ADVERTISEMENT

ಸ್ಮಾರ್ಟ್ ಆಗಿದೆ ಈ ಹೆಡ್‌ಬ್ಯಾಂಡ್

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 19:30 IST
Last Updated 28 ಫೆಬ್ರುವರಿ 2018, 19:30 IST
ಸ್ಮಾರ್ಟ್ ಆಗಿದೆ ಈ ಹೆಡ್‌ಬ್ಯಾಂಡ್
ಸ್ಮಾರ್ಟ್ ಆಗಿದೆ ಈ ಹೆಡ್‌ಬ್ಯಾಂಡ್   

ಸ್ಮಾರ್ಟ್‌ ಹೆಡ್‌ಬ್ಯಾಂಡ್‌ಗಳು ಈಗಿನ ಯುವಕರ ನೆಚ್ಚಿನ ಗ್ಯಾಜೆಟ್. ಫ್ಲೆಕ್ಸಿಬಿಲಿಟಿ ಬಯಸುವ ಯುವಮಂದಿ ಹೆಚ್ಚು ಇಷ್ಟಪಡುವುದು ವೈರ್‌ಲೆಸ್‌ ಇಯರ್‌ಬಡ್‌ಗಳನ್ನು. ಈ ಇಷ್ಟವನ್ನೇ ಉದ್ದೇಶವಾಗಿಟ್ಟುಕೊಂಡೇ ಹೆಡ್‌ಬ್ಯಾಂಡ್‌ ಒಂದು ಬಂದಿದೆ. ಸಂಗೀತದ ಉತ್ತಮ ಅನುಭವವನ್ನು ನೀಡಲೆಂದೇ ಈ ಹೆಡ್‌ಸೆಟ್‌ ರೂಪಿತಗೊಂಡಿದೆಯಂತೆ.

ಸಂಗೀತ ಕೇಳುತ್ತಿದ್ದಾಗ ಯಾರಾದರೂ ಮಧ್ಯ ಮಾತನಾಡಿದರೂ ಇದನ್ನು ಕಿವಿಯಿಂದ ಬಿಚ್ಚುವ ಅವಶ್ಯಕತೆಯಿಲ್ಲ.

ಒಮ್ಮೆ ಸ್ವೈಪ್ ಮಾಡಿದರೆ ಸಾಕು, ಅದು ನಿಲ್ಲುತ್ತದೆ. ಹಗುರವಾಗಿರುವ ಈ ಬ್ಯಾಂಡ್‌ನಲ್ಲಿ ನಾಯ್ಸ್ ಕ್ಯಾನ್ಸಲೇಷನ್ ಇದೆ. ಎರಡೂ ಇಯರ್‌ಪೀಸ್‌ಗಳನ್ನು ಸೇರಿಸಿದರೆ ಬ್ಲೂಟೂತ್ ಸ್ಪೀಕರ್ ಆಗಿಯೂ ಬದಲಾಗುತ್ತದೆ. ಐರಿಸ್‌ನ ಈ ಉತ್ಪನ್ನದ ಬೆಲೆ ಇನ್ನೂ ನಿಗದಿಯಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.