ADVERTISEMENT

ಜನಾಭಿಪ್ರಾಯಕ್ಕೆ ಮನ್ನಣೆ ಸಿಗಲಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 19:45 IST
Last Updated 17 ಜುಲೈ 2019, 19:45 IST

‘ಗೋವಾಕ್ಕೆ ಹೊಸ ವಿದ್ಯುತ್ ಮಾರ್ಗ ಕಲ್ಪಿಸಲು ಪಶ್ಚಿಮ ಘಟ್ಟದ ಕರ್ನಾಟಕ ವ್ಯಾಪ್ತಿಯ 177 ಹೆಕ್ಟೇರ್ ಕಾಡು ನಾಶ ಆಗಲಿದೆ ಎನ್ನುವುದು (ಪ್ರ.ವಾ., ಜುಲೈ 14) ಆತಂಕಕಾರಿ.

ನಿಸರ್ಗದ ಸೌಂದರ್ಯ ಮತ್ತು ಸಂಪತ್ತಿನ ಪ್ರಯೋಜನ ಪಡೆಯುವುದರ ಬಗ್ಗೆ ಯಾರೂ ಆಲೋಚನೆಯನ್ನೇ ಮಾಡದಿರುವುದು ದುಃಖದ ಸಂಗತಿ. ಸರ್ಕಾರಕ್ಕೆ ತನ್ನ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದೇ ಮುಖ್ಯ ಗುರಿಯಾಗಬಾರದು.

ಮೋಡ ಬಿತ್ತನೆ ಮಾಡಬೇಕಾದ ಸಂದರ್ಭ ಬಂದಿರುವಾಗ, ಮಳೆ ಸುರಿಸುವ ಅಪಾರ ಕಾನನ ಸಂಪತ್ತನ್ನು ನಾಶ ಮಾಡಲು ಹೊರಡುವುದು ಎಷ್ಟು ಸರಿ? ಎರಡೂ ರಾಜ್ಯಗಳು ಈ ವಿಷಯದಲ್ಲಿ ಪ್ರಬುದ್ಧವಾಗಿ ನಡೆದುಕೊಳ್ಳಬೇಕು.

ADVERTISEMENT

- ನಾಗರಾಜ ಮಸೂತಿ,ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.