ADVERTISEMENT

ಕೂದಲು ಕತ್ತರಿಸೋಕೆ ಸೆಕೆಂಡ್‌ ಸಾಕು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 19:30 IST
Last Updated 27 ಅಕ್ಟೋಬರ್ 2017, 19:30 IST
ಕೂದಲು ಕತ್ತರಿಸೋಕೆ ಸೆಕೆಂಡ್‌ ಸಾಕು
ಕೂದಲು ಕತ್ತರಿಸೋಕೆ ಸೆಕೆಂಡ್‌ ಸಾಕು   

ಗ್ರೀಸ್ ಮೂಲದ ಕೇಶ ವಿನ್ಯಾಸಕ ಕಾನ್‌ಸ್ಟಾಂಟಿನೋಸ್ ಕೌಟೂಪಿಸ್ ಎಂಬುವವರು 47.17 ಸೆಕೆಂಡ್‌ನಲ್ಲಿ ಕೂದಲು ಕತ್ತರಿಸಿ ಗಿನ್ನಿಸ್ ದಾಖಲೆ ಮಾಡಿದ್ದಾರೆ. ತಮ್ಮ ಪ್ರತಿಭೆ ತೋರಿಸಲು ಇತ್ತೀಚೆಗೆ ಕೂದಲು ಕತ್ತರಿಸುವ ಷೋವನ್ನು ಆಯೋಜಿಸಿದ್ದರು. ಇವರ ವೇಗವನ್ನು ನೋಡಿ ನೆರದಿದ್ದವರು ಆಶ್ಚರ್ಯಗೊಂಡರು. ಇಂದಿನ ಟ್ರೆಂಡ್ ಆಗಿರುವ ಕುತ್ತಿಗೆಯ ಹಿಂಭಾಗಕ್ಕೆ ಮೊನಚಾದ ಕೇಶವಿನ್ಯಾಸವನ್ನು ಇವರು ಮಾಡಿದರು.

ಟ್ರಿಮ್ಮರ್‌ ಮೂಲಕ ನೆತ್ತಿಯ ಭಾಗದಲ್ಲಿ ಕೂದಲನ್ನು ಕತ್ತರಿಸಿ, ಕಿವಿ ಹಾಗೂ ಕತ್ತಿನ ಮೇಲೆ ಗಿಡ್ಡವಾಗಿಸಿದ್ದಾರೆ. ಈ ವಿನ್ಯಾಸ ಮಾಡಲು ಕತ್ತರಿ ಬಳಸಿದರೆ ಅರ್ಧ ಗಂಟೆಯಾದರೂ ಬೇಕಾಗುತ್ತದೆ. ಕೇಶ ವಿನ್ಯಾಸಕ ಕೌಟೂಪಿಸ್ ಟ್ರಿಮ್ಮರ್ ಮೂಲಕ ಅತಿ ವೇಗದಲ್ಲಿ ಕೂದಲನ್ನು ಕತ್ತರಿಸಿದ್ದಾರೆ.

ಫ್ಯಾಷನ್ ಷೋಗಳಲ್ಲಿ ಭಾಗವಹಿಸುವ ರೂಪದರ್ಶಿಗಳಿಗೆ ಹಾಗೂ ಸಿನಿಮಾ ನಟರಿಗೆ ಈ ಸೌಲಭ್ಯ ಹೆಚ್ಚು ಉಪಯೋಗವಾಲಿದೆಯಂತೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.