ADVERTISEMENT

ಎಲ್ಲಿ ಅರಸೋಣ ಕ್ರೀಡಾಸ್ಫೂರ್ತಿ?

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 19:31 IST
Last Updated 24 ಏಪ್ರಿಲ್ 2022, 19:31 IST

ಜೀವನದಲ್ಲಿ ನೊಂದು ಬೆಂದವರಿಗೆ, ಸಾಧನೆಯಲ್ಲಿ ವೈಫಲ್ಯ ಹೊಂದಿದವರಿಗೆ ಅದನ್ನು ಕ್ರೀಡಾ ಮನೋಭಾವ ದಿಂದ ಸ್ವೀಕರಿಸುವಂತೆ ಹೇಳುವುದುಂಟು. ಇಂದು ನಾವು ಆಟಗಳಲ್ಲಿ ಅದರಲ್ಲೂ ಕ್ರಿಕೆಟ್‌ನಲ್ಲಿ ಪರಸ್ಪರ ದ್ವೇಷ ಉಕ್ಕಿ ಸುವ, ಕುಚೇಷ್ಟೆ, ಅಪಹಾಸ್ಯ ಮಾಡುವಂತಹ ನಡೆಯನ್ನು ನೋಡುತ್ತಿದ್ದೇವೆ. ಒಂದು ಚಿಕ್ಕ ತಪ್ಪಿಗೆ ಅಥವಾ ಸಹ ಆಟ ಗಾರ ಸರಿಯಾಗಿ ಆಡದಿದ್ದರೆ ಬ್ಯಾಟ್ ಎತ್ತಿ ಒಗೆಯುವಂತಹ ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದನ್ನು ಲಕ್ಷಾಂತರ ಮಂದಿ ನೋಡುತ್ತಿರುತ್ತಾರೆ ಎನ್ನುವ ಅರಿವು ಇರುವುದಿಲ್ಲವೇ?

ಗಲ್ಲಿ ಗಲ್ಲಿಗಳಲ್ಲಿ ಮಕ್ಕಳು ಇದೇ ರೀತಿ ಗಲಾಟೆ ಮಾಡುತ್ತಾ, ಹೊಡೆದಾಡಿಕೊಳ್ಳುತ್ತಾರೆ. ಕ್ರೀಡಾ ಸ್ಫೂರ್ತಿ ನಮ್ಮ ಕ್ರೀಡಾಳುಗಳಲ್ಲಿಯೇ ಇಲ್ಲ ಎಂದಾದರೆ ಇನ್ನು ಅದನ್ನು ಎಲ್ಲಿ ಅರಸುವುದು? ಒಮ್ಮೆ ಟಿ.ವಿ. ಜಾಹೀರಾತನ್ನು ಹೀಗೆ ಕೊಡುತ್ತಿದ್ದರು: ನಿಮ್ಮ ಮನೆಗೆ ಟಿ.ವಿ., ಪಕ್ಕದ ಮನೆಯವರಿಗೆ ಹೊಟ್ಟೆಯುರಿ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಎನ್ನುವ ಭಾವನೆಯನ್ನು ಆಟಗಾರರು ಮೊದಲು ಬೆಳೆಸಿಕೊಂಡು, ಕ್ರೀಡಾಳುಗಳಿಗೆ ಇರುವ ಗೌರವ, ಬೆಲೆ, ಆದರ್ಶ ವನ್ನು ಕಾಯ್ದುಕೊಳ್ಳಬೇಕು.⇒ಎಂ.ಪರಮೇಶ್ವರ,ಮದ್ದಿಹಳ್ಳಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT