ADVERTISEMENT

ಕಡಿಮೆ ತಿನ್ನಿ, ಜಾಸ್ತಿ ಬದುಕಿ!

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2018, 19:30 IST
Last Updated 8 ಏಪ್ರಿಲ್ 2018, 19:30 IST
ಕಡಿಮೆ ತಿನ್ನಿ, ಜಾಸ್ತಿ ಬದುಕಿ!
ಕಡಿಮೆ ತಿನ್ನಿ, ಜಾಸ್ತಿ ಬದುಕಿ!   

‘ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬುದು ಹಳೇ ಗಾದೆ. ಗಾದೆ ಹಳೆಯದಾದರೂ ಅದರಲ್ಲಿನ ತತ್ವ ಮಾತ್ರ ಇಂದಿಗೂ ಪ್ರಸ್ತುತ. ರೋಗಬಾಧೆಯಿಲ್ಲದ ಸಂತಸದ ಬದುಕು ನಿಮ್ಮದಾಗಬೇಕಿದ್ದರೆ ಕಡಿಮೆ ತಿನ್ನಿ ಅಂತ ಹೇಳಿದ್ದಾರೆ ಅಮೆರಿಕದ ಸಂಶೋಧಕರು.

ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಜೀವಿತಾವಧಿಯನ್ನು ಲೆಕ್ಕ ಹಾಕುತ್ತಿದ್ದಾಗ ಪ್ರಾಣಿಗಳು ಕಡಿಮೆ ಆಹಾರ ಸೇವಿಸಿ ದೀರ್ಘಕಾಲ ಜೀವಿಸಿದ್ದ ಸಂಗತಿ ಸಂಶೋಧನೆಯಿಂದ ತಿಳಿದು ಬಂದಿದೆ.

40 ವರ್ಷದೊಳಗಿನ ಆಯ್ದ ಕೆಲವರಿಗೆ ನಿತ್ಯವೂ ಸೇವಿಸುತ್ತಿದ್ದ ಆಹಾರದ ಪ್ರಮಾಣಕ್ಕಿಂತ ಶೇ 15ರಷ್ಟು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವಂತೆ ಸೂಚಿಸಲಾಗಿತ್ತು.
ಎರಡು ವರ್ಷ ಕಡಿಮೆ ಆಹಾರ ಸೇವಿಸಿದ್ದ ಈ ಜನರು ಹೆಚ್ಚು ಕ್ರಿಯಾಶೀಲರಾಗಿದ್ದು ಸಂಶೋಧನೆಯಲ್ಲಿ ಕಂಡು ಬಂದಿತು.

ADVERTISEMENT

ಹೆಚ್ಚು ಕ್ಯಾಲೊರಿಯುಕ್ತ ಆಹಾರ ಸೇವಿಸಿದಾಗ ಜೀರ್ಣಕ್ರಿಯೆಗೆ ದೇಹ ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಆದರೆ, ಕಡಿಮೆ ಕ್ಯಾಲೊರಿ ಆಹಾರ ಸೇವಿಸಿದಾಗ ದೇಹ ದಣಿಯದೇ ಉಲ್ಲಾಸಕರವಾಗಿ ಇರುತ್ತದೆ. ಇದು ತ್ವಚೆಯ ಮೇಲೂ ಪರಿಣಾಮ ಬೀರುತ್ತದೆ. ಆಗ ದೇಹ ಬೇಗ ವಯಸ್ಸಾಗುವುದನ್ನು ತಡೆಯಬಹುದು ಎಂದು ಸಂಶೋಧಕರು ಹೇಳಿದ್ದಾರೆ. ‘ಕಡಿಮೆ ತಿಂದರೆ ಜಾಸ್ತಿ ಅವಧಿ ತನಕ ಬದುಕುಬಹುದು’ ಎಂದು ಸಂಶೋಧನೆಯ ಅಂತಿಮ ಫಲಿತಾಂಶದಲ್ಲಿ ಕಂಡುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.