ADVERTISEMENT

ಅಗ್ರಸ್ಥಾನದಲ್ಲಿ ಮಾನ

ರಾಜ್ಯಮಟ್ಟದ ಮಹಿಳಾ ಚೆಸ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 19:59 IST
Last Updated 13 ಜುಲೈ 2013, 19:59 IST

ಮೈಸೂರು: ಆತಿಥೇಯ ಮೈಸೂರಿನ ಉದಯೋನ್ಮುಖ ಚೆಸ್ ಪ್ರತಿಭೆ  ಎಚ್.ಆರ್. ಮಾನಸ ಮೈಸೂರು ಜಿಲ್ಲಾ ಚೆಸ್ ಸಂಸ್ಥೆ ಮತ್ತು ಕಾವೇರಿ ಶಾಲೆಯ ಆಶ್ರಯದಲ್ಲಿ ನಡೆಯತ್ತಿರುವ ರಾಜ್ಯಮಟ್ಟದ ಮಹಿಳಾ ಚೆಸ್ ಟೂರ್ನಿಯ ಎರಡನೇ ದಿನವಾದ ಶನಿವಾರ ಒಟ್ಟು 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ನಾಲ್ಕನೇ ಸುತ್ತಿನಲ್ಲಿ ದ್ವಿತೀಯ ಶ್ರೇಯಾಂಕದ ಮಾನಸ (ರೇಟಿಂಗ್ 1704) ಅವರು,  ಎಂ.ಆರ್. ದೀಕ್ಷಾ ಅವರನ್ನು ಸೋಲಿಸಿದರು. ಚುರುಕು ನಡೆಗಳನ್ನು ಪ್ರದರ್ಶಿಸಿದ ಮಾನಸ ಸತತ ನಾಲ್ಕು ಸುತ್ತುಗಳಲ್ಲಿ ಗೆಲುವು ಸಾಧಿಸಿದ್ದಾರೆ.

ನಾಲ್ಕನೇ ಸುತ್ತಿನಲ್ಲಿ ಮಂಗಳೂರಿನ ಶಾಲನ್ ಜೋನ್ ಪೇಸ್ ಮತ್ತು ಮೈಸೂರಿನ ಎಂ. ತುಳಸಿ ನಡುವಿನ ಪಂದ್ಯ ಸಮ ಆಯಿತು. ಶಾಲನ್ 3.5 ಪಾಯಿಂಟ್ ಗಳಿಸಿದ್ದಾರೆ. 

ಮಂಗಳೂರಿನ ಕೆ. ಮಾನಸ ಮತ್ತು ಮೈಸೂರಿನ ಬಿ.ಎನ್. ಗಂಗಮ್ಮ ಅವರ ಪಂದ್ಯವೂ ಸಮವಾಗಿದ್ದು, ಗಂಗಮ್ಮ ಮೂರೂವರೆ ಅಂಕ ಗಳಿಸಿದ್ದಾರೆ. ಜೆ. ಜೀವಿತಾ ಅವರು ಆದ್ಯ ಸಿಂಗ್ ಅವರನ್ನು ಸೋಲಿಸಿ ಒಟ್ಟು 3 ಅಂಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT