ADVERTISEMENT

ಯಾಕೆ ಈ ಸೌಲಭ್ಯ?

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2018, 19:30 IST
Last Updated 2 ಆಗಸ್ಟ್ 2018, 19:30 IST

ಬ್ಯಾಂಕ್‌ಗಳನ್ನು ವಂಚಿಸಿ, ಭಾರತದಿಂದ ಪರಾರಿ ಆಗಿರುವ ವಿಜಯ ಮಲ್ಯ ಅವರನ್ನು ಇರಿಸಲು ಉದ್ದೇಶಿಸಿರುವ ಜೈಲಿನ ಗಾಳಿ ಬೆಳಕಿನ ವ್ಯವಸ್ಥೆ ಬಗ್ಗೆ ವಿವರವಾದ ವಿಡಿಯೊ ನಿರ್ಮಿಸಿ ಸಲ್ಲಿಸುವಂತೆ ಲಂಡನ್ ನ್ಯಾಯಾಲಯವು ಭಾರತಕ್ಕೆ ಸೂಚನೆ ನೀಡಿದೆ. ಇದು ಖಂಡನಾರ್ಹ.

ಭಾರತದಲ್ಲಿರುವ ಬಹುತೇಕ ಜೈಲುಗಳು ಬ್ರಿಟಿಷ್ ಆಡಳಿತದ ಕಾಲದ್ದೇ. ಅವರು ನಿರ್ಮಿಸಿದ್ದ ಜೈಲುಗಳಲ್ಲಿ ಎಷ್ಟರ ಮಟ್ಟಿನ ಅನುಕೂಲಗಳಿದ್ದವು ಎಂಬುದು ಗೊತ್ತಿದ್ದೇ. ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರು ಅಂಡಮಾನ್ ಜೈಲಿನಲ್ಲಿಟ್ಟು ಕ್ರೂರವಾಗಿ ಶಿಕ್ಷಿಸುತ್ತಿದ್ದರು ಎಂಬುದು ಇತಿಹಾಸ. ಸ್ವಾತಂತ್ರ್ಯ ಹೋರಾಟಗಾರರಿಗೆ ಲಭಿಸದ ಸವಲತ್ತನ್ನು ಒಬ್ಬ ವಂಚಕನಿಗೆ ಒದಗಿಸಬೇಕೆಂದು ನ್ಯಾಯಾಲಯ ಹೇಳಿರುವುದು ವಿಪರ್ಯಾಸವೇ ಸರಿ.

–ಉಮಾ ಮೋಹನಮುರಳಿ, ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.