ADVERTISEMENT

ಚುಟುಕು ಚುರುಕು

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 19:59 IST
Last Updated 14 ಜೂನ್ 2013, 19:59 IST

ಆಲ್ಕೋಹಾಲ್‌ಯುಕ್ತ ಲೋಷನ್ ಹಾಗೂ ಟೋನರ್‌ಗಳನ್ನು ಬಳಸುವುದರಿಂದ ಕೆಲವರಿಗೆ ತುರಿಕೆ ಮತ್ತು ಕೆಂಪು ಬೊಕ್ಕೆಗಳು ಉಂಟಾಗುತ್ತವೆ. ಅಂಥವರು ಸೌಂದರ್ಯ ಪ್ರಸಾಧನಗಳನ್ನು ಖರೀದಿಸುವಾಗ ಅದು ಆಲ್ಕೋಹಾಲ್ ಮುಕ್ತವಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.


                                                                                                ***

ಸನ್‌ಸ್ಕ್ರೀನ್ ಲೋಷನ್ ಬಳಸುವವರು ಅದರ ಉತ್ಪಾದನಾ ದಿನಾಂಕವನ್ನು ನೋಡಿ ಖರೀದಿಸಬೇಕು. ಹಳೆಯ ಸನ್‌ಸ್ಕ್ರೀನ್ ಲೋಷನ್ ಬಳಸುವುದರಿಂದ ಅಲರ್ಜಿ ಉಂಟಾಗುವ ಸಂಭವ ಇರುತ್ತದೆ.

ADVERTISEMENT


                                                                         ***

ಯಾವುದೇ ಲೋಷನ್, ಸ್ಪ್ರೇ ಮತ್ತು ಡಿಯೋಡರೆಂಟ್‌ಗಳನ್ನು ಬಳಸುವ ಮೊದಲು ಅದು ನಮ್ಮ ಚರ್ಮಕ್ಕೆ ಒಗ್ಗುತ್ತದೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು `ಪ್ಯಾಚ್ ಟೆಸ್ಟ್' ಮಾಡಿಕೊಳ್ಳಬೇಕು. ಏಕೆಂದರೆ ಎಲ್ಲ ಲೋಷನ್ ಹಾಗೂ ಡಿಯೋಡರೆಂಟ್‌ಗಳು ಎಲ್ಲ ಬಗೆಯ ಚರ್ಮಗಳಿಗೂ ಹೊಂದಿಕೆ ಆಗಲಾರವು.

                                                                                                ***

ಬೆವರುವುದನ್ನು ತಪ್ಪಿಸಲು ಕೆಲವರು ಮುಖಕ್ಕೆ ಫೌಂಡೇಶನ್ ಬಳಸುತ್ತಾರೆ. ಇದು ತಪ್ಪು. ಏಕೆಂದರೆ ಬೆವರಿನೊಂದಿಗೆ ಶರೀರದಿಂದ ಹೊರಹೋಗಬೇಕಾದ ಕೊಳೆ ಶರೀರದಲ್ಲೇ ಉಳಿದು, ವಿವಿಧ ಬಗೆಯ ಚರ್ಮ ರೋಗಕ್ಕೆ ಕಾರಣವಾಗುತ್ತದೆ. ಆದ್ದರಿಂದ ಯಾವುದೇ ಬಗೆಯ ಬೆವರು ನಿರೋಧಕ ಲೋಷನ್‌ಗಳನ್ನು ಶರೀರಕ್ಕಾಗಲೀ, ಮುಖಕ್ಕಾಗಲೀ ಬಳಸಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.