ADVERTISEMENT

ವುಡ್‌ಲ್ಯಾಂಡ್ ಆಂದೋಲನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2012, 19:30 IST
Last Updated 27 ಜುಲೈ 2012, 19:30 IST
ವುಡ್‌ಲ್ಯಾಂಡ್ ಆಂದೋಲನ
ವುಡ್‌ಲ್ಯಾಂಡ್ ಆಂದೋಲನ   

ಫುಟ್‌ವೇರ್ ಹಾಗೂ ವಸ್ತ್ರತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ವುಡ್‌ಲ್ಯಾಂಡ್ ಬ್ರ್ಯಾಂಡ್ ಪರಿಸರ ಕಾಳಜಿಗೆ ಮುಂದಾಗಿದ್ದು, ಇದರ ಅಂಗವಾಗಿ `ಕಾರ್ಬನ್ ನ್ಯೂಟ್ರಲ್ ರೀಟೇಲ್ ಚೈನ್~ ಅಭಿಯಾನಕ್ಕೆ ಚಾಲನೆ ನೀಡಿದೆ. ದೇಶದಲ್ಲಿ ಮೊದಲ ಬಾರಿಗೆ ವುಡ್‌ಲ್ಯಾಂಡ್ ಆಯೋಜಿಸಿರುವ ಈ ಆಂದೋಲನಕ್ಕೆ ಗ್ರಾಹಕರು ಕೈ ಜೋಡಿಸುವಂತೆ ಅದು ಕೋರಿದೆ.

ವುಡ್‌ಲ್ಯಾಂಡ್ ರಾಜ್ಯದಾದ್ಯಂತ ಇರುವ ತನ್ನ ರೀಟೇಲ್ ಮಳಿಗೆಗಳ ಚೈನ್ ಮೂಲಕ `ಶೂನ್ಯ ಇಂಗಾಲ~ ಹೊರಸೂಸುವಿಕೆ ಗುರಿ ಸಾಧಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇದೇ ಈ ಆಂದೋಲನದ ಮುಖ್ಯ ಉದ್ದೇಶ. ಇದರ ಅಂಗವಾಗಿ ವುಡ್‌ಲ್ಯಾಂಡ್ ಗ್ರಾಹಕರು ತಾವು ಬಳಸುವ ಪ್ರತಿ ಸೋಲಾರ್ ವಾಟರ್ ಹೀಟರ್ ಮೂಲಕ ತಮ್ಮ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವಂತೆ ಅವರನ್ನು ಉತ್ತೇಜಿಸಲಿದೆ. ಹೀಗೆ ಪ್ರತಿಜ್ಞೆ ಮಾಡಿ ಸೋಲಾರ್ ಗೀಸರ್ ಬಳಸುವ ಪ್ರತಿ ಗ್ರಾಹಕರು ಇಂಗಾಲ ಹೊರಸೂಸುವಿಕೆ ಪ್ರಮಾಣ ತಗ್ಗಿಸಿದ ಕುರಿತು ದೃಢೀಕರಣ ಸಲ್ಲಿಸಿದಾಗ, ಅವರಿಗೆ ವುಡ್‌ಲ್ಯಾಂಡ್ ಇ-ವೋಚರ್‌ಗಳನ್ನು ನೀಡಿ ಪ್ರೋತ್ಸಾಹಿಸಲಿದೆ.

`ವುಡ್‌ಲ್ಯಾಂಡ್ ಇಂಗಾಲದ ಪ್ರಮಾಣ ತಗ್ಗಿಸಬೇಕು ತತ್ವದಲ್ಲಿ ನಂಬಿಕೆ ಹೊಂದಿದೆ. ನಮ್ಮ ಹೊಸ ಕೊಡುಗೆಗಳ ಮೂಲಕ ಪರಿಸರ ಪ್ರಜ್ಞೆಯುಳ್ಳ ಗ್ರಾಹಕರು ಈ ಅಭಿಯಾನಕ್ಕೆ ಕೈ ಜೋಡಿಸಲಿದ್ದಾರೆ~ ಎಂಬುದು ವುಡ್‌ಲ್ಯಾಂಡ್ ವ್ಯವಸ್ಥಾಪಕ ನಿರ್ದೇಶಕ ಹರ್ಕಿರತ್ ಸಿಂಗ್ ಅವರ ವಿಶ್ವಾಸ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.