ADVERTISEMENT

ನಕಲು ಮಾಡಿದರೆ 7ವರ್ಷ ಜೈಲು ಶಿಕ್ಷೆ!

ಪೃಥ್ವಿರಾಜ್ ಎಂ ಎಚ್
Published 17 ಜೂನ್ 2018, 14:45 IST
Last Updated 17 ಜೂನ್ 2018, 14:45 IST
ನಕಲು ಮಾಡಿದರೆ 7ವರ್ಷ ಜೈಲು ಶಿಕ್ಷೆ!
ನಕಲು ಮಾಡಿದರೆ 7ವರ್ಷ ಜೈಲು ಶಿಕ್ಷೆ!   

ವಿಶ್ವದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಯಾವುದು ಎಂದ ಕೂಡಲೇ, ನಮ್ಮ ನೆರೆಯ ರಾಷ್ಟ್ರ ಚೀನಾ ಎಂದು ಥಟ್‌ ಎಂದು ಉತ್ತರಿಸುತ್ತೇವೆ. ಇದು ವಿಶ್ವದ ದೊಡ್ಡ ದೇಶಗಳಲ್ಲಿ ಮತ್ತು ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿದೆ. ‘ಚೀನಾ’ ಅಥವಾ ‘ಚೈನಾ’ ಎಂಬ ಪದವು ‘Qin’ ಎಂಬ ರಾಜವಂಶದ ಹೆಸರಿನಿಂದ ಬಂದಿದೆ. ಇದನ್ನು ಚಿನ್ ಎಂದು ಉಚ್ಚರಿಸಲಾಗುತ್ತದೆ.

ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಇಲ್ಲಿಯ ಶಿಕ್ಷಣ ವಿಧಾನ ಕಠಿಣ ಎನಿಸುತ್ತದೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ವೊಕೇಷನಲ್ ಮತ್ತು ಟೆರಿಟರಿ ಎಂಬ ಐದು ಹಂತಗಳಲ್ಲಿ ಕಲಿಯಬೇಕಾಗುತ್ತದೆ. ಮಾಂಡರಿನ್ ಭಾಷೆಯಲ್ಲಿ ಶಿಕ್ಷಣ ಕಲಿಸಲಾಗುತ್ತದೆ. ಎಲ್ಲ ಹಂತಗಳಲ್ಲೂ ಮಾಂಡರಿನ್ ಮತ್ತು ಗಣಿತ ಕಲಿಯುವುದು ಕಡ್ಡಾಯ.

ಬೋಧನಾ ಅವಧಿಯೂ ಹೆಚ್ಚಾಗಿರುತ್ತದೆ. ಹೆಚ್ಚು ವಿಷಯಗಳನ್ನು ಕಲಿಯಬೇಕಾಗುತ್ತದೆ. ಪರೀಕ್ಷೆಗಳಲ್ಲಿ ನಕಲು ಮಾಡುವಾಗ ಮೇಲ್ವಿಚಾರಕರ ಕೈಗೆ ಸಿಕ್ಕರೆ ಸುಮಾರು ಏಳು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಲಾಗಿದೆ. ಈಚೆಗಷ್ಟೇ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಲ್ಲಿ ನಕಲು ಮಾಡಿದ ವಿದ್ಯಾರ್ಥಿಯನ್ನು ಹಿಡಿದು ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ADVERTISEMENT

ಚೀನಾ ದೇಶದ ಕೆಲ ವಿಶೇಷಗಳು ಹೀಗಿವೆ:

* ಚೀನಿಯರು ಕೆಂಪು ಬಣ್ಣವನ್ನು ಸಂತೋಷದ ಪ್ರತೀಕವಾಗಿ ಭಾವಿಸುತ್ತಾರೆ. ಹೀಗಾಗಿ ವಿವಿಧ ಹಬ್ಬಗಳಲ್ಲಿ, ಸಭೆ ಸಮಾರಂಭಗಳಲ್ಲಿ ಕೆಂಪು ಬಣ್ಣ ಎದ್ದು ಕಾಣುವಂತೆ ಮನೆಗಳನ್ನು ಅಲಂಕಾರ ಮಾಡಿರುತ್ತಾರೆ.

* ಫೇಸ್‌ಬುಕ್‌, ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಂನಂತ ಸಾಮಾಜಿಕ ಜಾಲತಾಣಗಳ ಮೇಲೆ 2009ರವರೆಗೆ ನಿಷೇಧ ಹೇರಲಾಗಿತ್ತು. ನಂತರ ನಿಯಮ ಸಡಿಲಿಸಿದರೂ ಇಲ್ಲಿ ಫೇಸ್‌ಬುಕ್, ಟ್ವಿಟರ್‌ ಯಾರೂ ಬಳಸುವುದಿಲ್ಲ. ಆ ದೇಶದವರೇ ಕೆಲ ಸಾಮಾಜಿಕ ಜಾಲತಾಣಗಳ ತಂತ್ರಾಂಶ ಅಭಿವೃದ್ಧಿಪಡಿಸಿದ್ದಾರೆ.

* ವಿಶ್ವದ ಶೇ 70ರಷ್ಟು ಆಟಿಕೆಗಳು ಈ ದೇಶದಲ್ಲೇ ತಯಾರಾಗುತ್ತವೆ.

* ವಸ್ತು ಮತ್ತು ಉತ್ಪನ್ನಗಳು ಅತೀ ಹೆಚ್ಚು ಪ್ರಮಾಣದಲ್ಲಿ ರಫ್ತು ಮಾಡುವ ದೇಶಗಳಲ್ಲಿ ಮೊದಲ ಸ್ಥಾನದಲ್ಲಿದೆ. ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ.

* ಇತರೆ ದೇಶಗಳ ನಗರಗಳಿಗೆ ಹೋಲಿಸಿಕೊಂಡರೆ ಚೀನಾದ ಪ್ರಮುಖ ನಗರಗಳಲ್ಲಿ ಅತೀ ಎತ್ತರದ ಭವನಗಳು ನಿರ್ಮಾಣವಾಗುತ್ತಿವೆ. ಸರಾಸರಿ ಐದು ದಿನಗಳಿಗೊಮ್ಮೆ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತುತ್ತಿವೆ.

ಕಠಿಣ ಶಿಕ್ಷಣ ವ್ಯವಸ್ಥೆ
ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಇಲ್ಲಿಯ ಶಿಕ್ಷಣ ವಿಧಾನ ಕಠಿಣ ಎನಿಸುತ್ತದೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ವೊಕೇಷನಲ್ ಮತ್ತು ಟೆರಿಟರಿ ಎಂಬ ಐದು ಹಂತಗಳಲ್ಲಿ ಶಿಕ್ಷಣ ಕಲಿಯಬೇಕಾಗುತ್ತದೆ. ಮಾಂಡರಿನ್ ಭಾಷೆಯಲ್ಲಿ ಶಿಕ್ಷಣ ಕಲಿಸಲಾಗುತ್ತದೆ. ಎಲ್ಲ ಹಂತಗಳಲ್ಲೂ ಮಾಂಡರಿನ್ ಮತ್ತು ಗಣಿತ ಕಲಿಯುವುದು ಕಡ್ಡಾಯ.

ಬೋಧನಾ ಅವಧಿಯೂ ಹೆಚ್ಚಾಗಿರುತ್ತದೆ. ಹೆಚ್ಚು ವಿಷಯಗಳನ್ನು ಕಲಿಯಬೇಕಾಗುತ್ತದೆ. ಪರೀಕ್ಷೆಗಳಲ್ಲಿ ನಕಲು ಮಾಡುತ್ತಾ ಮೇಲ್ವಿಚಾರಕರ ಕೈಗೆ ಸಿಕ್ಕರೆ ಸುಮಾರು ಏಳು ವರ್ಷಗಳ ವರೆಗೆ ಜೈಲುಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಲಾಗಿದೆ. ಈಚೆಗಷ್ಟೇ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಲ್ಲಿ ನಕಲು ಮಾಡಿದ ವಿದ್ಯಾರ್ಥಿಯನ್ನು ಹಿಡಿದು ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.