ADVERTISEMENT

ಪ್ರಧಾನಮಂತ್ರಿ ಮುದ್ರಾ ಯೋಜನೆ: ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಅಕ್ಟೋಬರ್ 2025, 10:38 IST
Last Updated 29 ಅಕ್ಟೋಬರ್ 2025, 10:38 IST
<div class="paragraphs"><p>ಪ್ರಜಾವಾಣಿ ಚಿತ್ರ</p></div>

ಪ್ರಜಾವಾಣಿ ಚಿತ್ರ

   

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಕೂಡ ಒಂದಾಗಿದೆ. ಇದು ಕೃಷಿ, ವ್ಯಾಪಾರ ಹಾಗೂ ಸೇವಾ ವಲಯಗಳಲ್ಲಿ ಉದ್ಯಮ ಆರಂಭಿಸುವವರಿಗೆ ₹20 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸುವ ಯೋಜನೆಯಾಗಿದೆ. ಈ ಯೋಜನೆಯ ಲಾಭ ಪಡೆಯಲು ಇರಬೇಕಾದ ಅರ್ಹತೆಗಳೇನು? ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ? ಎಂಬುದನ್ನು ನೋಡೋಣ.

ಮುದ್ರಾ ಯೋಜನೆಯಡಿ ಯಾವೆಲ್ಲ ಬ್ಯಾಂಕುಗಳಲ್ಲಿ ಸಾಲ ಪಡೆಯಬಹುದು?

ADVERTISEMENT
  • ಸಾರ್ವಜನಿಕ ವಲಯದ ಬ್ಯಾಂಕುಗಳು

  • ಖಾಸಗಿ ವಲಯದ ಬ್ಯಾಂಕುಗಳು

  • ರಾಜ್ಯದ ಸಹಕಾರಿ ಬ್ಯಾಂಕುಗಳು

  • ಪ್ರಾದೇಶಿಕ ವಲಯದ ಗ್ರಾಮೀಣ ಬ್ಯಾಂಕುಗಳು

  • ಸಣ್ಣ ಹಣಕಾಸು ಸಂಸ್ಥೆ (MFI)

  • ಬ್ಯಾಂಕೇತರ ಹಣಕಾಸು ಕಂಪನಿ (NBFC)

  • ಸಣ್ಣ ಹಣಕಾಸು ಬ್ಯಾಂಕುಗಳು (SFB)

ಪ್ರಧಾನಮಂತ್ರಿ ಮುದ್ರಾ ಯೋಜನೆಯಲ್ಲಿ ಸಾಲ ಸೌಲಭ್ಯವನ್ನು ‘ಶಿಶು’, ‘ಕಿಶೋರ್’, ‘ತರುಣ್’ ಮತ್ತು ‘ತರುಣ್ ಪ್ಲಸ್’ ಎಂದು ನಾಲ್ಕು ವರ್ಗಗಳಲ್ಲಿ ವರ್ಗೀಕರಿಸಲಾಗಿದೆ.

  • ಶಿಶು: ಸಾಲದ ಮೊತ್ತ ₹50,000 ವರೆಗೆ ಸಿಗಲಿದೆ.

  • ಕಿಶೋರ್: ಸಾಲದ ಮೊತ್ತ ₹50,000 ದಿಂದ ₹5 ಲಕ್ಷದವರೆಗೆ ಸಿಗಲಿದೆ. 

  • ತರುಣ್:  ಸಾಲದ ಮೊತ್ತ ₹5 ಲಕ್ಷ ದಿಂದ ₹10 ಲಕ್ಷಗಳ ವರೆಗೆ ಸಿಗಲಿದೆ.

  • ತರುಣ್ ಪ್ಲಸ್: ‘ತರುಣ್’ ವರ್ಗದಲ್ಲಿ ಪಡೆದ ಹಿಂದಿನ ಸಾಲವನ್ನು ಯಶಸ್ವಿಯಾಗಿ ಮರುಪಾವತಿಸಿದ ಉದ್ಯಮಿಗಳಿಗೆ ₹20 ಲಕ್ಷದವರೆಗೆ ಸಾಲ ಸಿಗಲಿದೆ.

ಅಗತ್ಯ ದಾಖಲೆಗಳು:

ಶಿಶು ಸಾಲ ಪಡೆಯಲು

  • ಗುರುತಿನ ಪುರಾವೆಗೆ ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಥವಾ ಸ್ವಯಂ-ದೃಢೀಕರಣ ಪ್ರತ.

  • ನಿವಾಸದ ಪುರಾವೆಗಳಾದ ಇತ್ತೀಚಿನ ದೂರವಾಣಿ ಬಿಲ್, ವಿದ್ಯುತ್ ಬಿಲ್, ಆಸ್ತಿ ತೆರಿಗೆ ರಶೀದಿ (2 ತಿಂಗಳಿಗಿಂತ ಹಳೆಯದಲ್ಲ), ಬ್ಯಾಂಕ್‌ ಖಾತೆ, ನಿವಾಸ ಪ್ರಮಾಣಪತ್ರ ಅಥವಾ ಸರ್ಕಾರದಿಂದ ನೀಡಲಾದ ಪ್ರಮಾಣಪತ್ರ.

  • ಅರ್ಜಿದಾರರ ಇತ್ತೀಚಿನ ಭಾವಚಿತ್ರ.

  • ಖರೀದಿ ಮಾಡಬೇಕಿರುವ ಯಂತ್ರೋಪಕರಣ ಅಥವಾ ಇತರೆ ವಸ್ತುಗಳ ದರಪಟ್ಟಿ.

  • ಯಂತ್ರ ಪೂರೈಕೆದಾರರ ಹೆಸರು, ಯಂತ್ರೋಪಕರಣಗಳ ವಿವರಗಳು, ಬೆಲೆ ಅಥವಾ ಖರೀದಿಸಬೇಕಾದ ವಸ್ತುಗಳು.

  • ವ್ಯವಹಾರ ಉದ್ಯಮದ ಗುರುತಿನ ಪುರಾವೆ, ವಿಳಾಸಕ್ಕೆ ಸಂಬಂಧಿತ ಪರವಾನಿಗೆ ಅಥವಾ ನೋಂದಣಿ ಪ್ರಮಾಣಪತ್ರ. 

ಕಿಶೋ‌ರ್, ತರುಣ್ ಹಾಗೂ  ತರುಣ್ ಪ್ಲಸ್ ಸಾಲಕ್ಕೆ ಬೇಕಾದ ದಾಖಲೆಗಳು:

  • ಗುರುತಿನ ಪುರಾವೆ (ಶಿಶು ಸಾಲಕ್ಕೆ ಬೇಕಾದ ದಾಖಲೆಗಳು)

  • ನಿವಾಸದ ಪುರಾವೆ (ಶಿಶು ಸಾಲಕ್ಕೆ ಬೇಕಾದ ದಾಖಲೆಗಳು)

  • ಅರ್ಜಿದಾರರ ಭಾವಚಿತ್ರ.

  • ಉದ್ಯಮದ ಗುರುತಿನ ಪುರಾವೆ, ಸಂಬಂಧಿತ ಪರವಾನಗಿ ಹಾಗೂ ನೋಂದಣಿ ಪ್ರಮಾಣಪತ್ರಗಳು. 

  • ಫಲಾನುಭವಿಗಳು ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಸುಸ್ತಿದಾರರಾಗಿರಬಾರದು.

  • ಬ್ಯಾಂಕ್‌ಗಳಲ್ಲಿ ಮರುಪಾವತಿಸದ ಸಾಲ ಇರಬಾರದು. 

ಸಾಲದ ಮರು ಪಾವತಿ ಹೇಗೆ?

ಸಾಲ ನೀಡುವ ಸಂಸ್ಥೆಗಳು ಕಾಲಕಾಲಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿ ಅನ್ವಯ ಬಡ್ಡಿದರ ಘೋಷಿಸುತ್ತವೆ. ಅದರ ಆಧಾರದ ಮೇಲೆ ಅನ್ವಯವಾಗುವ ಬಡ್ಡಿದರವನ್ನು ವಿಧಿಸಲಾಗುತ್ತದೆ. 

ಅರ್ಜಿ ಸಲ್ಲಿಸುವುದು ಹೇಗೆ?

ಯೋಜನೆಯ ಅಧಿಕೃತ ಅಂತರ್ಜಾಲ ತಾಣಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹದು. https://www.mudra.org.in/

MudraLoan-SalientFeatures-English (2).pdf
ಓಪನ್ ಮಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.