ADVERTISEMENT

ಪಾರಂಪರಿಕ ಕೃಷಿ ವಿಕಾಸ ಯೋಜನೆ: ಲಾಭ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2025, 7:28 IST
Last Updated 14 ಅಕ್ಟೋಬರ್ 2025, 7:28 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಸರ್ಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಾರಂಪರಿಕ ಕೃಷಿ ವಿಕಾಸ ಯೋಜನೆಯೂ ಒಂದು. ರೈತರ ಜೀವನ ಮಟ್ಟವನ್ನು ಸುಧಾರಿಸುವ ಹಾಗೂ ಪರಿಸರ ಸಮತೋಲನೆಯನ್ನು ಕಾ‍ಪಾಡುವ ಉದ್ದೇಶದಿಂದ ಈ ಯೋಜನೆಯನ್ನು 2015ರಲ್ಲಿ ಆರಂಭಿಸಲಾಯಿತು.

ಯೋಜನೆಯ ಉದ್ದೇಶಗಳೇನು ?

ADVERTISEMENT
  • ಮಣ್ಣಿನ ಆರೋಗ್ಯ  ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುವುದು.

  • ನೈಸರ್ಗಿಕ ಕೃಷಿ ಪದ್ಧತಿಯನ್ನು ಉತ್ತೇಜಿಸುವುದು.

  • ರಾಸಾಯನಿಕಗಳ ಅವಲಂಬನೆ ಕಡಿಮೆ ಮಾಡಿ, ನೈಸರ್ಗಿಕ ವಿಧಾನದ ಮೂಲಕ ಕೃಷಿ ಮಾಡುವುದನ್ನು ರೈತರಿಗೆ ತಿಳಿಸಿಕೊಡುವುದು. 

  • ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ಗಳಿಕೆ ಮಾಡುವುದು. 

  • ರಾಸಾಯನಿಕ  ರಹಿತ ಹಾಗೂ ಆರೋಗ್ಯಕರ ಆಹಾರದ ಉತ್ಪಾದನೆ ಮಾಡುವುದು. 

  • ರೈತ ಸಂಘಗಳನ್ನು ಬೆಂಬಲಿಸುವುದು.

  • ಮಾರುಕಟ್ಟೆಗಳೊಂದಿಗೆ ನೇರವಾಗಿ ರೈತರು ಸಂಪರ್ಕ ಸಾಧಿಸಲು ವೇದಿಕೆ ಕಲ್ಪಿಸುವುದು. 

 ಯೋಜನೆಯ ಪ್ರಯೋಜನಗಳು:

  • ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ರೈತರಿಗೆ 3 ವರ್ಷಕ್ಕೆ ಪ್ರತಿ ಹೆಕ್ಟೇರ್‌ಗೆ ₹31,500 ನೆರವು ದೊರೆಯಲಿದೆ. ಈ ಕೆಳಗಿನಂತೆ ಹಣವನ್ನು ವಿಂಗಡಣೆ ಮಾಡಿದೆ.

  • ಕೃಷಿ ಭೂಮಿಗೆ ಬೇಕಾದ ಸಾವಯವ ಪರಿಕರಗಳಿಗಾಗಿ ₹15,000  ಸಿಗಲಿದೆ. 

  • ಮಾರುಕಟ್ಟೆ, ಪ್ಯಾಕೇಜಿಂಗ್ ಹಾಗೂ ಬ್ರ್ಯಾಂಡಿಂಗ್‌ಗಾಗಿ ₹4,500 ಸಿಗಲಿದೆ.

  • ಪ್ರಮಾಣೀಕರಣಕ್ಕಾಗಿ ₹3,000 ಸಿಗಲಿದೆ.

  • ರೈತರಿಗೆ ತರಬೇತಿ ಹಾಗೂ ಅವರ ಸಾಮರ್ಥ್ಯ ವೃದ್ಧಿಗಾಗಿ ₹9,000 ಸಿಗಲಿದೆ.‌

 ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಅನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. https://jaivikkheti.in

ಅಗತ್ಯವಿರುವ ದಾಖಲೆಗಳು:

  • ಭೂ ದಾಖಲೆಗಳು

  • ಆಧಾರ್ ಸಂಖ್ಯೆ

  • ಜಾತಿ ಪ್ರಮಾಣಪತ್ರ (ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಗೆ ಮಾತ್ರ)

  • ಬ್ಯಾಂಕ್ ವಿವರಗಳು

  • ಡಿಪಿಆರ್

  • ಫೋನ್ ವಿವರಗಳು

  • ಛಾಯಾಚಿತ್ರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.