ADVERTISEMENT

‘ಮನಸಾರೆ’ ಹುಡುಗಿ ಐಂದ್ರಿತಾ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST
ಐಂದ್ರಿತಾ
ಐಂದ್ರಿತಾ   

2007ರಲ್ಲಿ ‘ಮೆರವಣಿಗೆ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಗ್ಲ್ಯಾಮರ್ ಗೊಂಬೆ ಐಂದ್ರಿತಾ ರೇ (ಜನನ: 16ನೇ ಏಪ್ರಿಲ್, 1985) ಅವರಿಗೆ ಮೊದಲ ಚಿತ್ರವೇ ಭರ್ಜರಿ ಯಶಸ್ಸು ತಂದುಕೊಟ್ಟು, ಕನ್ನಡದ ಸ್ಟಾರ್‌ ನಟಿಯರಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತ್ತು. ದಿಗಂತ್‌ ಜೊತೆ ನಾಯಕಿಯಾಗಿ ನಟಿಸಿದ್ದ ‘ಮನಸಾರೆ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಇದರಲ್ಲಿ ಇವರು ಮಾಡಿದ್ದು ದೇವಿಕಾ ಎಂಬ ಮಾನಸಿಕ ಕಾಯಿಲೆ ಇರುವ ಯುವತಿ ಪಾತ್ರ. ಇದು ಅವರ ನಟನಾ ಕೌಶಲಕ್ಕೂ ಸಾಕ್ಷಿ. ಈ ಚಿತ್ರದ ನಟನೆಗೆ ಫಿಲಂಫೇರ್‌ ಸೇರಿದಂತೆ ಅನೇಕ ಪ್ರಶಸ್ತಿಗಳು ಒಲಿದವು.

ಬೆಂಗಳೂರಿನ ಬಾಲ್ಡ್‌ವಿನ್‌ ಗರ್ಲ್ಸ್‌ ಹೈಸ್ಕೂಲಿನಲ್ಲಿ ಓದಿರುವ ಐಂದ್ರಿತಾ, ದಂತ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಮಾಡೆಲಿಂಗ್‌,
ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಐಂದ್ರಿತಾಗೆ ಚಿತ್ರರಂಗದ ಪ್ರವೇಶಕ್ಕೂ ಅವು ಮೆಟ್ಟಿಲಾದವು.

ಜಂಗ್ಲಿ, ವಾಯುಪುತ್ರ, ಲವ್‌ಗುರು, ನೂರು ಜನ್ಮಕೂ, ನನ್ನವನು, ವೀರಪರಂಪರೆ, ಜನುಮ ಜನುಮದಲ್ಲೂ, ಭಜರಂಗಿ ಸೇರಿದಂತೆ 20ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಎರಡು ಬಂಗಾಳಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಮನಸಾರೆ, ಪಾರಿಜಾತ ಸಿನಿಮಾಗಳಲ್ಲಿ ಐಂದ್ರಿತಾ– ದಿಗಂತ್‌ ಜೋಡಿ ಹಿಟ್‌ ಆಗಿತ್ತು. ಇವರಿಬ್ಬರು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಗಾಳಿ ಸುದ್ದಿ ಇದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.