ADVERTISEMENT

ನೀರು, ಉಪ್ಪಿನಿಂದ ಫೋನ್‌ ಚಾರ್ಜ್‌!

​ಪ್ರಜಾವಾಣಿ ವಾರ್ತೆ
Published 19 ಜನವರಿ 2016, 19:32 IST
Last Updated 19 ಜನವರಿ 2016, 19:32 IST
ನೀರು, ಉಪ್ಪಿನಿಂದ ಫೋನ್‌ ಚಾರ್ಜ್‌!
ನೀರು, ಉಪ್ಪಿನಿಂದ ಫೋನ್‌ ಚಾರ್ಜ್‌!   

ಮೊಬೈಲ್‌ ಫೋನ್‌ ಚಾರ್ಜ್‌ ಮಾಡಲು ಹಲವಾರು ಬಗೆಯ ತಂತ್ರಜ್ಞಾನಗಳು ರೂಪುಗೊಳ್ಳುತ್ತಿವೆ. ಅದೇ ರೀತಿ ಹೊಸ ಹೊಸ ವಿಧಾನಗಳೂ ಆವಿಷ್ಕಾರಗೊಳ್ಳುತ್ತಿವೆ. ಅಂಥದ್ದರಲ್ಲಿ ಒಂದು ನೀರು ಮತ್ತು ಉಪ್ಪು ಬಳಸಿ ಫೋನ್‌ ಚಾರ್ಜ್‌ ಮಾಡುವ ವಿಧಾನ!

ಇಂಥದ್ದೊಂದು ವಿನೂತನ ತಂತ್ರಜ್ಞಾನ ಕಂಡುಹಿಡಿದಿದ್ದಾರೆ ಅಮೆರಿಕದ ಲಾಸ್‌ವೇಗಾಸ್‌ನ ತಂತ್ರಜ್ಞರು. ಪಾಕೆಟ್‌ ಗಾತ್ರದ ಇಂಧನ ಕೋಶವು ಪೊರ್ಟೆಬಲ್‌ ಬ್ಯಾಟರಿಗಳನ್ನು ಚಾರ್ಜ್‌ ಮಾಡಲು ನೀರು ಹಾಗೂ ಉಪ್ಪು ಬಳಸಿಕೊಳ್ಳುತ್ತದೆ. ಈ ಮೂಲಕ ಮೊಬೈಲ್‌ ಚಾರ್ಜ್‌ ಮಾಡಬಹುದು.

ಈ ಇಂಧನ ಕೋಶದ ಹೆಸರು ಜೆಎಕ್ಯೂ. ಪರ್ಸ್‌ ಗಾತ್ರದ ಕೋಶ ಇದಾಗಿದ್ದು ಸಲೀಸಾಗಿ ಜೇಬಿನಲ್ಲಿ ಇರಿಸಿಕೊಳ್ಳಬಹುದು. ಇದು ಕೆಲಸ ಮಾಡುವುದು ಹೇಗೆ ಎಂದರೆ, ಈ ಜೆಎಕ್ಯೂ ಇಂಧನ ಕೋಶದಲ್ಲಿ ಪವರ್‌ ಕಾರ್ಡ್‌ ಹಾಕಬೇಕು. ಈ ಕಾರ್ಡ್‌  ಉಪ್ಪು ಮತ್ತು ನೀರನ್ನು ಒಳಗೊಂಡಿರುತ್ತದೆ. 

ಈ ಕಾರ್ಡ್‌ ಹಾಕುತ್ತಿದ್ದಂತೆಯೇ ಸ್ಮಾರ್ಟ್‌ಫೋನ್‌ಗೆ ಯುಎಸ್‌ಬಿ ಕೇಬಲ್‌ ಮುಖಾಂತರ ಅದು ಸಂಪರ್ಕ ಕಲ್ಪಿಸುತ್ತದೆ. ಇಂಧನ ಕೋಶದೊಳಗೆ ನೀರು ಮತ್ತು ಉಪ್ಪು ಬೆರೆತು ಹೈಡ್ರೋಜನ್‌ ಉತ್ಪತ್ತಿಯಾಗುತ್ತದೆ. ಇದು ವಿದ್ಯುತ್‌ನಂತೆಯೇ ಸ್ಮಾರ್ಟ್‌ ಫೋನ್‌ಗಳನ್ನು ಚಾರ್ಜ್‌ ಮಾಡುತ್ತದೆ.


ಇದನ್ನು ಬಳಸಿಕೊಂಡು ಸ್ಮಾರ್ಟ್‌ಫೋನ್‌, ಯುಎಸ್‌ಬಿ ಡಿವೈಸ್‌ಗಳು, ಆಂಡ್ರಾಯ್ಡ್‌  ಮತ್ತು ಐಓಎಸ್‌ ಡಿವೈಸ್‌ಗಳು, ವಿಂಡೋಸ್‌ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ಚಾರ್ಜ್‌ ಮಾಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT