾಡಿಕೊಳ್ಳಬಹುದು. ಅದು ವೈಜ್ಞಾನಿಕ ಮಾದರಿಯೂ ಹೌದು.

ADVERTISEMENT

ಸರೋಜಾ ಪ್ರಕಾಶ,ಮಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.