ADVERTISEMENT

ಬೇಸಿಗೆಗೆ ತಯಾರಾಗಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST
ಬೇಸಿಗೆಗೆ ತಯಾರಾಗಿ
ಬೇಸಿಗೆಗೆ ತಯಾರಾಗಿ   

ಬೇಸಿಗೆಯಲ್ಲಿ ಚರ್ಮದ ಹತ್ತಾರು ತೊಂದರೆಗಳು ಆರಂಭವಾಗುತ್ತವೆ. ತ್ವಚೆ ಒಣಗುವುದು, ಬಿರುಕು ಬಿಡುವುದು, ಶಿಲೀಂದ್ರ ಸೋಂಕು (ಫಂಗಸ್ ಇನ್‌ಫೆಕ್ಷನ್‌) ಇತ್ಯಾದಿ. ಸಮಸ್ಯೆಗಳ ಸರಮಾಲೆಗೆ ಪರಿಹಾರ ಕಂಡುಕೊಳ್ಳುವುದು ದೊಡ್ಡ ತಲೆಬಿಸಿ. ಆಹಾರದ ಕ್ರಮ, ಚರ್ಮದ ರಕ್ಷಣೆಯ ಬಗ್ಗೆ ತಿಳಿಸಿದ್ದರೆ ಬಿರುಬಿಸಿಲಿನಲ್ಲಿಯೂ ಸುಂದರ ಚರ್ಮ ಕಾಪಾಡಿಕೊಳ್ಳುವುದು ಸಾಧ್ಯ.

ಚರ್ಮದ ಆರೈಕೆಗೆ

* ಗಂಟೆಗೊಮ್ಮೆ ತಣ್ಣೀರಿನಿಂದ ಮುಖ ತೊಳೆಯಿರಿ. ಪದೇಪದೆ ಸೋಪು ಬಳಸುವುದು ಬೇಡ.

ADVERTISEMENT

* ದಿನಕ್ಕೆ ಎರಡು ಸಲಕ್ಕಿಂತ ಹೆಚ್ಚು ಬಾರಿ ಕ್ಲಿನ್ಸರ್‌ ಬಳಸಬೇಡಿ.

* ವಮುಖತೊಳೆಯಲು ಐಸ್‌ಕ್ಯೂಬ್ ಹಾಕಿದ ನೀರು ಬಳಸಿ.

* ರಾತ್ರಿ ಮಲಗುವ ಮುನ್ನ ಮಾಯಿಶ್ಚರೈಸರ್‌ ಹಚ್ಚಿಕೊಳ್ಳಿ.

* ವೈದ್ಯರ ಸಲಹೆ ಪಡೆದು ನಿಮ್ಮ ಚರ್ಮಕ್ಕೆ ಹೊಂದುವ ಸನ್‌ಸ್ಕ್ರೀನ್‌ ಆಯ್ಕೆ ಮಾಡಿಕೊಳ್ಳಿ. ಹೊರಗೆ ಹೋಗುವ 20 ನಿಮಿಷ ಮೊದಲು ಮುಖ, ಕಿವಿ, ಕತ್ತು, ಮುಂಗೈ, ಪಾದಕ್ಕೆ ಸನ್‌ಸ್ಕ್ರೀನ್ ಹಚ್ಚಿಕೊಳ್ಳಿ.

* ಮುಲ್ತಾನಿ ಮಿಟ್ಟಿ, ಗುಲಾಬಿ ಜಲ, ಕಡಲೆ ಹಿಟ್ಟು, ಅರಿಶಿಣ, ರಕ್ತ ಚಂದನ, ಮೊಸರು...ಹೀಗೆ ಯಾವುದಾದರೂ ನೈಸರ್ಗಿಕ ಉತ್ಪನ್ನಗಳಿಂದ ಫೇಸ್‌ಪ್ಯಾಕ್‌ ತಯಾರಿಸಿ ವಾರಕ್ಕೆರಡು ಬಾರಿ ಉಪಯೋಗಿಸಿ.

* ನೀರಾಟ ಅಥವಾ ಇತರ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಿರಾದರೆ ವಾಟರ್‌ಪ್ರೂಫ್ ಮತ್ತು ಸ್ವೀಟ್‌ಪ್ರೂಫ್ ಸೂರ್ಯಶಾಖ ನಿರೋಧಕ ಬಳಸಿ.

* ಬೇಸಿಗೆಯಲ್ಲಿ ತಣ್ಣೀರೇ ಒಳ್ಳೆಯದು. ತ್ವಚೆಯ ತೇವಾಂಶ ಮತ್ತು ಎಣ್ಣೆಯ ಅಂಶವನ್ನು ಉಳಿಸುತ್ತದೆ.

* ಒರಟು ಟವೆಲ್‌ ಮೂಲಕ ಬಲವಾಗಿ ಒರೆಸಬೇಡಿ. ಮೃದುವಾಗಿ ಮೈ ಒರೆಸಿ.

* ಸೂರ್ಯನಿಗೆ ಅತಿಯಾಗಿ ಮೈಒಡ್ಡುವುದನ್ನು ತಪ್ಪಿಸಿ.

* ದಿನಕ್ಕೆರಡು ಬಾರಿ ಸ್ನಾನ ಮಾಡುವುದರ ಜೊತೆಗೆ ಮೃದುವಾದ ಹತ್ತಿ ಬಟ್ಟೆ ಬಳಸಿ.

ಆಹಾರದ ಎಚ್ಚರ

* ದೇಹವನ್ನು ತಂಪಾಗಿಸುವ ಆಹಾರ ಸೇವನೆಗೆ ಆದ್ಯತೆ ನೀಡಿ.

* ಎಳನೀರು, ಮಜ್ಜಿಗೆಯಂಥ ದ್ರವ ಹಾಗೂ ಗಂಜಿ ಪದಾರ್ಥಗಳು ಸುಲಭವಾಗಿ ಜೀರ್ಣವಾಗುವುದಲ್ಲದೆ ದೇಹಕ್ಕೆ ಅಗತ್ಯವಿರುವ ವಿಟಮಿನ್‌ ನೀಡುತ್ತದೆ

* ನಿಂಬೆಹಣ್ಣು, ಕಲ್ಲಂಗಡಿ, ಮೂಸಂಬಿ, ದ್ರಾಕ್ಷಿ ಇತ್ಯಾದಿ ಹಣ್ಣಿನರಸಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತವೆ. ದೇಹದ ದ್ರವಾಂಶವನ್ನು ಸಮತೋಲನದಲ್ಲಿಡಲು ಸಹಕಾರಿ.

* ರಾಗಿ ಪಾನಕ, ಬಾಳೆಹಣ್ಣು, ಮಾವಿನಹಣ್ಣಿನ ರಸಾಯನ, ಮೊಸರಿನೊಂದಿಗೆ ಕಲ್ಲುಸಕ್ಕರೆ ಹಾಗೂ ಕಬ್ಬಿನಹಾಲು ದೇಹಕ್ಕೆ ಒಳ್ಳೆಯದು.

* ಸೌತೆಕಾಯಿ, ಕುಂಬಳಕಾಯಿ, ಬೂದಗುಂಬಳ, ಸೀಮೆಬದನೆಕಾಯಿ, ಸೋರೆಕಾಯಿ, ಟೊಮೆಟೊ, ಕ್ಯಾರೆಟ್, ಕಲ್ಲಂಗಡಿ, ಮಾವಿನಹಣ್ಣು, ದ್ರಾಕ್ಷಿ, ದಾಳಿಂಬೆಗಳನ್ನು ಹೆಚ್ಚು ಸೇವಿಸಿ.

* ಅತಿಯಾದ ಖಾರ, ಹುಳಿರಸಗಳ ಸೇವನೆ, ಜಿಡ್ಡಿನ ಪದಾರ್ಥಗಳ ಸೇವನೆ, ಮದ್ಯಪಾನ, ಧೂಮಪಾನ, ಅತಿಯಾದ ವ್ಯಾಯಾಮ ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.