ADVERTISEMENT

ಜ್ಞಾನ ಪರೀಕ್ಷೆಯ ಕ್ವಿಜ್

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 22 ಜನವರಿ 2019, 19:30 IST
Last Updated 22 ಜನವರಿ 2019, 19:30 IST

1. ಬುದ್ಧನ ಜನ್ಮಸ್ಥಳ ಯಾವುದು?
ಅ) ಪಾವಾಪುರಿ ಆ) ಕಪಿಲವಸ್ತು ಇ) ಲುಂಬಿನಿ ಈ) ಪಾಟಲೀಪುತ್ರ

2. ಮಂಗನ ಕಾಯಿಲೆ ಕರ್ನಾಟಕದಲ್ಲಿ ಮೊದಲು ಕಾಣಿಸಿಕೊಂಡದ್ದು ಎಲ್ಲಿ?
ಅ)ಸಾಗರ ಆ) ಕ್ಯಾಸನೂರು ಇ) ಉಡುಪಿ ಈ) ರಾಯಚೂರು

3. ಬ್ರಿಟನ್‍ನಲ್ಲಿ ಹುಟ್ಟಿ ಭಾರತೀಯ ಪ್ರಜೆಯಾಗಿ ನಿಧನರಾದ ವಿಜ್ಞಾನಿ ಯಾರು?
ಅ) ರೊನಾಲ್ಡ್ ರಾಸ್ ಆ) ಫ್ರಾಂಕ್ಲಿನ್ ಇ) ಜೆ.ಬಿ.ಎಸ್.ಹಾಲ್ಡೇನ್ ಈ) ರುದರ್ ಫೋರ್ಡ್

ADVERTISEMENT

4. ಸರ್ಜಿಕಲ್ ಸ್ಟ್ರೈಕ್ ವಿಷಯವನ್ನು ಆಧರಿಸಿದ ಇತ್ತೀಚಿನ ಹಿಂದಿ ಸಿನಿಮಾ ಯಾವುದು?
ಅ) ಗುರಿ ಆ) ಮಣಿಕರ್ಣಿಕ ಇ) ಉರಿ ಈ) ಠಾಕ್ರೆ ದ ಫಿಲ್ಮ್

5. ಜ್ಯೋತಿರ್ವರ್ಷವನ್ನು ಯಾವುದನ್ನು ಅಳೆಯಲು ಬಳಸಲಾಗುತ್ತದೆ?
ಅ) ಬೆಳಕಿನ ಪ್ರಖರತೆ ಆ) ಕಾಲ ಇ) ದೂರ ಈ) ತೂಕ

6. ಮೊತ್ತ ಮೊದಲ ಇಎಂಆರ್‌ಎಸ್ ರಾಷ್ಟ್ರೀಯ ಕ್ರೀಡಾಕೂಟ ಎಲ್ಲಿ ಜರುಗಿತು?
ಅ) ಹೈದ್ರಾಬಾದ್ ಆ) ದೆಹಲಿ ಇ) ಕಟಕ್ ಈ) ಪುರಿ

7. ‘ನಟಸಾರ್ವಭೌಮ’ ಯಾರು ಬರೆದ ಕಾದಂಬರಿ?
ಅ) ತರಾಸು ಆ) ನಿರಂಜನ ಇ) ರಾವ್ ಬಹದ್ದೂರ್ ಈ) ಅನಕೃ

8. ಹಲ್ಲಿನ ಮೂರು ಪದರಗಳ ಪಟ್ಟಿಯಲ್ಲಿ ಯಾವುದು ಸೇರಿಲ್ಲ?
ಅ) ಎನಾಮಲ್ ಆ) ಡೆಂಟಿನ್ ಇ) ಡೆಂಟಲ್ ಪಲ್ಸ್ ಈ) ಕೆನಾಲ್

9. ರಾಜಾ ರವಿವರ್ಮ ಯಾವ ರಾಜಮನೆತನಕ್ಕೆ ಸೇರಿದವರಾಗಿದ್ದರು?
ಅ) ತಿರುವಾಂಕೂರು ಆ) ಕೊಚ್ಚಿನ್ ಇ) ಪಂದಲಂ ಈ) ಮೂಲಂ

10. ಡಾ. ರಾಜಕುಮಾರರ ಯಾವ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿಲ್ಲ?
ಅ) ಮಲ್ಲಮ್ಮನ ಪವಾಡ ಆ) ಬೆಟ್ಟದ ಹುಲಿ ಇ) ಸಾಕ್ಷಾತ್ಕಾರ ಈ) ಕರುಳಿನ ಕರೆ

ಹಿಂದಿನ ಸಂಚಿಕೆಯ ಸರಿ ಉತ್ತರಗಳು
1. ಬಳ್ಳಾರಿ
2. ಡ್ಯೂಟೇರಿಯಂ ಆಕ್ಸೈಡ್
3. ಆರು
4. ಮೃತ್ಯುಂಜಯ
5. ಆವಾರ
6. ಲೋಥಾಲ್
7. ವಸುಧೇಂದ್ರ
8. ಜೇಡಿಮಣ್ಣು
9. ಎಲ್ಲರಿಗಿಂತ ಮೊದಲು ಬಿತ್ತರಿಸಿದ ಸುದ್ದಿ
10. ಕಾಯೌ ಶ್ರೀಗೌರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.