ADVERTISEMENT

 ಪ್ರಜಾವಾಣಿ ಕ್ವಿಜ್ 53

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 8 ಜನವರಿ 2019, 19:30 IST
Last Updated 8 ಜನವರಿ 2019, 19:30 IST

1. ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ಮೊತ್ತಮೊದಲ ಬಾರಿಗೆ ನಡೆದದ್ದು ಯಾವ ವರ್ಷ?

ಅ) 1970 ಆ) 1982 ಇ) 1995 ಈ) 2007

2. ಬ್ಯಾಂಕ್ ಆಫ್ ಬರೋಡಾದಲ್ಲಿ ಯಾವ ಎರಡು ಬ್ಯಾಂಕುಗಳು ವಿಲೀನಗೊಳ್ಳುವ ಪ್ರಸ್ತಾವವಿದೆ?

ADVERTISEMENT

ಅ) ದೇನಾ ಮತ್ತು ವಿಜಯಾ ಬ್ಯಾಂಕ್ ಆ) ದೇನಾ ಮತ್ತು ಕರ್ನಾಟಕ ಬ್ಯಾಂಕ್ ಇ) ವಿಜಯ ಮತ್ತು ಕರ್ನಾಟಕ ಬ್ಯಾಂಕ್
ಈ) ಕರ್ನಾಟಕ ಮತ್ತು ಕಾರ್ಪೊರೇಷನ್ ಬ್ಯಾಂಕ್

3. ಪ್ರಣಬ್ ಬರ್ದಾನ್ ಮತ್ತು ಶಿವನಾಥ್ ಸರ್ಕಾರ್ 2018ರ ಏಷ್ಯನ್ ಗೇಮ್ಸ್‌ನಲ್ಲಿ ಯಾವ ಕ್ರೀಡೆಯಲ್ಲಿ ಚಿನ್ನದ ಪದಕವನ್ನು ಗಳಿಸಿದರು?

ಅ) ರೋಯಿಂಗ್ ಆ) ಸೈಲಿಂಗ್
ಇ) ಬ್ರಿಡ್ಜ್ ಈ) ಗಾಲ್ಫ್

4. ಭೂಮಿಯ ಮೇಲೆ ಲಭ್ಯವಿರುವ ಅತ್ಯಂತ ಕಠಿಣವಾದ ವಸ್ತು ಯಾವುದು?

ಅ) ಚಿನ್ನ ಆ) ಕಬ್ಬಿಣ ಇ) ವಜ್ರ ಈ) ಪ್ಲಾಟಿನಂ

5. ಅಶೋಕನ ಶಾಸನಗಳನ್ನು ಮೊತ್ತಮೊದಲ ಬಾರಿಗೆ ಓದಿ ಅರ್ಥೈಸಿದ ವಿದ್ವಾಂಸ ಯಾರು?

ಅ) ಬ್ಯೂಲರ್ ಆ) ಬಿ .ಎಲ್. ರೈಸ್
ಇ) ಜೆ.ಎಫ್. ಫ್ಲೀಟ್ ಈ) ಜೇಮ್ಸ್ ಪ್ರಿನ್ಸೆಪ್

6. ವಿಲಿಯಂ ಷೇಕ್ಸ್‌ಪಿಯರನ ಒಟ್ಟು ಎಷ್ಟು ಸಾನೆಟ್‌ಗಳು ಲಭ್ಯವಿವೆ?

ಅ) 134 ಆ) 144 ಇ) 154 ಈ) 164

7. ಸಕ್ಕರಿ ಬಾಳಾಚಾರ್ಯರು ಯಾವ ಕಾವ್ಯನಾಮದಿಂದ ಕೃತಿರಚನೆ ಮಾಡಿದರು?

ಅ) ರಸಿಕರಂಗ ಆ) ಕುಸುಮಾಗ್ರಜ ಇ) ಶಾಂತಕವಿ ಈ) ರಸಿಕ ಪುತ್ತಿಗೆ

8. ಸೈಮನ್ ಕಮೀಷನ್ ವಿರೋಧಿಸಿ ಲಾಠಿ ಏಟಿನಿಂದ ನಿಧನರಾದ ಸ್ವಾತಂತ್ರ್ಯ ಹೋರಾಟಗಾರರು ಯಾರು?

ಅ) ಲಾಲಾ ಲಜಪತ್ ರಾಯ್
ಆ) ಬಿಪಿನ್ ಚಂದ್ರಪಾಲ್
ಇ) ಬಾಲಗಂಗಾಧರ ತಿಲಕ್
ಈ) ಬಟುಕೇಶ್ವರ ದತ್ತ

9. ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?

ಅ) ಆಂಧ್ರ ಆ) ತೆಲಂಗಾಣ
ಇ) ತಮಿಳುನಾಡು ಈ) ಕೇರಳ

10. ‘ನೀತಿ ಆಯೋಗ’ದ ಹಿಂದಿನ ಹೆಸರೇನು?

ಅ) ಕಾರ್ಯ ಆಯೋಗ
ಆ) ಯೋಜನಾ ಆಯೋಗ
ಇ) ನೀತಿ ನಿಬಂಧನ್ ಆಯೋಗ
ಈ) ಯೋಜಿತ ಕಾರ್ಯ ಆಯೋಗ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಬಿಳಿಗಿರಿ ರಂಗ 2. ಎರೆಹುಳು 3. ನಂಗಪುರಂ ವೆಂಕಟೇಶ ಅಯ್ಯಂಗಾರ್ 4. ಹನ್ನೆರಡು 5. ಶ್ರೀನಿವಾಸ ಹಾವನೂರ 6. ಲಾಲಾ ಅಮರನಾಥ್ 7. ಶ್ರವಣ ಬೆಳಗೊಳ 8. ಮೆಂಥಾಲ್ 9. ನೈಲ್ 10. ಪರಶುರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.