ADVERTISEMENT

ಅಂಧರ ಕ್ರಿಕೆಟ್‌: ಸೆಮಿಗೆ ಬಳ್ಳಾರಿ ತಂಡ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:39 IST
Last Updated 6 ಅಕ್ಟೋಬರ್ 2017, 19:39 IST
ರಾಜ್ಯಮಟ್ಟದ ಅಂಧರ ಕ್ರಿಕೆಟ್‌ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ ಬೀದರ್ ತಂಡದ ಆಟಗಾರ ಚೆಂಡನ್ನು ಬಡಿದಟ್ಟಿದ ರೀತಿ
ರಾಜ್ಯಮಟ್ಟದ ಅಂಧರ ಕ್ರಿಕೆಟ್‌ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ ಬೀದರ್ ತಂಡದ ಆಟಗಾರ ಚೆಂಡನ್ನು ಬಡಿದಟ್ಟಿದ ರೀತಿ   

ಬಳ್ಳಾರಿ: ಬೆಂಗಳೂರಿನ ದೀಪಾಂಜಲಿ, ಬಳ್ಳಾರಿ, ಐಡಿಯಲ್‌ ಮತ್ತು ಮೈಸೂರು ತಂಡಗಳು ನಗರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಅಂಧರ  ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿವೆ.

ಇಲ್ಲಿನ ವಿಮ್ಸ್‌ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ದೀಪಾಂಜಲಿ ತಂಡ 10 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 131 ರನ್ ಗಳಿಸಿತು. ಎದುರಾಳಿ ಧಾರವಾಡದ ಸಮರ್ಥನಂ ತಂಡ 33 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಕೇವಲ 31 ಎಸೆತಗಳಲ್ಲಿ 65 ರನ್‌ ಗಳಿಸಿದ ಜಿಲಾನಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಇನ್ನೊಂದು ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ತುಮಕೂರು ತಂಡ 3 ವಿಕೆಟ್‌ ನಷ್ಟಕ್ಕೆ 123 ರನ್ ಗಳಿಸಿತ್ತು. ಕೋಲಾರ ನಿಗದಿತ ಹತ್ತು ಓವರ್‌ಗಳು ಮುಗಿದಾಗ ಆರು ವಿಕೆಟ್‌ ಕಳೆದುಕೊಂಡು 54 ರನ್‌ ಕಲೆ ಹಾಕಿತು. ಮತ್ತೊಂದು ಹೋರಾಟದಲ್ಲಿ ಮೊದಲು ಬ್ಯಾಟ್‌ ಮಾಡಿದ ಬೀದರ ತಂಡ ಐದು ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿತು. ಈ ಗುರಿಯನ್ನು ‌ಬೆಂಗಳೂರು ಬಿ.ಸಿ.ಸಿ. ತಂಡ 7.3 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಮುಟ್ಟಿತು.

ADVERTISEMENT

ಶಿವಮೊಗ್ಗ–ಧಾರವಾಡ ಮತ್ತು ಬೆಂಗಳೂರು ಐಡಿಯಲ್‌–ಚಿಕ್ಕಬಳ್ಳಾಪುರ ತಂಡಗಳ ನಡುವಣ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.