ನವದೆಹಲಿ (ಪಿಟಿಐ): `ಲಂಡನ್ ಒಲಿಂಪಿಕ್ಸ್‌ಗೆ ತರಬೇತಿ ಪಡೆಯುತ್ತಿರುವ ಅಥ್ಲೀಟ್‌ಗಳಿಗೆ ಈಗಾಗಲೇ 123.73 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ~ ಎಂದು ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ತಿಳಿಸಿದ್ದಾರೆ.
`ತರಬೇತಿಯ ಉದ್ದೇಶಕ್ಕಾಗಿ ಫೆಬ್ರುವರಿ 29ರ ಒಳಗೆ ಈ ಹಣ ವೆಚ್ಚ ಮಾಡಲಾಗಿದೆ. ಒಲಿಂಪಿಕ್ಸ್ ತರಬೇತಿಗೆ ಒಟ್ಟು 258 ಕೋಟಿ ರೂಪಾಯಿ ಮೀಸಲಿಡಲಾಗಿದೆ~ ಎಂದು ಮಂಗಳವಾರ ಲೋಕಸಭೆಗೆ ಲಿಖಿತ ರೂಪದಲ್ಲಿ ನೀಡಿದರು.
`ಕ್ರೀಡಾ ಫೆಡರೇಷನ್‌ಗಳು ನಿರಂತರವಾಗಿ ನಮ್ಮ ಜೊತೆ ಸಂಪರ್ಕದಲ್ಲಿವೆ. ಅಥ್ಲೀಟ್‌ಗಳಿಗೆ ನೀಡುತ್ತಿರುವ ತರಬೇತಿ ಬಗ್ಗೆ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಹಾಗೂ ಪರಿಣಿತರು ಮಾಹಿತಿ ನೀಡುತ್ತಿದ್ದಾರೆ~ ಎಂದೂ ಹೇಳಿದ್ದಾರೆ.
ಶೂಟರ್‌ಗಳಿಗೆ 13 ಕೋಟಿ: ಒಲಿಂಪಿಕ್ಸ್‌ಗೆ ಸಜ್ಜುಗೊಳ್ಳಲು ಶೂಟರ್‌ಗಳಿಗೆ 13 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ.
`13 ಕೋಟಿ ರೂ. ಯಲ್ಲಿ 12.5 ಕೋಟಿ ರೂಪಾಯಿಯನ್ನು ಕೇಂದ್ರ ಕ್ರೀಡಾ ಸಚಿವಾಲಯ ನೀಡಿದೆ. ಇನ್ನುಳಿದ ಐದು ಕೋಟಿ ರೂ. ಹಣವನ್ನು ಈ ವಾರದ ಅಂತ್ಯದಲ್ಲಿ ನೀಡುವ ವಿಶ್ವಾಸವಿದೆ~ ಎಂದು ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಅಧ್ಯಕ್ಷ ರಣಿಂದರ್ ಸಿಂಗ್ ಹೇಳಿದ್ದಾರೆ.
ಅಭಿನವ್ ಬಿಂದ್ರಾ, ರೊಂಜನ್ ಸೋಧಿ, ಮನವ್‌ಜಿತ್ ಸಿಂಗ್, ಗಗನ್ ನಾರಂಗ್, ಸಂಜೀವ್ ರಜಪೂತ್, ರಾಹಿ ಸರ್ನೋಬತ್ ಹಾಗೂ ಅನುರಾಗ್ ಸಿಂಗ್ ಇತರ ಶೂಟರ್‌ಗಳು ತರಬೇತಿ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.