ADVERTISEMENT

2026ರ ಫೆಬ್ರುವರಿ ಎಲ್ಲಾ ವರ್ಷದಂತೆ ಅಲ್ಲ, ಈ ತಿಂಗಳು ತುಂಬಾನೆ ವಿಶೇಷ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಫೆಬ್ರುವರಿ 2026, 8:41 IST
Last Updated 12 ಫೆಬ್ರುವರಿ 2026, 8:41 IST
<div class="paragraphs"><p>ಪ್ರಜಾವಾಣಿ ಕ್ಯಾಲೆಂಡರ್</p></div>

ಪ್ರಜಾವಾಣಿ ಕ್ಯಾಲೆಂಡರ್

   

ಪ್ರತಿಯೊಬ್ಬರ ಮನೆಯಲ್ಲೂ ಇಂದಿಗೂ ಕೂಡ ತಮ್ಮ ಮನೆಗಳಲ್ಲಿ ಕ್ಯಾಲೆಂಡರ್‌ ಇಟ್ಟುಕೊಳ್ಳುವುದನ್ನು ಕಾಣಬಹುದು. ಅನೇಕರು ಕ್ಯಾಲೆಂಡರ್ ಅನ್ನು ದಿನದ ವಿಶೇಷತೆ, ವಿಶೇಷ ದಿನಗಳ ಮಾಹಿತಿ ತಿಳಿಯಲು ಬಳಸುತ್ತಾರೆ. ಆದರೆ, 2026ರ ಫೆಬ್ರುವರಿ ತಿಂಗಳ ಕ್ಯಾಲೆಂಡರ್ ಅನ್ನು ನೀವು ಗಮನವಿಟ್ಟು ನೋಡಿದರೆ, ನಿಮಗೆ ಖಂಡಿತ ವಿಶೇಷ ಅನ್ನಿಸದೆ ಇರಲ್ಲ.

ಮೇಲ್ನೋಟಕ್ಕೆ ನೋಡಿದರೆ, ಎಲ್ಲಾ ತಿಂಗಳಿನಂತೆ ಇದೂ ಕೂಡ ಸಾಮಾನ್ಯ ಎಂದು ನಿಮಗೆ ಅನಿಸುತ್ತದೆ. ಆದರೆ, ಅದನ್ನು ಸ್ವಲ್ಪ ಕೂಲಂಕಷವಾಗಿ ಗಮನಿಸಿದರೆ, ಅದರ ವಿಶೇಷತೆ ತಿಳಿಯುತ್ತದೆ. ಅಂದಹಾಗೆ, ಈ ರೀತಿಯ ಕ್ಯಾಲೆಂಡರ್ ಅಷ್ಟು ಸುಲಭವಾಗಿ ಪ್ರತೀ ವರ್ಷ ನೋಡಲು ಸಿಗುವುದಿಲ್ಲ ಎನ್ನುವುದು ಸತ್ಯ.

ADVERTISEMENT

ಏನಿದು ಫೆಬ್ರುವರಿ ವಿಶೇಷ?

ಫೆಬ್ರುವರಿ ತಿಂಗಳಿನಲ್ಲಿ ಉಳಿದೆಲ್ಲಾ ತಿಂಗಳಿಗೆ ಹೋಲಿಸಿದರೆ, ಅತೀ ಕಡಿಮೆ ದಿನಗಳು ಇರುವುದನ್ನು ಕಾಣಬಹುದು. ಇದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ. ಆದರೆ, 2026ರ ಫೆಬ್ರುವರಿಯಲ್ಲಿ 28 ದಿನಗಳ ಜೊತೆಗೆ ಭಾನುವಾರದಿಂದ ಶನಿವಾರದವರೆಗೆ, ಪ್ರತಿಯೊಂದು ದಿನವೂ ಈ ತಿಂಗಳಲ್ಲಿ ನಾಲ್ಕು ಬಾರಿ ಬಂದಿದೆ. ಅಂದರೆ, ಫೆಬ್ರುವರಿಯ 28 ದಿನಗಳನ್ನು ವಾರದ 7 ದಿನಗಳಿಂದ ಭಾಗಿಸಿದಾಗ 4 ಎಂಬ ಉತ್ತರ ಬರುತ್ತದೆ.

ಅದರಲ್ಲೇನಿದೆ ವಿಶೇಷ?

ಹೌದು, ಈ ಬಾರಿ ಫೆಬ್ರುವರಿಯಲ್ಲಿ

• 4 ಭಾನುವಾರಗಳು
• 4 ಸೋಮವಾರಗಳು
• 4 ಮಂಗಳವಾರಗಳು
• 4 ಬುಧವಾರಗಳು
• 4 ಗುರುವಾರಗಳು
• 4 ಶುಕ್ರವಾರಗಳು
• 4 ಶನಿವಾರಗಳು ಬಂದಿವೆ. ಅಂದರೆ, ಭಾನುವಾರದಂದು ಆರಂಭವಾಗುವ ತಿಂಗಳು ಶನಿವಾರದಂದು ಕೊನೆಯಾಗುತ್ತದೆ.

ಸಾಮಾನ್ಯ ವರ್ಷಗಳು ವರ್ಷದಿಂದ ವರ್ಷಕ್ಕೆ ವಾರದ ದಿನವು ಒಂದು ದಿನದ ಬದಲಾವಣೆ ಕಾಣಬಹುದು. ಅಂದರೆ, ಕಳೆದ ವರ್ಷ ಸೋಮವಾರಕ್ಕೆ ಕೊನೆಯಾಗಿದ್ದರೆ, ಈ ವರ್ಷ ಮಂಗಳವಾರದಿಂದ ಆರಂಭವಾಗುತ್ತದೆ. ಅಧಿಕ ವರ್ಷದ ಸಂದರ್ಭದಲ್ಲಿ ಇದು, ಎರಡು ದಿನಗಳಿಗೆ ಬದಲಾಗುತ್ತದೆ. ಅಂದರೆ, ಕಳೆದ ವರ್ಷ ಸೋಮವಾರ ಕೊನೆಗೊಂಡರೆ, ಈ ವರ್ಷ ಬುಧವಾರದಿಂದ ತಿಂಗಳು ಪ್ರಾರಂಭವಾಗುತ್ತದೆ.

ಅಂದಹಾಗೆ ಈ ರೀತಿಯ ಒಂದೇ ರೀತಿಯ ಕ್ಯಾಲೆಂಡರ್ 28 ವರ್ಷಗಳಿಗೊಮ್ಮೆ ಪುನರಾವರ್ತಿತ ಆಗುತ್ತದೆ. ಆದರೆ, ಅಧಿಕ ವರ್ಷ ಇರುವುದರಿಂದ 6 ​​ಅಥವಾ 11 ವರ್ಷಗಳಿಗೊಮ್ಮೆ ಒಂದೇ ರೀತಿಯ ಕ್ಯಾಲೆಂಡರ್ ಪುನರಾವರ್ತನೆಯಾಗುತ್ತದೆ.

ಆ ಕಾರಣದಿಂದಾಗಿ ಇದಕ್ಕೂ ಹಿಂದೆ ಈ ರೀತಿಯ ಫೆಬ್ರುವರಿ ತಿಂಗಳು 2015ರಲ್ಲಿ ಬಂದಿತ್ತು. ಈಗ 11 ವರ್ಷದ ಬಳಿಕ 2026ರಲ್ಲಿ ಪುನರಾವರ್ತನೆಯಾಗಿದೆ. ಎರಡೂ ಕ್ಯಾಲೆಂಡರ್‌ಗಳ ನಡುವಿನ ಅಂತರ 11 ವರ್ಷವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.