ADVERTISEMENT

ತಲೆ ಹೊಟ್ಟು ನಿಯಂತ್ರಿಸಲು...

ಪ್ರಜಾವಾಣಿ ವಿಶೇಷ
Published 25 ಅಕ್ಟೋಬರ್ 2015, 19:49 IST
Last Updated 25 ಅಕ್ಟೋಬರ್ 2015, 19:49 IST

ಇಂದಿನ ವೇಗದ ಜೀವನ ಶೈಲಿಯಲ್ಲಿ ನಮ್ಮನ್ನು ನಾವೇ ಮರೆಯುತ್ತೇವೆ. ಹಾಗಾಗಿ ಆರೋಗ್ಯದ ಬಗೆಗೆ ನಿಗಾವಹಿಸಲೂ ಸಮಯವಿರುವುದಿಲ್ಲ. ಇರುವುದರಲ್ಲೇ ಸಮಯ ಮಾಡಿಕೊಂಡು ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಅದರಲ್ಲೂ ತಲೆಹೊಟ್ಟು ಸಮಸ್ಯೆ ಹಲವರನ್ನು ಭಾದಿಸುತ್ತದೆ. ನಾವು ಸೇವಿಸುವ ಆಹಾರದಲ್ಲಿ ವಿಟಮಿನ್‌ ‘ಬಿ’, ‘ಸಿ’ ಹಾಗೂ ‘ಇ’ ಮತ್ತು ಶರ್ಕರಪಿಷ್ಟ ಇದ್ದರೆ ತಲೆಹೊಟ್ಟನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಬಹುದು.

ತಲೆ ಹೊಟ್ಟು ನಿವಾರಣೆಗೆ ಕೆಲ ಸಲಹೆಗಳು
*ಬೆಚ್ಚಗಿನ ಎಣ್ಣೆಯ ಉಪಚಾರ ತಲೆ ಹೊಟ್ಟನ್ನು ನಿವಾರಿಸಲು ಅತ್ಯಂತ ಸರಳ ಉಪಾಯವಾಗಿದೆ. ಆಲೀವ್‌ ಆಯಿಲ್‌, ಆ್ಯಲೋ ಅಥವಾ ಬಾದಾಮಿ ಎಣ್ಣೆಯನ್ನು ಬಿಸಿ ಮಾಡಿ ತಲೆಗೆ ಮಸಾಜ್‌ ಮಾಡಿಕೊಂಡು ನಂತರ ಬಿಸಿ ನೀರಿನಲ್ಲಿ ಅದ್ದಿದ ಟವಲ್‌ಅನ್ನು ತಲೆಗೆ ಸುತ್ತಿ ನಂತರ ತೊಳೆದುಕೊಳ್ಳಬೇಕು. ಅಥವಾ ಇದಕ್ಕೆ ಪರ್ಯಾಯವಾಗಿ ಬಿಸಿ ಎಣ್ಣೆಯನ್ನು ರಾತ್ರಿಯೇ ತಲೆಗೆ ಹಚ್ಚಿಕೊಂಡು ಬೆಳಿಗ್ಗೆ ಒಡೆದ ಹಾಲಿನ ರಸದಿಂದ ಕೂದಲನ್ನು ತೊಳೆದುಕೊಳ್ಳಬೇಕು.

*ವಾರಕ್ಕೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿದ ಹಸಿಮೊಟ್ಟೆ (ಹಳದಿ) ಲೋಳೆಯನ್ನು ತಲೆಗೆ ಹಚ್ಚಿಕೊಂಡು ಒಂದು ಗಂಟೆಯ ನಂತರ ಕೂದಲು ತೊಳೆದುಕೊಂಡರೆ ತಲೆ ಹೊಟ್ಟು ನಿಯಂತ್ರಣ ವಾಗುವುದಲ್ಲದೆ ಕೂದಲು ಮೃದುವಾಗಿ ಹೊಳಪು ಬರುತ್ತದೆ.

*ಸೇಬಿನ ವಿನೆಗರ್‌ಅನ್ನು ನೀರಿನಲ್ಲಿ ಬೆರೆಸಿ ಪೂರ್ತಿಯಾಗಿ ಹಚ್ಚಿಕೊಳ್ಳಬೇಕು. ರಾತ್ರಿಯಿಡೀ ಹಾಗೇ ಬಿಟ್ಟು ಬೆಳಿಗ್ಗೆ ಎಗ್‌ ಶ್ಯಾಂಪೂ ಬಳಸಿ ತೊಳೆದುಕೊಳ್ಳಬೇಕು.

*ರೋಸ್‌ ಮೇರಿ ಗಿಡದ ಎಲೆಗಳನ್ನು ಚೆನ್ನಾಗಿ ಅರೆದು ತಲೆ ಬುರುಡೆಗೆ ಲೇಪನದಂತೆ ಹಚ್ಚಿಕೊಂಡರೆ ಪರಿಣಾಮಕಾರಿಯಾಗಿ ತಲೆಹೊಟ್ಟು ನಿವಾರಣೆಯಾಗುತ್ತದೆ.

*ನಾಲ್ಕು ಟೇಬಲ್‌ ಸ್ಪೂನ್‌ ಒಡೆದ ಹಾಲಿನ ರಸ, ನಾಲ್ಕು ಟೇಬಲ್‌ ಸ್ಪೂನ್‌ ಕರ್ಪೂರ ಮಿಶ್ರಣ ನೀರನ್ನು  ಬೆರೆಸಿ ತಲೆಗೆ ಹಚ್ಚಿಕೊಂಡು ಮೂರು ಗಂಟೆಗಳ ನಂತರ ತೊಳೆದುಕೊಳ್ಳಬೇಕು.

*ತೆಂಗಿನ ಹಾಲಿಗೆ ಬಿಸಿ ನೀರು ಮತ್ತು ಲಿಂಬೆರಸ ಬಳಸಿ ಈ ಮಿಶ್ರಣವನ್ನು ತಲೆಬುರುಡೆಗೆ ಬಳಿದುಕೊಳ್ಳಬೇಕು. ಅರ್ಧಗಂಟೆ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು.

*ತಾಜಾ ಮೆಂತ್ಯದ ಸೊಪ್ಪನ್ನು ಅರೆದು ಪೇಸ್ಟ್‌ ತಯಾರಿಸಿ ತಲೆಗೆ ಹಚ್ಚಿಕೊಂಡು 15 ನಿಮಿಷಗಳ ನಂತರ ತೊಳೆದುಕೊಳ್ಳಬೇಕು.

*ತಿಂಗಳಿಗೊಮ್ಮೆ ದಂಟಿನ ಸೊಪ್ಪಿನ ಎಲೆಯನ್ನು ಚೆನ್ನಾಗಿ ಅರೆದು ತಲೆಗೆ ಹಚ್ಚಿಕೊಂಡು ಒಂದು ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಕೂದಲನ್ನು ತೊಳೆದುಕೊಳ್ಳುವುದರಿಂದ ತಲೆ ಹೊಟ್ಟು ನಿಯಂತ್ರಣವಾಗುತ್ತದಲ್ಲದೇ ಸೊಂಪಾಗಿ ಬೆಳೆಯುತ್ತವೆ.

*ಮೊಸರನ್ನು ತಿಂಗಳಿಗೊಮ್ಮೆ ತಲೆಗೆ ಹಚ್ಚುವುದ ರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

*ಆದಷ್ಟೂ ತಲೆ ಸ್ನಾನ ಮಾಡುವಾಗ ಸೀಗೆಕಾಯಿ ಪುಡಿಯನ್ನು ಬಳಸುವುದರಿಂದ ತಲೆಹೊಟ್ಟು ಬರುವುದನ್ನು ನಿಯಂತ್ರಿಸಬಹುದು.

*ವಾರಕ್ಕೊಂದು ಬಾರಿ ಲೋಳೆರಸವನ್ನು ತಲೆಗೆ ಹಚ್ಚಿ ಶ್ಯಾಂಪೂ ಬಳಸದೇ ತಲೆ ಸ್ನಾನ ಮಾಡುವುದರಿಂದಲೂ ತಲೆ ಹೊಟ್ಟು ನಿಯಂತ್ರಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.