ADVERTISEMENT

ಸೌಂಡ್ ಪಾರ್ಟಿ

ಮಂದಹಾಸ

ಪೂರ್ಣಿಮಾ ಆಗುಂಬೆ
Published 24 ಏಪ್ರಿಲ್ 2015, 19:30 IST
Last Updated 24 ಏಪ್ರಿಲ್ 2015, 19:30 IST

ಶ್ಯಾಮಲರಾಯರಿಗೆ ತನ್ನ ಮಗಳ ಮದುವೆಯದ್ದೇ ಚಿಂತೆಯಾಗಿತ್ತು. ಮಗಳು ನೋಡಲು ಲಕ್ಷಣವಾಗಿದ್ದಾಳೆ, ಕೈತುಂಬಾ ಸಂಪಾದನೆ ಮಾಡುತ್ತಿದ್ದಾಳೆ ಆದರೂ ಯಾಕೆ ಮದುವೆ ತಡವಾಗುತ್ತಿದೆ ಎಂದು ಯೋಚಿಸುತ್ತಲೇ ರಸ್ತೆಯಲ್ಲಿ ಹೋಗುತ್ತಿರುವಾಗ ಎದುರಾದ ಮ್ಯಾರೇಜ್ ಬ್ರೋಕರ್ ರಂಗಣ್ಣ. ತನ್ನ ಮಗಳಿಗೆ ಒಂದು ಸೂಕ್ತ ಸಂಬಂಧ ನೋಡೆಂದು ರಂಗಣ್ಣನಿಗೆ ಹೇಳಿದ.

ಮೂರೇ ದಿನಕ್ಕೆ ಶ್ಯಾಮರಾಯರ ಮನೆಗೆ ಮೂರು ವರನ ಫೋಟೋಗಳೊಂದಿಗೆ ರಂಗಣ್ಣ ಹಾಜರಾದ. ನೋಡಿ ಈ ಮೂರೂ ಹುಡುಗರೂ ನೋಡಲು ಚೆನ್ನಾಗಿದ್ದಾರೆ. ಇವನು ಜೆನ್‌ಸೆಟ್ ಇಟ್ಟುಕೊಂಡಿದ್ದಾನೆ, ಇವನು ಮೈಕ್‌ಸೆಟ್ ಇಟ್ಟುಕೊಂಡಿದ್ದಾನೆ, ಇವನು ಡೊಳ್ಳು ಕುಣಿತ ಕಲಿತಿದ್ದಾನೆ, ಡೊಳ್ಳು ಚೆನ್ನಾಗೇ ಬಾರಿಸ್ತಾನೆ ಎಂದು ರಂಗಣ್ಣ ವಿವರಣೆ ಕೊಡುತ್ತಿರುವಾಗ ಶ್ಯಾಮರಾಯರು ನೀವ್ಯಾಕೆ ಇದನ್ನೆಲ್ಲಾ ನಂಗೆ ಹೇಳ್ತಾ ಇದ್ದೀರಾ? ಎಂದಾಗ ರಂಗಣ್ಣ ಹೇಳಿದ ನೀವೇ ಹೇಳಿದ್ರಲ್ಲ ರಾಯರೇ ನನ್ನ ಮಗಳು ‘ಸೌಂಡ್‌ಪಾರ್ಟಿ’ ಬೇಕು ಅಂತ ಕೇಳ್ತಾ ಇದ್ದಾಳೆ ಅಂತ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.