ADVERTISEMENT

ಕಬ್ಬು ತಿಂದು ನಿದ್ದೆ ಮಾಡಿ...

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST
ಕಬ್ಬು ತಿಂದು ನಿದ್ದೆ ಮಾಡಿ...
ಕಬ್ಬು ತಿಂದು ನಿದ್ದೆ ಮಾಡಿ...   

ನಿದ್ದೆಯ ಮಹತ್ವ ನಿದ್ದೆ ಬಾರದವರಿಗೇ ಗೊತ್ತು. ನಿದ್ದೆ ಮಾತ್ರೆ ತೆಗೆದುಕೊಂಡಾದರೂ ಕಣ್ತುಂಬಾ ನಿದ್ದೆ ಮಾಡಬೇಕು ಎಂದುಕೊಳ್ಳುವವರೂ ಇದ್ದಾರೆ. ನಿಮಗೂ ಅಂತಹ ಸಮಸ್ಯೆ ಎದುರಾಗಿದ್ದರೆ ಚಿಂತೆ ಬಿಟ್ಟುಬಿಡಿ. ಮನದಣಿಯೆ ಕಬ್ಬು ತಿಂದು ನೋಡಿ. ಬೆಳಕು ಹರಿದರೂ ಗೋಚರವೇ ಇಲ್ಲದಷ್ಟು ನಿದ್ದೆ ಮಾಡಿಬಿಡುತ್ತೀರಿ!

ನಿದ್ರಾಹೀನತೆಯ ಪರಿಣಾಮವಾಗಿ ಬೊಜ್ಜು, ಹೃದಯಸಂಬಂಧಿ ಸಮಸ್ಯೆ, ಖಿನ್ನತೆಯಂತಹ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಇದಕ್ಕೆ ಮಾತ್ರೆಗಳ ಸೇವನೆಗಿಂತ ಆಹಾರ ಸಾಮಗ್ರಿಗಳಲ್ಲೇ ಔಷಧಿ ಕಂಡುಕೊಳ್ಳುವುದು ಸೂಕ್ತ ಎಂದು ಜಪಾನ್‌ನ ‌ಸಂಶೋಧಕರು ಹೇಳಿದ್ದಾರೆ.

ಕಬ್ಬು, ಅಕ್ಕಿಯ ತೌಡು, ಗೋಧಿಯ ಎಣ್ಣೆ ಮತ್ತು ಜೇನಿನ ಮೇಣ ನಿದ್ರಾಹೀನತೆಗೆ ಉತ್ತಮ ಔಷಧಿಯಾಗಬಲ್ಲದು ಎಂಬುದು ಅವರ ವಾದ. ಒತ್ತಡ ನಿವಾರಿಸಿ ಮನಸ್ಸನ್ನು ಶಾಂತಗೊಳಿಸಿ ನಿದ್ರೆ ಮಾಡಲು ಅನುವು ಮಾಡಿಕೊಡುವ octacosanol ಒಕ್ಟಾಕೊಸಾನೊಲ್‌ ಎಂಬ ಅಂಶ ಈ ಪದಾರ್ಥಗಳಲ್ಲಿ ಅಧಿಕ ಪ್ರಮಾಣದಲ್ಲಿರುವ ಕಾರಣ ಇವು ನಿದ್ರಾಹೀನತೆಯನ್ನು ನಿವಾರಿಸುತ್ತವೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.