ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 8 ಮೇ 2016, 19:44 IST
Last Updated 8 ಮೇ 2016, 19:44 IST

1) ಸರ್ಕಾರಿ ದಾಖಲೆಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿನ ಅರಣ್ಯ ಪ್ರದೇಶದ ವಿಸ್ತೀರ್ಣ ಎಷ್ಟು?
a) 43,356,45 ಚ.ಕಿ.ಮೀ
b) 44,356,45 ಚ.ಕಿ.ಮೀ
c) 45,356,45 ಚ.ಕಿ.ಮೀ
d) 46,356,45  ಚ.ಕಿ.ಮೀ

2) ಒಬ್ಬ ಹುಡುಗನು ಒಂದು ಗುಲಾಬಿ ಹೂವನ್ನು 27.50 ರೂಗಳಿಗೆ ಕೊಳ್ಳುತ್ತಾನೆ. ಅದನ್ನು 28.60 ರೂ ಗಳಿಗೆ ಮಾರಾಟ ಮಾಡಿದಾಗ ಅವನಿಗೆ ಬಂದ ಶೇಕಡಾ ಲಾಭ ಎಷ್ಟು?
a) 3%  
b) 4%
c) 5% 
d) 6%

3)1982ರಲ್ಲಿ ಚದುರಂಗ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ?
a) ವೈಶಾಖ 
b) ಭುವನದ ಭಾಗ್ಯ
c) ಸಪ್ತಪದಿ 
d) ತೇರು

ADVERTISEMENT

4)ಮುಲ್ಲ ಪೆರಿಯಾರ್ ಅಣೆಕಟ್ಟು ವಿವಾದ ಯಾವ ರಾಜ್ಯಗಳ ಮಧ್ಯೆ ನಡೆಯುತ್ತಿದೆ?
a) ಕರ್ನಾಟಕ-ತಮಿಳುನಾಡು
b) ತಮಿಳುನಾಡು-ಕೇರಳ
c) ಕೇರಳ-ಗೋವಾ 
d) ಕೇರಳ-ಕರ್ನಾಟಕ

5)ಶ್ರೀಲಂಕಾದ ನೈಋತ್ಯ ಭಾಗದಲ್ಲಿರುವ ಕೃತಕ ಬಂದರು ಯಾವುದು?
a) ಜಾಫ್ನಾ 
b) ಮ್ಯಾನಿಲಾ
c) ಕೊಲಂಬೊ 
d) ಮನಿಲಾ

6)ರಾಜ್ಯದಲ್ಲಿ ಮೊದಲ ಆಧುನಿಕ ಸಕ್ಕರೆ ಕಾರ್ಖಾನೆ (1934) ಯಾವ ಜಿಲ್ಲೆಯಲ್ಲಿ ಆರಂಭವಾಯಿತು?
a) ಬೆಳಗಾವಿ 
b) ಮೈಸೂರು
c) ಬೆಂಗಳೂರು  
d) ಮಂಡ್ಯ

7)ಗುಣಮಟ್ಟಕ್ಕೆ ಅನುಗುಣವಾಗಿ ಸಿಮೆಂಟನ್ನು 4 ಭಾಗಗಳಾಗಿ ವಿಂಗಡಿಸಲಾಗಿದೆ. ಈ ಕೆಳಗಿನ ಯಾವ ಸಿಮೆಂಟ್ ಗ್ರೇಡ್‌ಅನ್ನು ಹೊಂದಿಲ್ಲ?
a) 33 ಗ್ರೇಡ್ 
b) 43 ಗ್ರೇಡ್ 
c) 53 ಗ್ರೇಡ್ 
d) 93 ಗ್ರೇಡ್

8)ದಕ್ಷಿಣ ಭಾರತದಲ್ಲಿ ಕ್ರಿ. ಪೂ. 6ನೇ ಶತಮಾನವನ್ನು ಸಂಗಂ ಯುಗ ಎಂದು ಕರೆಯಲಾಗುತ್ತದೆ. ಈ ಯುಗದಲ್ಲಿ ಪ್ರವರ್ಧಮಾನಕ್ಕೆ ಬಂದ ಸಾಹಿತ್ಯ ಯಾವುದು?
a) ಕನ್ನಡ 
b) ತೆಲುಗು
c) ಮರಾಠಿ
d) ತಮಿಳು

9)ಈ ಕೆಳಕಂಡವುಗಳಲ್ಲಿ ಯಾವ ಕಿರಣಗಳು ‘ವಿಕಿರಣಗಳ’ ಗುಂಪಿಗೆ ಸೇರುವುದಿಲ್ಲ?
a) ಸೂರ್ಯ ಕಿರಣಗಳು
b) ಗಾಮಾ ಕಿರಣಗಳು
c) ಬೀಟಾ ಕಿರಣಗಳು 
d)ಅಲ್ಫಾ ಕಿರಣಗಳು

10)ಮೂತ್ರಪಿಂಡದಲ್ಲಿ ಕಂಡುಬರುವ ಕಲ್ಲುಗಳ ರಾಸಾಯನಿಕ ಹೆಸರು ಏನು?
a) ಲೈಸೊಸೋಮ್
b) ಕ್ಯಾಲ್ಷಿಯಂ ಆಕ್ಸಲೈಟ್
c) ಕ್ಯಾಲ್ಷಿಯಂ ನೈಟ್ರೆಟ್
d) ಕ್ಯಾಲ್ಷಿಯಂ ಪಾಸ್ಪೇಟ್


ಉತ್ತರಗಳು: 1-a, 2-b, 3-a, 4-b, 5-c, 6-d, 7-d, 8-d, 9-a, 10-b.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.