ADVERTISEMENT

ಬೆಳ್ಳಗಿರೋದು ಒಳ್ಳೇದಲ್ಲ!

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST
ಬೆಳ್ಳಗಿರೋದು ಒಳ್ಳೇದಲ್ಲ!
ಬೆಳ್ಳಗಿರೋದು ಒಳ್ಳೇದಲ್ಲ!   

ಹುಡುಗಿಯರಿಗೆ ತಾವು ತೆಳ್ಳಗೆ–ಬೆಳ್ಳಗೆ ಇರಬೇಕು ಅನ್ನೋದು ಸಾಮಾನ್ಯ ಆಸೆ. ಆದರೆ, ಮುಖ ಇದ್ದಕ್ಕಿದ್ದಂತೆ ಬೆಳ್ಳಗೆ ಆಗೋದು ನಿಜಕ್ಕೂ ಆರೋಗ್ಯವಂತ ಲಕ್ಷಣವಲ್ಲ. ಕೆಲವರ ಮುಖ ಬಿಳಚಿಕೊಳ್ಳೋದು, ಹಳದಿಯಾಗೋದು ಕಂಡು ಬಂದರೆ ಅವರಿಗೆ ರಕ್ತಹೀನತೆ ಉಂಟಾಗಿದೆ ಎಂತಲೇ ಅರ್ಥ.

ಬಹುತೇಕರಿಗೆ ತಾವು ರಕ್ತಹೀನತೆಯಿಂದ ಬಳಲುತ್ತಿದ್ದೇವೆ ಅಂತಾನೇ ಗೊತ್ತಿರೋದಿಲ್ಲ. ಅದರಲ್ಲೂ ಹೆಣ್ಣುಮಕ್ಕಳು ತಮ್ಮ ಮುಖ ಚರ್ಮದ ಬೆಳ್ಳಗಾಗಿದೆ ಅಂದರೆ ಖುಷಿಪಡ್ತಾರೆ. ಇದು ಖಂಡಿತವಾಗಿಯೂ ಖುಷಿಯ ಸಂಗತಿ ಅಲ್ಲ ಅನ್ನುತ್ತೆ ವೈದ್ಯ ವಿಜ್ಞಾನ.

ರಕ್ತಹೀನತೆ ಇದ್ದರೆ ಚರ್ಮದ ಮೈಬಣ್ಣ ಬಿಳಚಿಕೊಳ್ಳುತ್ತೆ ಇಲ್ಲವೇ ಹಳದಿಯಾಗುತ್ತೆ. ಅಷ್ಟೇ ಅಲ್ಲ ಸ್ವಲ್ಪ ಕೆಲಸ ಮಾಡಿದರೂ ಆಯಾಸ ಕಾಣಿಸಿಕೊಳ್ಳುವುದು, ಕಣ್ಣುಗಳು ನಿಸ್ತೇಜಗೊಳ್ಳುವುದು, ತಲೆಸುತ್ತು ಬಂದಂತಾಗುವುದು, ಕೈಕಾಲು ತಣ್ಣಗಾಗುವುದು, ಕೂದಲು ಉದುರುವುದು, ಕಿವಿಯಲ್ಲಿ ರಿಂಗಣಿಸಿದ ಸದ್ದು ಕೇಳಿದಂತಾಗುತ್ತದೆ. ದೇಹದಲ್ಲಿ ಫೋಲಿಕ್ ಆ್ಯಸಿಡ್, ಕಬ್ಬಿಣಾಂಶ ಮತ್ತು ವಿಟಮಿನ್ ಬಿ12 ಕೊರತೆಯಿಂದಾಗ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ.

ADVERTISEMENT

ತಡೆಗಟ್ಟುವುದು ಹೇಗೆ?: ಕಬ್ಬಿಣಾಂಶ ಸಮೃದ್ಧವಾಗಿರುವ ಆಹಾರ ಸೇವನೆ. ಹಣ್ಣುಗಳಲ್ಲಿ ಸೇಬು, ಬಾಳೆ, ದ್ರಾಕ್ಷಿ, ಕಿತ್ತಳೆ ಹಣ್ಣು ಸೇವಿಸಬೇಕು. ಪಾಲಕ್ ಸೊಪ್ಪು, ಬೀಟ್‌ರೂಟ್‌, ಕೋಸುಗಡ್ಡೆ, ಮೆಂತ್ಯೆ, ಶೇಂಗಾ ಬೀಜ, ದ್ವಿದಳ ಧಾನ್ಯಗಳು, ಮಾಂಸದ ಪದಾರ್ಥಗಳನ್ನು ಸೇವಿಸುವುದರಿಂದ ರಕ್ತಹೀನತೆ ತಡೆಗಟ್ಟಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.