‘ಡಿಎಂಕೆ ಸರ್ಕಾರದಿಂದ ಅನಗತ್ಯ ರಾಜಕೀಯ’
ಮದರಾಸು, ಮೇ 31– ಸೇಲಂ ಉಕ್ಕು ಕಾರ್ಖಾನೆ ಪ್ರಶ್ನೆಯನ್ನು ತಮಿಳುನಾಡಿನ ಡಿ.ಎಂ.ಕೆ. ಸರ್ಕಾರ ಅನಗತ್ಯವಾಗಿ ‘ರಾಜಕೀಯ’ ಮಾಡಲು ಯತ್ನಿಸುತ್ತಿದೆ ಎಂದು ಕೇಂದ್ರ ಉಕ್ಕು ಮತ್ತು ಗಣಿಗಳ ಸಚಿವ ಚಂದ್ರಜಿತ್ ಯಾದವ್ ಹೇಳಿದರು.
ಯೋಜನೆಯನ್ನು ಕೇಂದ್ರ ತಾತ್ಕಾಲಿಕವಾಗಿ ಕೈಬಿಟ್ಟಿದೆ ಎಂಬ ತಮಿಳುನಾಡು ಸರ್ಕಾರದ ವಾದವನ್ನು ನಿರಾಕರಿಸಿದ ಯಾದವ್, ಈ ವರ್ಷ ಯೋಜನೆಗಾಗಿ ಮೂರು ಕೋಟಿ ರೂಪಾಯಿಗಳ ವೆಚ್ಚ ಹೆಚ್ಚಿಸಲು ತಾವು ಯೋಜನಾ ಆಯೋಗ ಮತ್ತು ಹಣಕಾಸು ಖಾತೆಯನ್ನು ಒತ್ತಾಯ ಮಾಡುತ್ತಿರುವುದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.