ADVERTISEMENT

ವೈದ್ಯಕೀಯ ರಂಗ ಗ್ರಹಿಸಲು ಸಾಧ್ಯವಾಗಿದೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST
ವೈದ್ಯಕೀಯ ರಂಗ ಗ್ರಹಿಸಲು ಸಾಧ್ಯವಾಗಿದೆ
ವೈದ್ಯಕೀಯ ರಂಗ ಗ್ರಹಿಸಲು ಸಾಧ್ಯವಾಗಿದೆ   

ನಾನು ಹಳ್ಳಿಯಲ್ಲೇ ಹುಟ್ಟಿ ಬೆಳೆದು, 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದೆ. ಪಿಯುಸಿಯಲ್ಲಿ ವಿಜ್ಞಾನ ಆರಿಸಿಕೊಂಡಾಗ ಒಂದೆರಡು ತಿಂಗಳು ಕಷ್ಟವಾಯಿತು. ಆದರೆ, ಸಿಇಟಿಯಲ್ಲಿ ಉತ್ತಮ ರ‌್ಯಾಂಕ್ ಪಡೆದು, ಸರ್ಕಾರಿ ಕೋಟಾದಲ್ಲೇ ಎಂಬಿಬಿಎಸ್ ಪ್ರವೇಶ ಪಡೆದೆ.

ಪ್ರಥಮ ದರ್ಜೆಯಲ್ಲಿ ಪಾಸಾಗಿ, ಎಂಡಿ ಇನ್ ಜನರಲ್ ಮೆಡಿಸಿನ್ ಕೂಡಾ ಮಾಡಿದೆ. ಎಲ್ಲಿಯೂ ನನಗೆ ಕನ್ನಡ ಮಾಧ್ಯಮದ ಕೀಳರಿಮೆ ಕಾಡಲಿಲ್ಲ. ಜ್ಞಾನ ಪಡೆಯುವ ಹಂಬಲ ಇದ್ದಾಗ ಭಾಷೆ ಅಡ್ಡಿಯಾಗದು.
 
ಭಾಷೆ ನಮ್ಮ ಸಂವಹನಕ್ಕಾಗಿ ಮಾತ್ರ ಬೇಕು. ಏಮ್ಸ, ಜಿಪ್ಮಾರ್ ನಡೆಸಿದ ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲೂ ನನಗೆ ರ‌್ಯಾಂಕ್ ಬಂದಿವೆ. ಈಗ ನಾನು ಡಿಎಂ ಇನ್ ನ್ಯೂರಾಲಜಿಯಲ್ಲಿ ಉನ್ನತ ಶಿಕ್ಷಣ ಪಡೆಯಲು ತಯಾರಾಗುತ್ತಿದ್ದೇನೆ.
 
ಕನ್ನಡ ಮಾಧ್ಯಮದಲ್ಲಿ ಓದಿದ್ದಕ್ಕೆ ವೈದ್ಯಕೀಯ ರಂಗವನ್ನು ಚೆನ್ನಾಗಿ ಗ್ರಹಿಸಲು ಸಾಧ್ಯವಾಗಿದೆ. ಕನ್ನಡದಲ್ಲಿ ಓದಿದ್ದು ನನ್ನಲ್ಲಿ ಹೆಮ್ಮೆ ಮೂಡಿಸಿದೆ.

 -ಡಾ.ಎಂ. ಮಂಜುನಾಥ, ದಾವಣಗೆರೆ (ಬೆಂಗಳೂರಿನ ಸಾಗರ ಆಸ್ಪತ್ರೆಯ ಐಸಿಯುನಲ್ಲಿ ಕಾರ್ಯನಿರತ ವೈದ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.