ADVERTISEMENT

ಸರ್ಕಾರಗಳಿಗೆ ಸಿಟ್ಟೇಕೆ ಬರುತ್ತದೆ?

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 19:45 IST
Last Updated 22 ಸೆಪ್ಟೆಂಬರ್ 2019, 19:45 IST

ಎಲ್ಲ ರಂಗಾಯಣಗಳ ನಿರ್ದೇಶಕರನ್ನೂ, ರಂಗ ಸಮಾಜವನ್ನೂ, ಎಲ್ಲ ಅಕಾಡೆಮಿಗಳನ್ನೂ ಯಾವುದೇ ಕಾರಣ ನೀಡದೆ ಕಿತ್ತು ಹಾಕಿದೆ ರಾಜ್ಯ ಸರ್ಕಾರ. ಕೇಳಿದರೆ ಮಾಮೂಲು ಪ್ರಕ್ರಿಯೆ ಅನ್ನುತ್ತದೆ.

ಕಿತ್ತು ಹಾಕುವುದು ಮಾಮೂಲು ಪ್ರಕ್ರಿಯೆಯಾಗಬಾರದು. ಸರ್ಕಾರ ರಂಗಾಯಣವನ್ನು ಗೌರವಿಸಬೇಕಿತ್ತು, ಪುರಸ್ಕರಿಸಬೇಕಿತ್ತು. ಉದಾಹರಣೆಗೆ, ರಂಗಾಯಣವು ಕಳೆದ ಹಲವಾರು ವರ್ಷಗಳಿಂದ ರಾಮಾಯಣವನ್ನು ಎತ್ತಿ ಹಿಡಿದಿದೆ. ಅದರಲ್ಲೂ, ರಾಷ್ಟ್ರಕವಿ ಕುವೆಂಪು ಅವರ ಕನ್ನಡ ರಾಮಾಯಣವನ್ನು ಎತ್ತಿ ಹಿಡಿದಿದೆ.

ಆದರೆ ಕುವೆಂಪು ಒಂದು ಧರ್ಮಸೂಕ್ಷ್ಮವನ್ನು ತುಂಬ ವಿನಯದಿಂದ ಎತ್ತಿ ಹಿಡಿದಿದ್ದಾರೆ. ರಾಮ ಕಥನಕ್ಕಿಂತ ರಾಮಾಯಣ ಕಥನ ಮಿಗಿಲು, ರಾಮಾಯಣ ಕಥನಕಾರ ವಾಲ್ಮೀಕಿ ಮಿಗಿಲು ಎಂದು. ಹಾಗೆಂದು ಸಿಟ್ಟು ಬಂದಿತೆ ಇಂದಿನ ಸರ್ಕಾರಕ್ಕೆ? ಗೊತ್ತಿಲ್ಲ. ಆದರೆ, ಶಾಂತವಾಗಿ ಯೋಚಿಸಿ, ತಪ್ಪನ್ನು ತಿದ್ದಿಕೊಳ್ಳಲಿಕ್ಕೆ ಈಗಲೂ ಕಾಲ ಮಿಂಚಿಲ್ಲ.

ADVERTISEMENT

ಪ್ರಸನ್ನ,ಹೆಗ್ಗೋಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.