ADVERTISEMENT

ಧರ್ಮದರ್ಶನ ಎಂದರೆ...

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 19:34 IST
Last Updated 19 ಸೆಪ್ಟೆಂಬರ್ 2019, 19:34 IST

ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್‌ ಅವರು ಹಾಸನಾಂಬಾ ದೇವಿಯ ದರ್ಶನಕ್ಕೆ ನಿಗದಿಪಡಿಸಿರುವ ಸಮಯದ ವಿವರ ನೀಡುತ್ತಾ ‘ಧರ್ಮದರ್ಶನ ಮತ್ತು ನೇರ ದರ್ಶನದ ವ್ಯವಸ್ಥೆ ಇದ್ದು, ಟಿಕೆಟ್ ದರವನ್ನು ಕ್ರಮವಾಗಿ ₹ 300 ಹಾಗೂ ₹ 1,000 ನಿಗದಿಪಡಿಸಲಾಗಿದೆ’ ಎಂದಿದ್ದಾರೆ (ಪ್ರ.ವಾ., ಸೆ. 19). ಧರ್ಮದರ್ಶನ ಎಂದರೆ ಉಚಿತ ದರ್ಶನ ಅಲ್ಲವೇ? ಕಡಿಮೆ ಬೆಲೆಯ ಟಿಕೆಟ್ ಕೊಂಡು ದರ್ಶಿಸಿದರೆ ಅದೂ ಧರ್ಮದರ್ಶನವೇ...! ದೇವರನ್ನು ದರ್ಶಿಸಿ ಕೃತಾರ್ಥವಾಗಲೂ ಹಣ ನೀಡಬೇಕಾಗಿ ಬಂದಿರುವುದು ಕಲಿಗಾಲದ ಮಹಿಮೆ.

-ಪತ್ತಂಗಿ ಎಸ್. ಮುರಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT