ADVERTISEMENT

ಅಪೇಕ್ಷಾ, ಅರ್ಚನಾ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 19:30 IST
Last Updated 16 ಆಗಸ್ಟ್ 2012, 19:30 IST

ಮಂಡ್ಯ: ಪಿಪಿಬಿಎದ ಅಪೇಕ್ಷಾ ಮತ್ತು ಅರ್ಚನಾ ಪೈ ಗುರುವಾರ ಆರಂಭವಾದ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಟೂರ್ನಿಯ 17 ವರ್ಷ ವಯೋಮಿತಿ ಬಾಲಕಿಯರ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಶುಭಾರಂಭ ಮಾಡಿದ್ದಾರೆ.

ಇಲ್ಲಿನ ಪಿಇಟಿ ಕ್ರೀಡಾ ಸಮುಚ್ಛಯದಲ್ಲಿ ಮಂಡ್ಯ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ, ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯದಲ್ಲಿ ಪಿಪಿಬಿಎಯ ಅಪೇಕ್ಷಾ, 21-5, 21-10ರಿಂದ ಡಬ್ಲ್ಯೂಪಿಬಿಎಯ ಎಲ್.ಮಹಿಮಾ ವಿರುದ್ಧವೂ; ಪಿಪಿಬಿಎಯ ಅರ್ಚನಾ ಪೈ, 21-2, 21-10ರಲ್ಲಿ ಡಬ್ಲ್ಯೂಪಿಬಿಎಯ ಸೋನಲ್ ಎದುರು ಸುಲಭ ಜಯ ದಾಖಲಿಸಿದರು.

ಫಲಿತಾಂಶ: ಪಿಪಿಬಿಎಯ ಶಿಖಾ ಗೌತಮ್ 21-7, 21-10ರಲ್ಲಿ ಎನ್‌ಜಿವಿ ಸರಯೂ ವ್ಯಾಕರಣಂ ಮೇಲೂ; ಬೆಂಗಳೂರಿನ ನಿಖಿತಾ ರಮೇಶ್, 21-15, 12-21, 21-12ರಲ್ಲಿ ಡಬ್ಲ್ಯೂಪಿಬಿಎಯ ಮೈಥಾಲಿ ಸುದರ್ಶನ್ ಎದುರು; ಬೆಳಗಾವಿಯ ಮೇಘನಾ ಕುಲಕರ್ಣಿ, 21-16, 21-7ರಲ್ಲಿ ಸಿಯುಸಿಟಿಯ ಶೀತಲ್ ಸುದರ್ಶನ್ ವಿರುದ್ಧ ಜಯ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.