ಸಂಸತ್ತು, ವಿಧಾನಸಭೆಯ ಕಲಾಪಗಳಿಗೆ ಅಡ್ಡಿಪಡಿಸುವವರಿಗೆ ಅಲ್ಲಿರಲು ಅಧಿಕಾರವಿಲ್ಲ. ಕಳೆದ 5–6 ವರ್ಷಗಳಿಂದ, ದಬ್ಬಾಳಿಕೆ ನಡೆಸುವುದೇ ನಡವಳಿಕೆ ಎಂಬ ಸ್ಥಿತಿ ನಿರ್ಮಾಣವಾಗಿದೆ. ಹಣಬಲ, ಜಾತಿ ಬಲದಿಂದ ಆರಿಸಿ ಬರುತ್ತಿರುವವರು ಹೆಚ್ಚಾಗುತ್ತಿರುವ ಕಾರಣ ಹೀಗಾಗುತ್ತಿದೆ. ಅಸಭ್ಯವಾಗಿ ವರ್ತಿಸಿದವರ ವಿರುದ್ಧ ಆಡಳಿತ ಪಕ್ಷವಾಗಲಿ, ಪ್ರತಿಪಕ್ಷವಾಗಲಿ ಕಠಿಣ ಕ್ರಮ ಜರುಗಿಸಿಲ್ಲ.
ಇಂಥ ಸಂಸದರನ್ನು ತಿರಸ್ಕರಿಸುವ ಜಾಗೃತಿ ಜನರಲ್ಲಿ ಮೂಡಬೇಕು. ಅಪರಾಧ ಹಿನ್ನೆಲೆಯವರು ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿಯಮ ರೂಪಿಸಬೇಕು. ಸಂಸದರಿಗೆ ಒಂದು ನೀತಿ ಸಂಹಿತೆ ರೂಪಿಸಿ, ಅದನ್ನು ಉಲ್ಲಂಘಿಸಿದವರು ಸದಸ್ಯತ್ವ ಕಳೆದುಕೊಳ್ಳುವಂತೆ ಮಾಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.