ADVERTISEMENT

ಮಾದಕ ವಸ್ತು ಸದೃಶ

ಕೆ.ಪ್ರಕಾಶ್, ಚಿಕ್ಕಜೋಗಿ ಹಳ್ಳಿ
Published 21 ಏಪ್ರಿಲ್ 2013, 19:59 IST
Last Updated 21 ಏಪ್ರಿಲ್ 2013, 19:59 IST

`ಜಾತಿ ಸಂವಾದ'ದಲ್ಲಿ ಮೀಸಲಾತಿಯ ಕುರಿತಂತೆ ಪ್ರಕಟವಾಗುತ್ತಿರುವ ಲೇಖನಗಳನ್ನು ಓದುತ್ತಿದ್ದೇನೆ. ಹೆಚ್ಚಿನ ಲೇಖನಗಳಲ್ಲಿ ಸಮಾಜ ಮೀಸಲಾತಿ ಯನ್ನು ಮೌನವಾಗಿ ಒಪ್ಪಿಕೊಳ್ಳುವಂತೆ ತಂತ್ರ ಹೂಡಿರುವುದು ಸುಲಭವಾಗಿ ಗೋಚರಿಸುತ್ತದೆ. ವೈಜ್ಞಾನಿಕವಾಗಿ ನೋಡಿದರೆ ಮೀಸಲಾತಿ ಒಂದು ಮಾದಕ ವಸ್ತು.

ಇದನ್ನು ಔಷಧ ರೂಪದಲ್ಲಿ ನೀಡಿದರೆ ಸಮಾಜದ ಮನೋರೋಗ ಗುಣವಾಗುತ್ತದೆ. ಆದರೆ ಇಂದು ಚಾಲ್ತಿಯಲ್ಲಿರುವ ಮೀಸಲಾತಿ ಚಟ ಹತ್ತಿಸುವ ಮಾದಕ ಪದಾರ್ಥವಾಗಿದೆ. ಇದು ಔಷಧ ರೂಪದಲ್ಲಿ ಇಲ್ಲವೇ ಇಲ್ಲ. `ಜಾತಿ ಸಂವಾದ'ದಲ್ಲಿ ಪ್ರಕಟವಾಗುವ ಹೆಚ್ಚಿನ ಲೇಖನಗಳು ಈ ವ್ಯತ್ಯಾಸವನ್ನು ಗಮನಸಿದೆ ಚಟ ಹತ್ತಿಸುವ ಮಾದಕ ವಸ್ತುವನ್ನೇ ಔಷಧ ಎಂದು ಪ್ರತಿಪಾದಿಸುತ್ತಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.