ADVERTISEMENT

ನಮಗೆ ಬೇಕಾಗಿದೆ ಇಂಥ ಭಾರತ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 20:13 IST
Last Updated 17 ಮಾರ್ಚ್ 2019, 20:13 IST
   

ನಿಷ್ಕಲ್ಮಶ ಗುಣ, ವಾತ್ಸಲ್ಯಮಯಿ, ಮಾತೃಹೃದಯಿ ಸಾಲುಮರದ ತಿಮ್ಮಕ್ಕ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಹಣೆಮುಟ್ಟಿ ಹರಸಿದಳು. ರಾಷ್ಟ್ರಪತಿ, ಶಿಷ್ಟಾಚಾರವನ್ನು ಬದಿಗೊತ್ತಿ ವಿನಯದಿಂದ ತಲೆಬಾಗಿ ಆಶೀರ್ವಾದವನ್ನು ಸ್ವೀಕರಿಸಿದರು. ದೇಶದ ಉದ್ದಗಲದಿಂದ ಬಂದು ಆಸೀನರಾಗಿದ್ದ ಸಭಾಸದರು ಹರ್ಷಿತರಾಗಿ ಚಪ್ಪಾಳೆ ತಟ್ಟಿದರು.

ಅಸಾಮಾನ್ಯ ಸಾಧಕಿಯಾದ ಸಾಮಾನ್ಯ ಪ್ರಜೆ ಮತ್ತು ದೇಶದ ಪ್ರಥಮ ಪ್ರಜೆ ಇಬ್ಬರೂ ಅಲ್ಲಿ ಏಕೀಭವಿಸಿದ್ದರು. ದಕ್ಷಿಣೋತ್ತರಗಳ ಭಾವಸಂಗಮ ಅಲ್ಲಿ ಸಂಭವಿಸಿತ್ತು. ಸಮಸ್ತ ದೇಶವಾಸಿಗಳ ಸಂತಸವು ಅಲ್ಲಿ ಕರತಾಡನದ ರೂಪದಲ್ಲಿ ವ್ಯಕ್ತವಾಗಿತ್ತು. ತಿಮ್ಮಕ್ಕನ ಆಶೀರ್ವಾದಕ್ಕೆ ಪಾತ್ರನಾದದ್ದು ತನ್ನ ಭಾಗ್ಯವೆಂದು ರಾಷ್ಟ್ರಪತಿ ತದನಂತರ ಕೃತಜ್ಞತೆ ದಾಖಲಿಸಿದರು. ಇಂಥ ಭಾರತ ನಮಗೆ ಬೇಕು. ಇಂಥ ಸುದಿನಗಳನ್ನು ಭಾರತವು ಅನವರತ ಕಾಣುವಂತಾಗಬೇಕು.

ಎಚ್. ಆನಂದರಾಮ ಶಾಸ್ತ್ರೀ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.