ಈಗ ಕರ್ನಾಟಕ ರಾಜ್ಯದಲ್ಲಿ ಸುಮಾರು 70 ಕ್ಕಿಂತ ಹೆಚ್ಚು ರೈಲು ಮಾರ್ಗಗಳು ತಾಂತ್ರಿಕ ಮತ್ತು ಸಂಚಾರದ ಸರ್ವೆಯನ್ನು ಪೂರ್ಣಗೊಳಿಸಿದ್ದು ರೈಲ್ವೆ ಮಾರ್ಗದ ಮಂಜೂರಾತಿಗಾಗಿ ಕಾಯುತ್ತಿವೆ.
ಇವುಗಳಲ್ಲಿ ಪ್ರಮುಖವಾಗಿ ಮುಂದಿನ ವರ್ಷಗಳಲ್ಲಿ ಮಂಜೂರಾತಿ ಪಡೆಯಬೇಕಾದ ರೈಲು ಮಾರ್ಗಗಳನ್ನು ಈ ಕೆಳಗೆ ಸೂಚಿಸಲಾಗಿದೆ.
1.ಗದಗ-ವಾಡಿ (275 ಕಿ.ಮೀ.), ವಯಾ ಯಲಬುರ್ಗಾ-ಲಿಂಗಸಗೂರು-ಹಟ್ಟಿ ಗೋಲ್ಡಮೈನ್ಸ್-ಶಹಾಪುರ ಈ ಮಾರ್ಗವು ಹುಬ್ಬಳ್ಳಿ-ಗುಲ್ಬರ್ಗ-ಬೀದರ್ ಮತ್ತು ಹೈದರಾಬಾದ್‌ಗೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಅಂದಾಜು ವೆಚ್ಚ ರೂ. 1200 ಕೋಟಿ.
2.ಗುಲ್ಬರ್ಗ-ವಿಜಾಪುರ- ಅಥಣಿ-ಮೀರಜ್ (260 ಕಿ.ಮೀ.) ಈ ಮಾರ್ಗವು ಹೈದರಾಬಾದ್-ಬೆಂಗಳೂರು- ಮುಂಬೈಗೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಅಂದಾಜು ವೆಚ್ಚ ರೂ. 1200 ಕೋಟಿ.
3.ಸೊಲ್ಲಾಪುರ-ಬಸವಕಲ್ಯಾಣ- ಹುಮ್ನಾಬಾದ್- ವಿಕ್ರಾರಾಬಾದ್ (200 ಕಿ.ಮೀ.) ಈ ಮಾರ್ಗವು ಮುಂಬೈ-ಹೈದರಾಬಾದ್‌ಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಅಂದಾಜು ವೆಚ್ಚ ರೂ. 1200 ಕೋಟಿ.
4.ಬೆಳಗಾವಿ -ಬಾಗಲಕೋಟೆ- ರಾಯಚೂರು ಈ ಮಾರ್ಗವು ಕರ್ನಾಟಕದ ಮಧ್ಯ ಭಾಗಗಳಿಗೆ ನೇರ ಸಂಪರ್ಕವನ್ನು ಕಲ್ಪಿಸುವುದಲ್ಲದೆ 4-5 ಜಿಲ್ಲೆಗಳಲ್ಲಿನ ಸುಮಾರು 340 ಕಿ.ಮೀ. ರೈಲು ಮಾರ್ಗಗಳಿಗೆ (ಅಂದಾಜು ವೆಚ್ಚ ರೂ. 2500 ಕೋಟಿ) ಕೊಂಡಿಯಾಗಿರುತ್ತದೆ.
5.ಗದಗ-ಹರಪನಹಳ್ಳಿ ಮುಂಡರಗಿ ಮಾರ್ಗವಾಗಿ (90 ಕಿ.ಮೀ.) ಈ ಮಾರ್ಗವು ವಿಜಾಪುರ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಿಗೆ ಅಂತರ ಸಂಪರ್ಕವನ್ನು ಕಲ್ಪಿಸುತ್ತದೆ. ಅಂದಾಜು ವೆಚ್ಚ ರೂ. 400 ಕೋಟಿ.
6.ಬಳ್ಳಾರಿ-ವಿಜಾಪುರ ಮುದ್ದೇಬಿಹಾಳ- ಲಿಂಗಸಗೂರು-ಸಿಂದನೂರು-ಸಿರಗುಪ್ಪ (200 ಕಿ.ಮೀ.) ಇದು ಅತ್ಯಂತ ಪ್ರಮುಖವಾದ ರೈಲು ಮಾರ್ಗವಾಗಿದ್ದು ಸುತ್ತಮುತ್ತಲಿನ ಪ್ರಮುಖ ಜಿಲ್ಲೆಗಳಿಗೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಹಾಗೂ ಬೆಂಗಳೂರು ಚೆನ್ನೈ ಹೈದರಾಬಾದ್‌ಗೆ ನೇರ ಸಂಪರ್ಕ ಸಾಧ್ಯವಾಗುತ್ತದೆ. ಇದರ ಅಂದಾಜು ವೆಚ್ಚ ರೂ. 1000 ಕೋಟಿ.
7.ಧಾರವಾಡ-ಬೆಳಗಾವಿ (70 ಕಿ.ಮೀ.) ಈ ಮಾರ್ಗವು ಬೆಂಗಳೂರು ಮತ್ತು ಮಹಾರಾಷ್ಟ್ರಕ್ಕೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಅಂದಾಜು ವೆಚ್ಚ ರೂ. 300 ಕೋಟಿ.
8.ಚಿಕ್ಕಮಗಳೂರು-ಹಾಸನ (70 ಕಿ.ಮೀ.) ಈ ಮಾರ್ಗವು ಮೈಸೂರು-ಹುಬ್ಬಳ್ಳಿ ಮತ್ತು ಮುಂಬೈಗೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಅಂದಾಜು ವೆಚ್ಚ ರೂ. 300 ಕೋಟಿ.
9.ಮೈಸೂರು-ಮಡಿಕೇರಿ-ಮಂಗಳೂರು (300 ಕಿ.ಮೀ.) ಅಂದಾಜು ವೆಚ್ಚ ರೂ. 2500 ಕೋಟಿ.
10.ಮಂಡ್ಯ-ತುಮಕೂರು (130 ಕಿ.ಮೀ.) ಅಂದಾಜು ವೆಚ್ಚ ರೂ. 500 ಕೋಟಿ.
11.ದಾಬಸ್‌ಪೇಟೆ-ಚಿಕ್ಕಬಳ್ಳಾಪುರ 50 ಕಿ.ಮೀ. ಈ ಮಾರ್ಗವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ. ಅಂದಾಜು ವೆಚ್ಚ ರೂ. 100 ಕೋಟಿ.
12.ಚಿತ್ರದುರ್ಗ-ಚಳ್ಳಕೆರೆ- ಕೊಟ್ಟೂರು 80 ಕಿ.ಮೀ. ಅಂದಾಜು ವೆಚ್ಚ ರೂ. 300 ಕೋಟಿ.
13.ಸಾಗರ-ಸಿರಸಿ-ಯಲ್ಲಾಪುರ- ಹಳಿಯಾಳ-ಅಳ್ನಾವರ 200 ಕಿ.ಮೀ. ಅಂದಾಜು ವೆಚ್ಚ ರೂ. 1000 ಕೋಟಿ.
14. ಶ್ರಿನಿವಾಸಪುರ-ಮದನಪಲ್ಲಿ, (15) ಕೆಂಗೇರಿ-ಚಾಮರಾಜನಗರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.