ADVERTISEMENT

ಮೈಂಡ್ ಯುವರ್ ಲಾಂಗ್ವೇಜ್

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

Idiot fellow, English is only a language to communicate your thoughts.

ಮೈ ಡಿಯರ್ ಇಂಗ್ಲಿಶ್ ಪಂಡಿತ್ ನಿಮ್ಮ ಪ್ರಕಾರ ನನ್ನದು horrible english ಆಗಿರಬಹುದು. ಆದರೆ pundit ಅನ್ನೋದನ್ನ ನಾನು ಸರಿಯಾಗಿ pronounce ಮಾಡಿದ್ದೇನೆ.

ಸ್ವಾಮೀ ಪಂಡಿತರೇ ನನ್ನದು ‘horrible english’ ಅಂತಾ ತಾನೇ ನೀವು ಹೇಳೋದು. ನಿಮಗೆ  ನಿಜಕ್ಕೂ ತಲೆ ಸರಿ ಇಲ್ವಾ ಅಥವಾ ಹಾಗೆ act ಮಾಡ್ತಿದ್ದೀರಾ?

ಇಂಗ್ಲಿಷ್ ಅನ್ನೋದು ಪ್ರತಿ ಕ್ಷಣವೂ ಬದಲಾಗುತ್ತಿರೋ ಭಾಷೆ. ಇವತ್ತು ನೀವು ಮಾತಾಡ್ತಿರೋ ಇಂಗ್ಲಿಷ್ ಇನ್ನು ಐವತ್ತು ವರ್ಷಗಳಲ್ಲಿ ದೊಡ್ಡ joke ನಂತೆ ಕಾಣಿಸುತ್ತೆ. ಇಷ್ಟಾಗಿ ನೀವು ಯಾಕೆ ಪದೇ ಪದೇ speak proper English proper English ಅಂತ ತಲೆ ತಿನ್ತೀರಿ?

ಇಂಗ್ಲಿಷ್ ಏನು ನಿಮ್ಮಪ್ಪನ ಭಾಷೇನೇ?  ಆಯ್ತು ಅದು ನಿಮ್ಮಪ್ಪನ ಭಾಷೇನೇ ಅಂತ ಇಟ್ಕೊಳ್ಳೋಣ. ಅದ್ರಿಂದ ನನಗೇನೂ ಬಿದ್ದು ಹೋಗಲಿಲ್ಲ. ಅದು ನಮ್ಮಪ್ಪನ ಭಾಷೆ ಖಂಡಿತಾ ಅಲ್ಲ.

ಮೊದಲನೇದಾಗಿ proper English ಅಂದ್ರೆ ಏನು ಅಂತ define ಮಾಡ್ತೀರಾ? ನಾನು ಷೇಕ್ಸ್‌ಪಿಯರಿಯನ್ ಇಂಗ್ಲಿಷ್ ಬೇಕಾದ್ರೂ ಮಾತಾಡ್ತೀನಿ. ‘what trade art thou?’ ಉತ್ತರ ಕೊಡಿ..

ನಗುತ್ತಾ ಇದ್ದೀರಲ್ವಾ? so...  ಐನೂರು ವರ್ಷದ ಹಿಂದೆ ಇದ್ದ ಅದೇ ಭಾಷೇನ ಕೇಳಿಸಿಕೊಂಡು ನೀವು ಈಗ ನಗುತ್ತಾ ಇದ್ದೀರಿ. ನಾವು ಪಂಪನ ಭಾಷೆ ಕೇಳಿಸಿಕೊಂಡರೆ ಗೌರವದಿಂದ ಹಳೆಗನ್ನಡ ಅದು. ಅರ್ಥ ಆಗ್ತಿಲ್ಲ ಅಂತಷ್ಟೇ ಹೇಳ್ತೀವಿ. ನೀವು ಏನ್ ಮಾಡ್ತೀರಿ...? ನಾನು ಮಾತನಾಡಿದ್ದನ್ನು ಕೇಳಿಸಿಕೊಂಡು ‘His English is horrible man!’ ಅನ್ತೀರಿ.

ಅದು ಬಿಡಿ ನಿಮ್ಮ ‘proper English’ ಹುಟ್ಟಿದ್ದು ಯಾವಾಗ? 18ನೇ ಶತಮಾನದಲ್ಲಾ ಅಥವಾ 19ನೇ ಶತಮಾನದಲ್ಲಾ? ನಿಮ್ಮ ಹತ್ತಿರ ಒಂದು ಕ್ಯಾಲೆಂಡರ್ ಇದೆ. ನನ್ನ ಹತ್ತಿರ ಒಂದು ಪಂಚಾಂಗ ಇದೆ. ನಾನು ಇಂಗ್ಲಿಷ್ ಸರಿಯಾಗಿ ಮಾತಾಡದೇ ಇರಬಹುದು.

ಆದರೆ... ಸಾರ್ ಒಂದು ವಿಷಯ ಗೊತ್ತಿರಲಿ. ಮನುಷ್ಯರಿಗೆ ಕೋಟ್ಯಂತರ ವರ್ಷ ಒಂದು ಭಾಷೇನೇ ಇರಲಿಲ್ಲ. ಅದೇ ಪ್ರಾಣಿಗಳ ಥರಾ ಬರೇ ಬಾ...ಬೂ... ಬೀ soundಗಳು. ನೀವು ಅದನ್ನ ಈಗಲೂ use ಮಾಡ್ತೀರಾ...?

ನೀವು schoolನಲ್ಲಿ ಇಂಗ್ಲಿಷ್ non-detail  ಓದಿದ್ದೀರಾ? ನೀವು ಭಾರತದಲ್ಲೇ schoolಗೆ ಹೋಗಿದ್ರೆ ನಾನು ಏನು ಹೇಳ್ತಾ ಇದ್ದೀನಿ ಅಂತ ನಿಮಗೆ ಅರ್ಥ ಆಗುತ್ತೆ. ನೀವು abroadನಲ್ಲೇ ಹೋಗಿದ್ರೆ ನೀವು urgent ಆಗಿ ನರಕಕ್ಕೇ ಹೋಗಿಬಿಡಿ.

ಮೊದಲು ನೀವು tissue paper ಬಳಸೋದು ನಿಲ್ಲಿಸಿ. ಆಮೇಲೆ ನಿಮ್ಮ ಹತ್ತಿರ ಮಾತಾಡುತ್ತೇನೆ. ನಾವು ಬಹಳ ಕಷ್ಟಪಟ್ಟು ಇಂಗ್ಲಿಷ್ ಕಲೀತೀವಿ. ನಮ್ಮ schoolನಲ್ಲಿ ಮೇಷ್ಟ್ರು `ಜೆಡ್~ ಅಂತ ಹೇಳಿಕೊಟ್ಟಿದ್ರು. ನಾನೀಗ ಅದನ್ನ ಹಂಗೇ ಹೇಳಿದ್ರೆ ನೀವು ಜೋರಾಗಿ ನಗುತ್ತಾ `, ‘Oh, you mean Zee’ ಅನ್ತೀರಿ.Mentals.

ಈ ಎಂಎಸ್ ವರ್ಡ್ ಅನ್ನೋ ಸಾಫ್ಟ್‌ವೇರ್ ಬಂದ್ಮೇಲೆ ನಮ್ಮ ದೇಶದಲ್ಲಿ ಎಲ್ಲರಿಗೂ ತೊಂದರೆ ಆಗಿಬಿಟ್ಟಿದೆ. ಯಾರು ಏನು ಬರೆದ್ರೂ ಅದ್ರ ಕೆಳಗೆ ಕೆಂಪು ಗೆರೆ ಹಾಕಿ ನಿಮ್ಮ spelling ಸರಿ ಇಲ್ಲ ಅನ್ನುತ್ತೆ. ನಮಗೆ schoolನಲ್ಲಿ ಕಲಿಸಿರೋದು ಇದೇ spelling. ಈಗ Bill Gatesನ ಕಂಪೆನಿ ಬಂದು ಅದು ಸರಿ ಇಲ್ಲ ಅನ್ತಿದೆ. ನಾವು ಏನು ತಪ್ಪು ಮಾಡಿದ್ದೀವಿ ಅಂತ ತಲೆ ಕೆರ‌್ಕೊಂಡು ಕೆರ‌್ಕೊಂಡು ಕೂದ್ಲೆಲ್ಲಾ ಉದುರಿ ಹೋಗ್ತಿದೆ. ಇಷ್ಟರ ಮೇಲೆ ನೀವು ಬೇರೆ ನಮ್ಮ English ಸರಿ ಇಲ್ಲ ಅನ್ತಿದ್ದೀರಿ.

ನೀವು ಹೇಳೋ proper Englishನಲ್ಲಿ gay  ಅಂದ್ರೆ  happy ಅಂತ ಅರ್ಥ ಇದೆ. ನಿಮಗಿದು ಗೊತ್ತಾ? ಬಹುಶಃ ನಿಮಗೆ ಗೊತ್ತಿರಲ್ಲ. ನಾನು ಏನಾದ್ರೂ ‘I am very gay today’ ಅಂದ್ರೆ ನೀವು ಉರುಳುರುಳಿ ನಗಾಡ್ತಾ ನನ್ನ ಎಲ್ಲರಿಗೂ ತೋರಿಸ್ತೀರಿ. ಅದಕ್ಕೇ ಕೇಳಿದ್ದು ನಿಮಗೇನು ತಲೆ  ಸರಿ ಇಲ್ವಾ?

 My ಅನ್ನೋದ್ರಲ್ಲೂ ಇರೋದು ಎರಡೇ ಅಕ್ಷರ.  Ma ಅನ್ನೋದ್ರಲ್ಲೂ ಇರೋದು ಎರಡೇ ಅಕ್ಷರ. ಆದ್ರೆ ನೀವ್ಯಾಕೆ ‘Ma dog poo-pooed in ma pillow today’ ಅನ್ತೀರಿ. ಇದೇನು ಸ್ಟೈಲಾ? ಹಂಗೇಳಿ. ಆದ್ರೆ ಇದನ್ನ ಒಪ್ಕೊಳ್ಳೋ ನೀವು ನನ್ನ English   ಮಾತ್ರ ಒಪ್ಕೊಳ್ಳಲ್ಲ. ನೀವು ಹಿಂಗೇ ಬೈತಾ ಇರೋವಾಗ್ಲೇ Oxford dictionary ನಲ್ಲಿ ನಮ್ಮದೇ ಶಬ್ದ ಸೇರಿಸ್ಕೋತಾರೆ. ಆಮೇಲೆ ನೀವು ಅದನ್ನೇ use ಮಾಡ್ತೀರಿ.

ತುಂಬಾ complicated  ಪದ use ಮಾಡಿದ್ರೆ ಮಾತ್ರ ಒಳ್ಳೇ ಇಂಗ್ಲಿಷ್ ಅನ್ತೀರಾ? ಅದೂ ನನಗೆ ಗೊತ್ತಿದೆ. complicated sentence ಮಾಡೋಕೂ ಬರುತ್ತೆ. ಬರೇ ರೈಟ್ ಕ್ಲಿಕ್ ಮಾಡಿ synonym ಹಾಕಿದ್ರೆ you will be flabbergasted at the harmonised synchronisation of my meta-physical and above-optimal usage of this language that oscillates a tad between its Anglo-Saxonic origin and the Post-Renaissance more Modernistic approach.  ಆಮೇಲೆ ನೀವು ನನ್ನ ಫೋಟೋಕೆ ಕಟ್ಟು ಹಾಕಿಸಿ ಪೂಜೆ ಮಾಡ್ತೀರಿ.

Idiot fellow, English is only a language to communicate your thoughts. ಯಾವ ಭಾಷೆ ಕಲಿಯೋಕೆ ಆರು ವಾರಕ್ಕಿಂತ ಹೆಚ್ಚು ಟೈಂ ಬೇಕಾಗಿಲ್ಲ. ಗೊತ್ತಿಲ್ಲದೇ ಇದ್ರೆ ವೀಟಾದವರ ಹತ್ರ ಇಲ್ಲದಿದ್ದರೆ ರ‌್ಯಾಪಿಡೆಕ್ಸ್‌ನವರ ಹತ್ರ ಕೇಳಿ ತಿಳ್ಕೊಳ್ಳಿ. So.  ಸುಮ್ಮನೆ ಕಿರಿಕಿರಿ ಮಾಡ್ದೆ respect  ಕೊಡೋಕೆ ಕಲ್ತುಕೊಳ್ಳಿ. ಮತ್ತೆ ಈ ‘better’ English  ಮಾತಾಡೋದ್ರಲ್ಲಿ ದೊಡ್ಡತನ ಏನೂ ಇಲ್ಲ.

ನಿಮ್ಮನ್ನ ಥಾರ್ ಮರುಭೂಮಿಯಲ್ಲಿ ಬಿಟ್ಟು ಬರ‌್ತೀನಿ ಅಂದ್ಕೊಳ್ಳಿ. ಒಂದು ವಾರ ಊಟ-ತಿಂಡಿ ಏನೂ ಇರಲ್ಲ. ಆವಾಗ ನೀವು ಯೋಚನೆ ಮಾಡ್ತೀರಿ? proper sentence formation ಅಥವಾ food.  ಮರುಭೂಮೀಲಿ ಯಾಕೆ ನಿಮ್ಮನ್ನ ತಕ್ಕೊಂಡೋಗಿ ಫ್ರಾನ್ಸ್‌ನಲ್ಲಿ ಬಿಟ್ಟರೆ ಸಾಕು. ನೀವು ಫಿನಿಶ್.

ನೀವು Rನ  pronounce ಮಾಡೋ ಸ್ಟೈಲ್‌ನಲ್ಲಿ ನೀವು ಹೇಳೋದು ಯಾರಿಗೂ ಗೊತ್ತಾಗಲ್ಲ. ಅಂಥಾ ಹೊತ್ತಲ್ಲಿ ನನ್ನ ನೆನೆಸ್ಕೊಳ್ಳಿ. ನಾನು ಬಂದು ನಿಮ್ಮನ್ನ rescue ಮಾಡ್ತೀನಿ. ನಾನೇನು ನಿಮ್ಮ ಥರಾ ಭಾಷೆ ಚೆನ್ನಾಗಿಲ್ಲ ಅಂತ ನಗಲ್ಲ.
ಇಂತಿ ನಿಮ್ಮ ಶಿಷ್ಯ
- ಆಕಾಶ್

http://localparty.tumblr.com/ ಯಲ್ಲಿ ಪ್ರಕಟವಾದ ಬರೆಹದ ಭಾವಾನುವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.