ADVERTISEMENT

ಪಥ್ಯಾಹಾರ ಮೆಚ್ಚುವ ಕಿಯಾರಾ

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:30 IST
Last Updated 3 ಮೇ 2018, 19:30 IST
ಕಿಯಾರ ಅಡ್ವಾಣಿ
ಕಿಯಾರ ಅಡ್ವಾಣಿ   

‘ಭರತ್‌ ಅನೆ ನೇನು’ ಚಿತ್ರದಲ್ಲಿ ಮುಖ್ಯಮಂತ್ರಿ (ಮಹೇಶ್‌ಬಾಬು) ಪ್ರೇಯಸಿಯಾಗಿ ಪ್ರೇಕ್ಷಕರನ್ನು ಮೆಚ್ಚಿಸಿ ಟಾಲಿವುಡ್‌ ಗಮನ ಸೆಳೆದವರು ನಟಿ ಕಿಯಾರಾ ಅಡ್ವಾಣಿ. ತಮ್ಮ ಅಂದ ಮತ್ತು ಅಭಿನಯದಿಂದ ಮೊದಲ ಚಿತ್ರದಲ್ಲೇ ಯಶಸ್ವಿಯಾಗಿ ಬೀಗುತ್ತಿದ್ದಾರೆ ಕಿಯಾರಾ. ಎಷ್ಟೇ ಬ್ಯುಸಿಯಾಗಿದ್ದರೂ  ಆರೋಗ್ಯದ ಕಾಳಜಿಯೊಂದಿಗೆ ರಾಜಿ ಮಾಡಿಕೊಳ್ಳದ ಶಿಸ್ತಿನ ಹುಡುಗಿ ಇವರು!

‘ಮುಂಜಾನೆ ಟೀ ಬದಲಿಗೆ ಉಗುರು ಬೆಚ್ಚಗಿನ ನೀರಿಗೆ ನಿಂಬೆಹುಳಿ ಬೆರೆಸಿ ಕುಡಿಯುತ್ತೇನೆ. ಹಣ್ಣುಗಳೆಂದರೆ ನನಗೆ ತುಂಬಾ ಇಷ್ಟ. ಹೀಗಾಗಿ ಮುಂಜಾನೆ ತಿಂಡಿಗೆ ಓಟ್ಸ್‌ ಜತೆಗೆ ಆ್ಯಪಲ್, ಕಿವಿ, ಬ್ಲೂ ಬೆರ್ರಿ, ಸ್ಟ್ರಾ ಬೆರ್ರಿ, ಕಿತ್ತಳೆ ಹಣ್ಣುಗಳನ್ನು ಸೇವಿಸುತ್ತೇನೆ. ವ್ಯಾಯಾಮ ಮಾಡುವುದಕ್ಕೆ ಈ ರೀತಿಯ ಆಹಾರವೇ ಸೂಕ್ತ’ ಎಂಬುದು ಅವರ ಸಮರ್ಥನೆ.

‘ನನ್ನ ಇಷ್ಟದ ಆಹಾರಗಳೆಂದರೆ, ಚಿತ್ರಾನ್ನ ಮತ್ತು ಸೀಫುಡ್‌. ಮಧ್ಯಾಹ್ನಕ್ಕೆ ಮನೆ ಊಟವನ್ನೇ ಹೆಚ್ಚಾಗಿ ಇಷ್ಟಪಡುತ್ತೇನೆ. ಚಪಾತಿ ಜತೆಗೆ ತರಕಾರಿ ಪಲ್ಯ, ದಾಲ್ ಇರಬೇಕು. ಊಟದ ಜತೆಗೆ ನಿಂಬೆಹಣ್ಣಿನ ಚೂರುಗಳು, ಮೆಣಸಿನಪುಡಿ ಕೂಡ ಇರಬೇಕು. ಸಾಮಾನ್ಯವಾಗಿ ಭಾನುವಾರ ಸೀ ಫುಡ್‌ ಮಾತ್ರ. ಆರೋಗ್ಯದ ದೃಷ್ಟಿಯಿಂದ ಚಿಯಾ ಬೀಜಗಳಿಂದ ತಯಾರಿಸಿದ ಖಾದ್ಯಗಳನ್ನು ಹೆಚ್ಚು ಇಷ್ಟಪಡುತ್ತೇನೆ. ಕರಿದ ಖಾದ್ಯಗಳು ಮತ್ತು ಸಕ್ಕರೆಯನ್ನು ದೂರವಿಡುತ್ತೇನೆ’ ಎನ್ನುತ್ತಾರೆ ಅವರು.

ADVERTISEMENT

‘ಇನ್ನು ಸಂಜೆಯ ತಿಂಡಿಗೆ ಕಡಲೇ ಬೀಜ ಮತ್ತು ಆ್ಯಪಲ್‌ ಸೇವಿಸುತ್ತೇನೆ. ರಾತ್ರಿ ಊಟವೂ ಮಧ್ಯಾಹ್ನದ ಊಟದಂತೆಯೇ ಇರುತ್ತದೆ. ಆದರೆ ಕೋಳಿಮಾಂಸ ಸೇರ್ಪಡೆಯಾಗಿರುತ್ತದೆ. ನನ್ನ ಇಷ್ಟದ ಪದಾರ್ಥವೆಂದರೆ ಡಾರ್ಕ್‌ ಚಾಕಲೇಟ್‌ನ ಖಾದ್ಯಗಳು’ ಎನ್ನುತ್ತಾರೆ.

ಫಿಟ್‌ನೆಸ್‌ಗಾಗಿ ನಿತ್ಯ ಬಾಕ್ಸಿಂಗ್ ಮಾಡುವುದು ಅಭ್ಯಾಸ ಮಾಡಿಕೊಂಡಿರುವ ಕಿಯಾರ ಜತೆಗೆ ಜಿಮ್‌ನಲ್ಲೂ ಬೆವರು ಹರಿಸುತ್ತಾರೆ. ಅಂದದ ಮೈಕಟ್ಟಿಗಾಗಿ ಪರಿಶ್ರಮ ಪಡಲೇಬೇಕು ಎಂದು ನಂಬಿರುವ ಅವರು ಇದಕ್ಕಾಗಿ ನಿತ್ಯವೂ ನೃತ್ಯ ಅಭ್ಯಾಸವನ್ನೂ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.