ADVERTISEMENT

ಮರಣದ ನಂತರ ಕಾರ್ಮಿಕರ ಕುಟುಂಬಕ್ಕೆ ಇಲಾಖೆಯಿಂದ ಸಿಗುವ ಸೌಲಭ್ಯ ಪಡೆಯುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:09 IST
Last Updated 22 ಸೆಪ್ಟೆಂಬರ್ 2025, 5:09 IST
   

ಕಾರ್ಮಿಕರು ಮರಣ ಹೊಂದಿದರೆ ಅವರ ಕುಟುಂಬಸ್ಥರಿಗೆ ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಎಕ್ಸ್-ಗ್ರೇಷಿಯಾ ಮಂಡಳಿಯು ಆರ್ಥಿಕ ನೆರವು ನೀಡುತ್ತದೆ.

ಕಾರ್ಮಿಕ ಇಲಾಖೆಯು ಕಾರ್ಮಿಕನ ಅಂತ್ಯಕ್ರಿಯೆಯ ವೆಚ್ಚಕ್ಕಾಗಿ ₹4 ಸಾವಿರ ಹಾಗೂ ಎಕ್ಸ್-ಗ್ರೇಷಿಯಾ ಮಂಡಳಿಯು ₹71 ಸಾವಿರ ಆರ್ಥಿಕ ನೆರವು ನೀಡುತ್ತದೆ.

ಅರ್ಹತೆಗಳು

  • ತಮ್ಮ ಜೀವಿತಾವಧಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರಬೇಕು.

    ADVERTISEMENT
  • ಅರ್ಜಿದಾರರು ಕಾರ್ಮಿಕರಾಗಿರಬೇಕು

  • ಅರ್ಜಿದಾರರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು

  • ಅರ್ಜಿದಾರರು ಕನಿಷ್ಠ 90 ದಿನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರಬೇಕು

ಕಟ್ಟಡ ನಿರ್ಮಾಣ ಕಾರ್ಮಿಕ ನೋಂದಣಿ ಪ್ರಕ್ರಿಯೆ

ಹಂತ 1: ಕಾರ್ಮಿಕರ ಕಲ್ಯಾಣ ಮಂಡಳಿಯ https://kbocwwb.karnataka.gov.in/login ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ನೋಂದಾಯಿಸಿ ಎಂಬ ಗುಂಡಿಯನ್ನು ಒತ್ತಿ

ಹಂತ 3: ‘ಹೊಸ ಕಾರ್ಮಿಕ ಕೆಲಸಗಾರರಾಗಿ ನೋಂದಾಯಿಸಿ‘ ಎಂಬುವುದನ್ನು ಆಯ್ಕೆ ಮಾಡಿ.

ಆಧಾರ್ ಸಂಖ್ಯೆಯನ್ನು ನಮೂದಿಸಿ.

ನಂತರ ನಿಮ್ಮ ಮೊಬೈಲ್ ಗೆ ಬರುವ ಓಟಿಪಿಯನ್ನು ನಮೂದಿಸಿ.

ಹಂತ 4: ‘ನೋಂದಣಿ‘ ಎಂಬ ಗುಂಡಿಯನ್ನು ಒತ್ತಿ.

ಹಂತ 5: ನೋಂದಣಿಯಲ್ಲಿ ಕೇಳಿದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಬಳಿಕ ಅರ್ಜಿ ಪೂರ್ಣಗೊಂಡ ನಂತರ "ಸಲ್ಲಿಸು" ಎಂಬುವುದನ್ನು ಒತ್ತಿ.

ಅಗತ್ಯವಿರುವ ದಾಖಲೆಗಳು

90 ದಿನಗಳ ಕೆಲಸದ ಉದ್ಯೋಗ ಪ್ರಮಾಣಪತ್ರ

ಆಧಾರ್ ಕಾರ್ಡ್

ಪಡಿತರ ಚೀಟಿ

ಗುರುತಿನ ಚೀಟಿ

ಆರ್ಥಿಕ ನೆರವು ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಹಂತ 1: ಕಾರ್ಮಿಕ ಕಲ್ಯಾಣ ಮಂಡಳಿಯ https://kbocwwb.karnataka.gov.in/login ವೆಬ್‌ಸೈಟ್‌ನಲ್ಲಿ ‘ಲಾಗಿನ್‘ ಗುಂಡಿಯನ್ನು ಒತ್ತಿ.

ಹಂತ 2: ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ನಮೂದಿಸಿ.

ಹಂತ 3: ಸ್ಕ್ರೀನ್ ಮೇಲೆ ಕಾಣುವ 'ಸ್ಕೀಮ್‌' ಎಂಬ ಗುಂಡಿಯನ್ನು ಒತ್ತಿ.

ಹಂತ 4: ಸಂಬಂಧಪಟ್ಟ ಯೋಜನೆಯನ್ನು ಆಯ್ಕೆ ಮಾಡಿ ಕೇಳಿದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ನಂತರ ಅಗತ್ಯವಿರುವ ದಾಖಲೆಗಳನ್ನು ನಮೂದಿಸಿ.

ಹಂತ 5: ನೀವು ನೀಡಿದ ದಾಖಲೆಗಳನ್ನು ಪರೀಶಿಲಿಸಿ, ಅರ್ಜಿ ಪೂರ್ಣಗೊಂಡ ಬಳಿಕ "ಸಲ್ಲಿಸು" ಎಂಬುವುದನ್ನು ಒತ್ತಿ.

ನೋಂದಣಿ ಕಾರ್ಮಿಕರಾಗಿ ಮುಂದುವರಿಯಲು..

ಹಂತ 1: ಕಲ್ಯಾಣ ಮಂಡಳಿಯ https://kbocwwb.karnataka.gov.in/login ವೆಬ್‌ಸೈಟ್‌ನಲ್ಲಿ ‘ಲಾಗಿನ್‘ ಗುಂಡಿಯನ್ನು ಒತ್ತಿ.

ಹಂತ 2: ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ನಮೂದಿಸಿ.

ಹಂತ 3: ಸ್ಕ್ರೀನ್ ಮೇಲೆ ಕಾಣುವ 'ರಿನಿವಲ್' ಅನ್ನು ಆಯ್ಕೆ ಮಾಡಿ. ಕೇಳಿದ ವಿವರಗಳನ್ನು ಭರ್ತಿ ಮಾಡಿ

ಹಂತ 4: ನೀವು ನೀಡಿದ ದಾಖಲೆಗಳನ್ನು ಪರೀಶಿಲಿಸಿ, ಅರ್ಜಿ ಪೂರ್ಣಗೊಂಡ ಬಳಿಕ "ಸಲ್ಲಿಸು" ಎಂಬುವುದನ್ನು ಒತ್ತಿ.

ಸೂಚನೆ: ಪ್ರತಿಯೊಬ್ಬ ಕಟ್ಟಡ ನಿರ್ಮಾಣ ಕಾರ್ಮಿಕನು ಪ್ರತಿ 3 ವರ್ಷಕೊಮ್ಮೆ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ತಮ್ಮ ನೋಂದಣಿಯನ್ನು ನವೀಕರಿಸಿರಬೇಕು.

ಯೋಜನೆಯನ್ನು ಪಡೆಯಲು ಅಗತ್ಯವಿರುವ ದಾಖಲೆಗಳು

ಕಾರ್ಮಿಕ ಇಲಾಖೆ ನೀಡುವ ಗುರುತಿನ ಚೀಟಿ

ಭಾವಚಿತ್ರ ಹಾಗೂ ಬ್ಯಾಂಕ್ ಖಾತೆ ವಿವರ

ಗೆಜೆಟೆಡ್ ಅಧಿಕಾರಿಯಿಂದ ಪಡೆದ ಮರಣ ಪತ್ರ

ಉದ್ಯೋಗ ಪ್ರಮಾಣ ಪತ್ರ

ಆಧಾರ್ ಕಾರ್ಡ್

ಪಡಿತರ ಚೀಟಿ

ನಾಮಿನಿಯ ಭಾವಚಿತ್ರ ಹಾಗೂ ಗುರುತಿನ ಚೀಟಿ

90 ದಿನಗಳ ಕೆಲಸದ ಉದ್ಯೋಗ ಪ್ರಮಾಣಪತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.