ADVERTISEMENT

ಸೌಂದರ್ಯಕ್ಕೂ ನುಗ್ಗೆಸೊಪ್ಪು

ಹರವು ಸ್ಫೂರ್ತಿ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST
ಸೌಂದರ್ಯಕ್ಕೂ ನುಗ್ಗೆಸೊಪ್ಪು
ಸೌಂದರ್ಯಕ್ಕೂ ನುಗ್ಗೆಸೊಪ್ಪು   

l ಬಿಸಿಲಿನಿಂದ ಕಪ್ಪಾದ ಚರ್ಮದ ಬಣ್ಣ ತಿಳಿಗೊಳಿಸುವಲ್ಲಿ ನುಗ್ಗೆಸೊಪ್ಪಿನ ರಸ ಉಪಯೋಗಕ್ಕೆ ಬರುತ್ತದೆ. ನಿಂಬೆ ರಸ ಮತ್ತು ನುಗ್ಗೆ ಸೊಪ್ಪಿನ ರಸವನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಚರ್ಮಕ್ಕೆ ಹಚ್ಚುವುದರಿಂದ ಬಣ್ಣ ತಿಳಿಗೊಳ್ಳುತ್ತದೆ.


ಚರ್ಮದ ಸುಕ್ಕು ನಿವಾರಣೆಯಾಗಬೇಕೆಂದರೆ ನುಗ್ಗೆಸೊಪ್ಪಿನ ರಸದೊಂದಿಗೆ ಲೋಳೆಸರದ ತಿರುಳನ್ನು ಮಿಶ್ರಣ ಮಾಡಿ ಹಚ್ಚಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಹಚ್ಚಿ ಒಣಗಿದ ನಂತರ ತೊಳೆಯಿರಿ. ಮೂರು ತಿಂಗಳು ಬಳಸಿದರೆ ಮುಖದಲ್ಲಿ ಸುಕ್ಕು ಕಡಿಮೆಯಾಗುತ್ತದೆ.

l ಕೂದಲ ತುದಿ ಸೀಳಿದ್ದರೆ ಅದಕ್ಕೂ ನುಗ್ಗೆಸೊಪ್ಪಿನ ರಸವನ್ನು ಬಳಸಬಹುದು. ಅರ್ಧ ಬಟ್ಟಲು ಮೊಸರು, ಅರ್ಧ ಬಟ್ಟಲು ನುಗ್ಗೆಸೊಪ್ಪಿನ ರಸ, ಅರ್ಧ ಬಟ್ಟಲು ತೆಂಗಿನಕಾಯಿ ಹಾಲು, ಒಂದು ಚಮಚ ಜೇನು ಮಿಶ್ರಣ ಮಾಡಿ ಸೀಳು ತುದಿಗೆ ಹಚ್ಚಿ. ಒಂದು ಗಂಟೆ ನಂತರ ಸ್ನಾನ ಮಾಡಿ. ವಾರಕ್ಕೆ ಒಂದು ಬಾರಿ ಇದನ್ನು ಬಳಸಬಹುದು.

ADVERTISEMENT

l ಮೊಡವೆಯ ಕಲೆಗಳಿದ್ದರೆ ನುಗ್ಗೆಸೊಪ್ಪಿನ ರಸದೊಂದಿಗೆ ದಾಲ್ಚಿನ್ನಿ ಪುಡಿ ಹಾಕಿ ಪೇಸ್ಟ್‌ ಮಾಡಿಕೊಳ್ಳಿ. ಇದನ್ನು ಮೊಡವೆ ಅಥವಾ ಕಲೆಯ ಮೇಲೆ ಮಾತ್ರ ಹಚ್ಚಿ.

l ಎಣ್ಣೆ ಚರ್ಮದವ ರಂಧ್ರಗಳು ಬೇಗ ದೂಳಿನಿಂದ ತುಂಬಿಕೊಳ್ಳುತ್ತವೆ. ಇದರಿಂದ ಮೊಡವೆ, ಸೋಂಕು ಉಂಟಾಗಬಹುದು. ಇದಕ್ಕೆ ನುಗ್ಗೆಸೊಪ್ಪು ಉತ್ತಮವಾದ ಮದ್ದು. ಗುಲಾಬಿ ಜಲದಿಂದ ಮುಖಕ್ಕೆ ಮಸಾಜ್ ಮಾಡಿ. ಅದು ಒಣಗಿದ ನಂತರ, ನುಗ್ಗೆಸೊಪ್ಪಿನ ರಸವನ್ನು ಹಚ್ಚಿ ಅರ್ಧಗಂಟೆ ಬಿಟ್ಟು ತೊಳೆಯಿರಿ. ನಂತರ ಮುಲ್ತಾನಿ ಮಿಟ್ಟಿ ಪ್ಯಾಕ್‌ ಹಾಕಿಕೊಳ್ಳಿ.

l ಒಣ ಚರ್ಮದವರ ತ್ವಚೆ ನಯವಾಗಬೇಕೆಂದರೆ ನುಗ್ಗೆಸೊಪ್ಪಿನ ರಸದೊಂದಿಗೆ ಹಾಲಿನ ಕೆನೆ, ಸ್ವಲ್ಪ ಅರಿಶಿಣ ಮಿಶ್ರಣ ಮಾಡಿ ಹಚ್ಚಿಕೊಳ್ಳಿ. ನಂತರ ಬಿಸಿ ನೀರಿಂದ ತೊಳೆಯಿರಿ.

⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.