ADVERTISEMENT

ಶಾಲಾ ಮಕ್ಕಳಿಗೆ ‘ಮಾಲೆ’ ಯಾಕೆ?

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:04 IST
Last Updated 8 ಡಿಸೆಂಬರ್ 2019, 20:04 IST

ಡಿಸೆಂಬರ್ ತಿಂಗಳಲ್ಲಿ ಶಬರಿಮಲೆ ಅಯ್ಯಪ್ಪನ ಮಾಲೆ ಒಳಗೊಂಡಂತೆ ಕರ್ನಾಟಕದಾದ್ಯಂತ ಬೇರೆ ಬೇರೆ ರೀತಿಯ ಮಾಲೆಗಳನ್ನು ಧರಿಸುವ ಪರಿಪಾಟವಿದೆ. ಇಂತಿಷ್ಟು ದಿನ ಬೆಳಗಿನ ಜಾವ ತಣ್ಣೀರು ಸ್ನಾನ ಮಾಡಿ, ಪೂಜೆ ಮಾಡಿ ದೇವರ ಭಜನೆಯಲ್ಲಿ ಪಾಲ್ಗೊಳ್ಳುತ್ತಾರೆ. ವಿಜಯಪುರ, ಬೆಳಗಾವಿ ಭಾಗಗಳಲ್ಲಿ ಪಂಢರಾಪುರ ಮಾಲೆ, ನಾಯಕನಹಟ್ಟಿಯಲ್ಲಿ ತಿಪ್ಪೇಸ್ವಾಮಿ ಮಾಲೆ, ಬಳ್ಳಾರಿ ಭಾಗದಲ್ಲಿ ಕನಕದುರ್ಗ ಮಾಲೆ, ಕೊಟ್ಟೂರಿನಲ್ಲಿ ಕೊಟ್ಟೂರೇಶ್ವರ ಮಾಲೆ, ಹಂಪಿ ಕಮಲಾಪುರದಲ್ಲಿ ಹನುಮ ಮಾಲೆ, ಚಿಕ್ಕಮಗಳೂರು ಭಾಗದಲ್ಲಿ ದತ್ತಮಾಲೆ ಹೀಗೆ ತರಾವರಿ ಮಾಲೆಗಳಿವೆ. ಈ ವ್ರತಕ್ಕೆ ಬೇರೆ ಬೇರೆ ಕಡೆ ಬೇರೆ ಬೇರೆ ನಿಯಮಗಳಿವೆ.

ಶಾಲಾ ವಿದ್ಯಾರ್ಥಿಗಳು ಈ ಮಾಲೆಗಳನ್ನು ಧರಿಸುವುದನ್ನು ಕಂಡಿದ್ದೇನೆ. ಅದರಲ್ಲೂ ದಲಿತ, ಹಿಂದುಳಿದ ವರ್ಗದ ಮಕ್ಕಳೇ ಹೆಚ್ಚು ಪಾಲ್ಗೊಳ್ಳುತ್ತಾರೆ. ಪರೀಕ್ಷೆ ಹತ್ತಿರವಿರುವ ದಿನಗಳು ಇವಾಗಿರುವುದರಿಂದ ಈ ಮಕ್ಕಳಿಗೆ ಇದರಿಂದ ತೊಂದರೆಯಾಗುತ್ತದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಇಂತಹವುಗಳಲ್ಲಿ ಶಾಲಾ ಮಕ್ಕಳು ಒಳಗೊಳ್ಳದಂತೆ ಶಿಕ್ಷಣ ಇಲಾಖೆಯು ನಿಯಮ ರೂಪಿಸಬೇಕು. ಮಕ್ಕಳಿಗೂ ಈ ಬಗ್ಗೆ ತಿಳಿವಳಿಕೆ ನೀಡಬೇಕು.

–ಜಿ.ಅರುಣ್‍ಕುಮಾರ್,ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.