ADVERTISEMENT

ಆರ್‌ಟಿಪಿಎಸ್-ಒಂದು ನೋಟ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST
ಆರ್‌ಟಿಪಿಎಸ್-ಒಂದು ನೋಟ
ಆರ್‌ಟಿಪಿಎಸ್-ಒಂದು ನೋಟ   

ರಾಜ್ಯದ ವಿದ್ಯುತ್ ಕೊರತೆ ನೀಗಿಸಲು 1978ರಲ್ಲಿ ಆಗಿನ ಸರ್ಕಾರವು ರಾಯಚೂರು ಸಮೀಪದ ದೇವಸುಗೂರ ಗ್ರಾಮದ ಹತ್ತಿರ ಶಾಖೋತ್ಪನ್ನ ವಿದ್ಯುತ್ ಸ್ಥಾ ವರ ನಿರ್ಮಾಣಕ್ಕೆ ಮುಂದಾಯಿತು.

ಮೊದಲ ಘಟಕ 1985ರಲ್ಲಿ,  2ನೇ ಘಟಕ 1986ರಲ್ಲಿ, 3ನೇ ಘಟಕ 1991ರಲ್ಲಿ, 4ನೇ ಘಟಕ 1994ರಲ್ಲಿ  5 ಮತ್ತು 6ನೇ ಘಟಕ ಕ್ರಮವಾಗಿ 1999ರಲ್ಲಿ ಹಾಗೂ 2003ರಲ್ಲಿ 7ನೇ ಘಟಕ ಸ್ಥಾಪನೆಗೊಂಡವು. ಏಳು ಘಟಕಗಳು ತಲಾ 210 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿವೆ.

8ನೇ ಘಟಕಕ್ಕೆ 2007ರಲ್ಲಿ ಶಂಕುಸ್ಥಾಪನೆ ನಡೆಸಿ 2009ರಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಬೇಕಿತ್ತು. 250 ಮೆಗಾವಾಟ್ ಸಾಮರ್ಥ್ಯದ ಈ ಘಟಕ ನಿರ್ಮಾಣ ಪೂರ್ಣಗೊಂಡಿದೆ. ಪ್ರಾಯೋಗಿಕ ಪರೀಕ್ಷಾರ್ಥ ವಿದ್ಯುತ್ ಉತ್ಪಾದನೆ ಮಾತ್ರ ಆಗಿದೆ.
 
ಪದೇ ಪದೇ ತಾಂತ್ರಿಕ ಅಡಚಣೆ ಕಾರಣದಿಂದ ಅಧಿಕೃತವಾಗಿ ವಿದ್ಯುತ್ ಉತ್ಪಾದನೆ ಆರಂಭಿಸಿಲ್ಲ. ಬಿಎಚ್‌ಇಎಲ್ ಕಂಪೆನಿ ಈ ಘಟಕ ನಿರ್ಮಿಸಿದ್ದು, ತಾಂತ್ರಿಕ ಸಮಸ್ಯೆ ಹೋಗಲಾಡಿಸಲು ಪ್ರಯತ್ನಿಸುತ್ತಿದೆ.

ವಿದ್ಯುತ್ ಉತ್ಪಾದನೆ: ದಿನಂಪ್ರತಿ 35 ದಶಲಕ್ಷ ಯುನಿಟ್. ವಾರ್ಷಿಕ 10,000 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ. ರಾಜ್ಯ ವಿದ್ಯುತ್ ಜಾಲಕ್ಕೆ 35.40 ದಶಲಕ್ಷ ಯುನಿಟ್ ಕೊಡುಗೆ.

ಪುರಸ್ಕಾರ ಮತ್ತು ದಾಖಲೆ 
1988-2004ರಲ್ಲಿ ರಾಷ್ಟ್ರೀಯ ಪ್ರಶಸ್ತಿ- ಉತ್ತಮ ಉತ್ಪಾದನೆಗೆ

ಆರ್‌ಟಿಪಿಎಸ್‌ನ 6ನೇ ಘಟಕ ಸತತ 330 ದಿನಗಳ ಕಾಲ  ನಿರಂತರ ಉತ್ಪಾದನೆಗೆ ರಾಷ್ಟ್ರೀಯ ದಾಖಲೆಯಲ್ಲಿ 2ನೇ ಸ್ಥಾನ ಪಡೆದ ಹೆಗ್ಗಳಿಕೆ.

ಆರ್‌ಟಿಪಿಎಸ್‌ನ 7ನೇ ಘಟಕ 25 ತಿಂಗಳಿನಲ್ಲಿ ವಿದ್ಯುತ್ ಜಾಲಕ್ಕೆ  ಸೇರ್ಪಡೆ ರಾಷ್ಟ್ರೀಯ ದಾಖಲೆ. ಹೊಸ ಮೈಲಿಗಲ್ಲು.

ಮೊಟ್ಟ ಮೊದಲು ಕಲ್ಲಿದ್ದಲು ಪೂರೈಕೆ ಒಪ್ಪಂದ ಜಾರಿಗೆ ತಂದ ಅಗ್ರಗಣ್ಯ ಸಂಸ್ಥೆ.

ದಿನಂಪ್ರತಿ ಕಲ್ಲಿದ್ದಲು ಬಳಕೆ -21,000 ಟನ್‌ಗಳು

ಗುಣಮಟ್ಟ ಪರೀಕ್ಷೆ, ಆಧುನಿಕ ಯಾಂತ್ರೀಕೃತ ಆಗರ್ ಸ್ಯಾಂಪ್ಲಿಂಗ್ ದೇಶದಲ್ಲಿಯೇ ಪ್ರಥಮ ಬಾರಿ ಅಳವಡಿಕೆ.

ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಐಎಸ್‌ಒ-14001 ಪ್ರಮಾಣ ಪತ್ರ.

ಶೇ 66ರಷ್ಟು ಹಾರುಬೂದಿ ವಿವಿಧ ಉದ್ಯಮಗಳಿಗೆ ಪೂರೈಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT