ADVERTISEMENT

ಬಟ್ಟೆಯಲ್ಲಿ ಸಂಗೀತ ನಾದ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2017, 19:30 IST
Last Updated 24 ಫೆಬ್ರುವರಿ 2017, 19:30 IST
ಬಟ್ಟೆಯಲ್ಲಿ ಸಂಗೀತ ನಾದ
ಬಟ್ಟೆಯಲ್ಲಿ ಸಂಗೀತ ನಾದ   

ಊಟ ಮಾಡುವ ವೇಳೆ ಸಂಗೀತದ ಇಂಪು ಜೊತೆಯಾದರೆ ರುಚಿಗೆ ಒಂದಿಷ್ಟು ಹೊಸ ಮೆರುಗು ಸಿಗುತ್ತದೆಯೆಲ್ಲವೇ? ಡೈನಿಂಗ್‌ ಟೇಬಲ್‌ ಮೇಲೆ ಕುಳಿತ ನಂತರ ಹಾಡನ್ನು ಕೇಳಲು ಮನಸ್ಸಾದರೆ ಎದ್ದು ಹೋಗಿ ರೆಕಾರ್ಡರ್‌ ಹಾಕಲು ಸೋಮಾರಿತನ. ಹಾಗಾಗಿ ಸಂಗೀತ ಪ್ರಿಯರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸ್ವೀಡನ್ ಮೂಲದ ‘ಸ್ಮಾರ್ಟ್‌ ಟೆಕ್ಸ್‌ಟೈಲ್ಸ್‌ ಕಂಪೆನಿ’ ಮ್ಯೂಸಿಕಲ್‌ ಟೇಬಲ್‌ಕ್ಲಾತ್‌ ಆವಿಷ್ಕರಿಸಿದೆ.

ಈ ಬಟ್ಟೆಯ ಮೇಲೆ ಡ್ರಮ್‌ಕಿಟ್‌ ಮತ್ತು ಪಿಯಾನೊ ಮುದ್ರಿತವಾಗಿರುತ್ತದೆ. ಈ ಬಟ್ಟೆಯನ್ನು ಕಂಡೆಕ್ಟಿವ್‌ ಫೈಬರ್‌ನಿಂದ ಮಾಡಲಾಗಿದೆ. ಇದು ಸಂಕೇತಗಳನ್ನು ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ. ಈ ಫೈಬರ್‌ ಹಲವು ಪಿನ್‌ಗಳನ್ನು ಒಳಗೊಂಡಿದೆ. ಅವು ಸೆನ್ಸಾರ್‌ನಂತೆ ಕೆಲಸ ಮಾಡುತ್ತವೆ. ಬಟ್ಟೆಯ ಮೇಲೆ ಕೈಇಟ್ಟಾಗ ಸ್ವಿಚ್‌ಆನ್‌ ಆಗಿ ಸಂಗೀತ ನಾದ ಹೊರಹೊಮ್ಮುತ್ತದೆ. ಲಿಗೊ ಮತ್ತು ಮ್ಯಾಟ್‌ ಜಾನ್ಸನ್‌ ಈ ಅವಿಷ್ಕಾರದ ಹಿಂದಿನ ರೂವಾರಿಗಳು.
*
ಅಳಿಲಿನ ಗೂಡಿನಲ್ಲಿ ಏನೇನಿರುತ್ತೆ?
ಅಳಿಲು ಗೂಡು ಕಟ್ಟುವ ರೀತಿಯೇ ಸೋಜಿಗ. ಸಾಮಾನ್ಯವಾಗಿ ಪಕ್ಷಿಗಳ ಗೂಡುಗಳಿಗಿಂತ ಇದು ಭಿನ್ನವಾಗಿರುತ್ತದೆ. ಗೂಡನ್ನು ನೋಡುವಾಗ ಅಸ್ತವ್ಯಸ್ತವಾದ ಎಲೆಗಳ ರಾಶಿಯ ಗುಂಪಿನಂತೆ ಕಂಡರೂ, ಬಹು ಜಾಣ್ಮೆಯಿಂದ ಅಳಿಲು ಗೂಡು ಹೆಣೆದಿರುತ್ತದೆ.

ಹಲವು ವಸ್ತುಗಳನ್ನು ಬಳಸಿ ವಿವಿಧ ಪದರಗಳಲ್ಲಿ ಗೂಡು ಕಟ್ಟುತ್ತದೆ.  ಮರದ ಕಾಂಡ, ಟೊಳ್ಳು ಭಾಗ ಮತ್ತು ದ್ರಾಕ್ಷಿಯ ಬಳ್ಳಿಗಳಲ್ಲಿ ಸಾಮಾನ್ಯವಾಗಿ ಅಳಿಲು ಗೂಡು ಕಟ್ಟುತ್ತದೆ. ಗೂಡಿನ ಮೇಲಿನ  ಪದರ ತೇವಭರಿತ ಎಲೆ ಮತ್ತು ಪಾಚಿಯನ್ನು ಒಳಗೊಂಡಿರುತ್ತದೆ. ಅದರ ಒಳಗಿನ ಪದರ ಸ್ವಲ್ಪ ಗಟ್ಟಿಯಾಗಿದ್ದು, ಅದು ರೆಂಬೆ ಮತ್ತು ಬಳ್ಳಿಯ ಭಾಗವನ್ನು ಹೊಂದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT