ಕಬಿನಿ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿ ಇನ್ನೂ ಆರಂಭವಾಗಬೇಕಿದೆ. ಅದರಿಂದ ಮೈಸೂರು ಜಿಲ್ಲೆಯ ನಂಜನಗೂಡು, ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನ ಭಾಗಗಳಲ್ಲಿ ಕೃಷಿಕರಿಗೆ ಅನುಕೂಲವಾಗುತ್ತದೆ.
ನುಗು ಏತ ನೀರಾವರಿ ಯೋಜನೆ ಕಾಮಗಾರಿ ಆರಂಭವಾಗಬೇಕು. ಇದು ಬೇಗನೆ ಪೂರ್ಣಗೊಂಡರೆ ಎಚ್.ಡಿ. ಕೋಟೆ ಮತ್ತು ನಂಜನಗೂಡು ತಾಲ್ಲೂಕಿನ ಸುಮಾರು 35 ಸಾವಿರ ಎಕರೆ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಸಿಗುತ್ತದೆ. ಉಳಿದಂತೆ ಇಲ್ಲಿಯ ನೀರಾವರಿ ಯೋಜನೆಗಳು ಸಂಪೂರ್ಣವಾಗಿವೆ. ಆಧುನಿಕ ನಾಲಾಗಳನ್ನು ಮಾಡಲಾಗಿದೆ. ಆದರೆ, ಮಳೆಯಿಲ್ಲದೇ ನದಿಯಲ್ಲಿ ನೀರಿಲ್ಲ. ಈ ವರ್ಷ ಚೆನ್ನಾಗಿ ಮಳೆಯಾದರೆ ಕಾಲುವೆಗಳಲ್ಲಿ ನೀರು ಹರಿದು ರೈತರ ಬಾಳು ಹಸನಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.