ADVERTISEMENT

ಅಗಲಿದ ಗೆಳೆಯನಿಗೆ ಗೌರವ ಸಲ್ಲಿಸಿದ ಲೀ

ಏಜೆನ್ಸೀಸ್
Published 11 ಮಾರ್ಚ್ 2018, 19:30 IST
Last Updated 11 ಮಾರ್ಚ್ 2018, 19:30 IST

ಸೋಲ್‌: ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ದಕ್ಷಿಣ ಕೊರಿಯಾದ ಬ್ಯಾಡ್ಮಿಂಟನ್‌ ಆಟಗಾರ ಚಂಗ್‌ ಜೀ ಸಂಗ್‌ ಅವರ ಅಂತಿಮ ಯಾತ್ರೆಯ ವೇಳೆ ಲೀ ಯಾಂಗ್ ಡೀ ಅವರು ಶವಪೆಟ್ಟಿಗೆಗೆ ಹೆಗಲು ನೀಡಿ ಗೌರವಿಸಿದರು.

ಇವರಿಬ್ಬರೂ ಜೊತೆಯಾಗಿ ಡಬಲ್ಸ್ ಪಂದ್ಯಗಳಲ್ಲಿ ದೇಶವನ್ನು ಪ್ರ‌ತಿನಿಧಿಸುತ್ತಿದ್ದರು. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಈ ಜೋಡಿ ಕಂಚು ಗೆದ್ದಿತ್ತು. 2008 ಮತ್ತು 2012ರ ಆಲ್‌ ಇಂಗ್ಲೆಂಡ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು.

ಚಂಗ್ ಅವರು ಹೋದ ಶುಕ್ರವಾರ ತಮ್ಮ ಮನೆಯಲ್ಲಿ ಮೃತರಾಗಿದ್ದರು. ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದ್ದರೂ ತನಿಖೆ ಮುಂದುವರಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.