ಲಂಡನ್: ಒಲಿಂಪಿಕ್ಸ್ ಕುಸ್ತಿ ಪೈಪೋಟಿ ವೇಳೆ ಸುಶೀಲ್ ಕುಮಾರ್ ತಮ್ಮ ಎದುರಾಳಿ ಕಿವಿ ಕಚ್ಚಿದರೇ? ಆದರೆ ಸೆಮಿಫೈನಲ್‌ನಲ್ಲಿ ಸುಶೀಲ್ ಎದುರು ಸೋಲುಕಂಡ ಕಜಕಸ್ತಾನದ ಅಕ್ಜುರೆಕ್ ತನತರೋವ್ ಈ ಬಗ್ಗೆ ರೆಫರಿಗೆ ದೂರು ನೀಡಿದ್ದಾರೆ.
ತನತರೋವ್ ಅವರ ಬಲ ಕಿವಿಯಲ್ಲಿ ರಕ್ತ ಕೂಡ ಬರುತಿತ್ತು. ಆದರೆ ಈ ದೂರನ್ನು ಅಧಿಕಾರಿಗಳು ಸ್ವೀಕರಿಸಿಲ್ಲ. ಟಿವಿ ದೃಶ್ಯಗಳಲ್ಲಿ ಕೂಡ ಸುಶೀಲ್ ಮುಖ ಕಜಕಸ್ತಾನದ ಕುಸ್ತಿಪಟುವಿನ ಕಿವಿಯ ಸಮೀತ ಇತ್ತು. ಆದರೆ ಕಿವಿಯ ಗಾಯಕ್ಕೆ ನಿಖರ ಕಾರಣ ಗೊತ್ತಾಗಲೇ ಇಲ್ಲ
ಪತಿಯ ಕುಸ್ತಿ ವೀಕ್ಷಿಸಿದ ಸವಿ: ಎಕ್ಸ್‌ಸೆಲ್ ನಾರ್ಥ್ ಅರೆನಾದಲ್ಲಿ ಭಾನುವಾರ ನಡೆದ ಪುರುಷರ ಕುಸ್ತಿಯ 66 ಕೆ.ಜಿ. ವಿಭಾಗದ ಫ್ರೀಸ್ಟೈಲ್‌ನಲ್ಲಿ ಸುಶೀಲ್ ಕುಮಾರ್ ಪೈಪೋಟಿ ನಡೆಸಿದ್ದನ್ನು ವೀಕ್ಷಿಸಿ ಚಪ್ಪಾಳೆ ತಟ್ಟಿದ್ದು ಪತ್ನಿ ಸವಿ ಹಾಗೂ ಮಾವ ಸತ್ಪಾಲ್ ಸಿಂಗ್.
ನಜಾಫ್‌ಗಡದ ಸುಶೀಲ್ ತಮ್ಮ ಕೋಚ್ ಸತ್ಪಾಲ್ ಸಿಂಗ್ ಪುತ್ರಿಯನ್ನೇ ವಿವಾಹವಾಗಿದ್ದಾರೆ. `ಒಂದು ದಿನದ ಸ್ಪರ್ಧೆಗಾಗಿ ಸುಶೀಲ್ ಇಷ್ಟು ವರ್ಷಗಳಿಂದ ಕಠಿಣ ಪ್ರಯತ್ನ ಹಾಕಿದ್ದರು. ಭುಜದ ನೋವಿದ್ದರೂ ಅಭ್ಯಾಸ ನಡೆಸುತ್ತಿದ್ದರು~ ಎಂದು ಸವಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.