ADVERTISEMENT

ಅಧಿಕೃತ ವೆಬ್‌ಸೈಟ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2011, 19:30 IST
Last Updated 27 ಜನವರಿ 2011, 19:30 IST
ಅಧಿಕೃತ ವೆಬ್‌ಸೈಟ್‌ಗೆ ಚಾಲನೆ
ಅಧಿಕೃತ ವೆಬ್‌ಸೈಟ್‌ಗೆ ಚಾಲನೆ   

ಮುಂಬೈ (ಪಿಟಿಐ): ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯು ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲಿ ಫೆಬ್ರುವರಿ 19ರಿಂದ ಆರಂಭವಾಗಲಿರುವ ವಿಶ್ವಕಪ್ ಕ್ರಿಕೆಟ್‌ನ ಸಮಗ್ರ ಮಾಹಿತಿಯನ್ನು ನೀಡುವ ಅಧಿಕೃತ ವೆಬ್‌ಸೈಟ್ ಅನ್ನು ‘ಯಾಹೂ’ ಸಹಯೋಗದಲ್ಲಿ ರೂಪಿಸಿದೆ.

iccevents.yahoo.com ಗೆ ಗುರುವಾರ ಚಾಲನೆ ನೀಡಲಾಯಿತು. ಈ ಜಾಲತಾಣದಲ್ಲಿ ವಿಶ್ವಕಪ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ನೀಡಲು ಪ್ರಯತ್ನಿಸಲಾಗುವುದೆಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವಕಪ್ ಇತಿಹಾಸ, ತಂಡಗಳ ವಿವರ, ಅಂಕಿ-ಅಂಶ, ಪಂದ್ಯಗಳ ವಿಶಿಷ್ಟ ಕ್ಷಣಗಳ ವೀಡಿಯೊ ಹಾಗೂ ವಿಶ್ಲೇಷಣೆಗಳು ಜಾಲತಾಣದಲ್ಲಿ ಲಭ್ಯವಾಗಲಿವೆ. ‘ವೇಗವಾಗಿ ಕಾರ್ಯನಿರ್ವಹಿಸುವಂಥ ಸರ್ವರ್‌ನಲ್ಲಿ ವಿಶ್ವಕಪ್ ವೆಬ್‌ಸೈಟ್ ರೂಪಗೊಂಡಿದ್ದಕ್ಕೆ ಎಲ್ಲ ಸದಸ್ಯ ರಾಷ್ಟ್ರಗಳು ಸಂತಸ ವ್ಯಕ್ತಪಡಿಸಿವೆ’ ಎಂದು ಐಸಿಸಿ ಪ್ರಧಾನ ವ್ಯವಸ್ಥಾಪಕ (ವಾಣಿಜ್ಯ) ಕ್ಯಾಂಪ್‌ಬೆಲ್ ಜೇಮ್ಸನ್ ಅವರು ಹೇಳಿದ್ದಾರೆ.

ವಿವಿಧ ದೇಶಗಳ ಖ್ಯಾತ ಕ್ರಿಕೆಟಿಗರು ಪಂದ್ಯಗಳ ಕುರಿತು ತಮ್ಮ ಟ್ವಿಟರ್‌ಗಳಲ್ಲಿ ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಸಂಗ್ರಹಿಸಿ ನೀಡುವ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.