ADVERTISEMENT

‘ನಿದ್ದೆ ಮಾಡಿ ಆರೋಗ್ಯವಾಗಿರಿ’

​ಪ್ರಜಾವಾಣಿ ವಾರ್ತೆ
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
‘ನಿದ್ದೆ ಮಾಡಿ ಆರೋಗ್ಯವಾಗಿರಿ’
‘ನಿದ್ದೆ ಮಾಡಿ ಆರೋಗ್ಯವಾಗಿರಿ’   

ಬಾಲಿವುಡ್‌ನ ‘ಮುತ್ತಿನ ಹುಡುಗ’ (ಸೀರಿಯಲ್ ಕಿಸ್ಸರ್) ಇಮ್ರಾನ್‌ ಹಶ್ಮಿ, ಸ್ನಾಯುಗಳನ್ನು ಬೆಳೆಸುವುದಕ್ಕಿಂತ ದೇಹದ ಆರೋಗ್ಯಕ್ಕೆ ಹೆಚ್ಚು ಗಮನ ಕೊಡುವರು. ‘ದೇಹ ಬೆಳೆಸಿದರಷ್ಟೇ ಸಾಲದು, ಅದರ ಸದೃಢತೆಗೂ ಮಹತ್ವ ನೀಡಬೇಕು’ ಎಂಬುದು ಅವರ ಫಿಟ್‌ನೆಸ್ ಮಂತ್ರ.

ವರ್ಕೌಟ್‌:  ವಾರದಲ್ಲಿ ನಾಲ್ಕು ದಿನ ಮಾತ್ರವೇ ಇವರು ದೇಹ ದಂಡಿಸುತ್ತಾರೆ. ಕಾರ್ಡಿಯೊ ಕಸರತ್ತಿಗೆ ಹೆಚ್ಚು ಆದ್ಯತೆ. ವಾರದಲ್ಲಿ ಎರಡು ದಿನ ಯೋಗ. ವ್ಯಾಯಾಮಕ್ಕೆ ಪ್ರತಿದಿನ ಒಂದು ಗಂಟೆ ಮೀಸಲು.

ಏನೇನು ತಿನ್ನುತ್ತಾರೆ?: ಮೊದಲೆಲ್ಲ ಇಮ್ರಾನ್‌ಗೆ ಮಧ್ಯಾಹ್ನದ ಊಟಕ್ಕೆ ಮಟನ್‌ ಇರಲೇಬೇಕಿತ್ತು. ಆದರೀಗ ಇವರ ಆಹಾರ ಪದ್ಧತಿ ಬದಲಾಗಿದೆ. ಸಸ್ಯಹಾರಿ ಆಹಾರವನ್ನೇ ಹೆಚ್ಚು ಸೇವಿಸುತ್ತಾರೆ.

ADVERTISEMENT

ದಾಲ್‌, ಚಪಾತಿ, ಮೊಸರು ತಿನ್ನುತ್ತಾರೆ. ರಾತ್ರಿ ಊಟಕ್ಕೆ ಚಪಾತಿ, ದಾಲ್‌ ಜೊತೆಗೆ ಹಣ್ಣುಗಳು ಇರಬೇಕು. ಇದರ ಜೊತೆಗೆ ಮೊಟ್ಟೆಯ ಬಿಳಿ ಭಾಗ, ಓಟ್ಸ್‌, ಮೀನಿನ ಖಾದ್ಯಗಳನ್ನು ತಿನ್ನುತ್ತಾರೆ. ಜಂಕ್‌ಫುಡ್‌ಗಳಿಂದ ದೂರ. ಮದ್ಯಪಾನ ಅಪರೂಪ.

ಆರೋಗ್ಯಕ್ಕೆ ಸಲಹೆ: ಸಿಹಿ ತಿನಿಸುಗಳು ಹಲ್ಲು ಮತ್ತು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಹಣ್ಣುಗಳನ್ನು ಹೆಚ್ಚು ಸೇವಿಸಿ, ಖಾರದ ತಿನಿಸುಗಳನ್ನು ಕಡಿಮೆ ತಿನ್ನಿ. ಚೆನ್ನಾಗಿ ನಿದ್ದೆ ಮಾಡುವುದರಿಂದ ಆರೋಗ್ಯವಾಗಿರಬಹುದು.

ಏನಿಷ್ಟ? ಚಾಕೊಲೆಟ್‌ ಕೇಕ್‌.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.