ವಾಟಾಳ್
ಅರೆ ಇದೇನಿದು ಅರ್ಧ ಹೆಸರನ್ನಷ್ಟೆ ಬರೆದಿದ್ದೀರಿ ನಾಗರಾಜ್ ಎಂಬುದನ್ನು ಮರೆತಿದ್ದೀರಾ ಎಂದು ಕೇಳಬೇಡಿ. ಇದೊಂದು ಟಿ.ನರಸೀಪುರ ತಾಲ್ಲೂಕಿನ ಒಂದು ಸಣ್ಣ ಗ್ರಾಮ. ಕನ್ನಡ ಹೋರಾಟಗಾರ ನಾಗರಾಜ್ ಅವರ ಹುಟ್ಟೂರು. ಆದ್ದರಿಂದಲ್ಲೇ ಈ ಹೆಸರು ಅವರೊಟ್ಟಿಗೆ ಅಂಟಿಕೊಂಡುಬಿಟ್ಟಿದೆ. ಆದರೆ ಚಾಮರಾಜನಗರದ ಕಡೆಗೆ ಇದೊಂದು ವಿಶೇಷಣವಾಗಿಯೂ ಬಳಕೆಯಲ್ಲಿದೆ.
ಇದು ಹುಸಿ ಹೋರಾಟಗಾರರನ್ನು ವಿವರಿಸಲು ಬಳಸುವ ಪದ. ಕನ್ನಡಾಭಿಮಾನವನ್ನು ಅತಿ ಎನಿಸುವಂತೆ ಪ್ರದರ್ಶಿಸಿದರೂ ಆತ ಅಥವಾ ಆಕೆ `ವಾಟಾಳ್~ ಆಗುವುದು ಗ್ಯಾರಂಟಿ.
ಕಾಗೆ ಹಾರಿಸು
ಹುಡುಗರ ಮಧ್ಯೆ ಬಹಳ ಸಾಮಾನ್ಯವಾಗಿ ಕರ್ನಾಟಕದ ಎಲ್ಲ ಪ್ರದೇಶಗಳಲ್ಲಿ ಬಳಕೆಯಾಗುವ ಮಾತಿದು. ಸುಳ್ಳು ಹೇಳುವುದು, ಯಾಮಾರಿಸುವುದಕ್ಕೆ ಇದನ್ನು ತಳಕು ಹಾಕಿ ಬಳಸುವುದು ರೂಢಿ. ಕೇವಲ ಹಳೇ ಮೈಸೂರು ಪ್ರದೇಶಕ್ಕೆ ಸೀಮಿತವಾಗಿದ್ದ ಈ ಪದವನ್ನು ಅಖಿಲ ಕರ್ನಾಟಕ ಮಟ್ಟದ ಪದವನ್ನಾಗಿಸಿದ್ದು ಜಗ್ಗೇಶ್.
ಇಷ್ಟಕ್ಕೂ ಕಾಗೆ ಹಾರಿಸುವುದರ ಅರ್ಥವೇನು? ಇದನ್ನು ಹುಡುಕುವುದೂ ಒಂದು ಬಗೆಯಲ್ಲಿ ಕಾಗೆ ಹಾರಿಸುವ ಕ್ರಿಯೆಯೇ ಹೌದು. ಯಾಮಾರಿಸಿ ಮೋಸಮಾಡುವ ಅರ್ಥವನ್ನು ಸ್ಪುರಿಸುತ್ತಿರುವುದಂತೂ ಕಾಕನಾಣೆ ಸತ್ಯ. ಈ ಪ್ರಯೋಗದ ವ್ಯತ್ಪತ್ತಿಯ ಬಗ್ಗೆ ಸ್ವತಃ ಶನೀಶ್ವರನೇ ಮಾಹಿತಿ ನೀಡಬೇಕೇನೋ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.