ADVERTISEMENT

ಅಬುಧಾಬಿ ಗ್ರ್ಯಾನ್ ಪ್ರಿ: ರೈಕೊನೆನ್‌ಗೆ ಅಗ್ರಸ್ಥಾನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2012, 19:30 IST
Last Updated 4 ನವೆಂಬರ್ 2012, 19:30 IST

ಅಬುಧಾಬಿ (ಪಿಟಿಐ): ಲೋಟಸ್- ರೆನಾಲ್ಟ್ ತಂಡದ ಕಿಮಿ ರೈಕೊನೆನ್ ಭಾನುವಾರ ಇಲ್ಲಿ ನಡೆದ ಅಬುಧಾಬಿ ಗ್ರ್ಯಾನ್‌ಪ್ರಿ ಫಾರ್ಮುಲಾ ಒನ್ ರೇಸ್ ಗೆದ್ದುಕೊಂಡರು.

ಫೆರಾರಿ ತಂಡದ ಫೆರ್ನಾಂಡೊ ಅಲೊನ್ಸೊ ಎರಡನೇ ಸ್ಥಾನ ಪಡೆದರೆ, ರೆಡ್‌ಬುಲ್ ತಂಡದ ಸೆಬಾಸ್ಟಿಯನ್ ವೆಟೆಲ್ ಮೂರನೇ ಸ್ಥಾನ ಗಳಿಸಿದರು.


ಕೊನೆಯವರಾಗಿ ಸ್ಪರ್ಧೆ ಆರಂಭಿಸಿದ್ದ ವೆಟೆಲ್ ಅದ್ಭುತ ಪ್ರದರ್ಶನ ನೀಡಿದರು. ಇಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಪ್ರಸಕ್ತ ಋತುವಿನಲ್ಲಿ (255 ಪಾಯಿಂಟ್) ಮುನ್ನಡೆಯನ್ನು ಕಾಪಾಡಿಕೊಂಡಿದ್ದಾರೆ.
ಸಹಾರಾ ಫೋರ್ಸ್ ಇಂಡಿಯಾ ತಂಡದ ಪೌಲ್ ಡಿ ರೆಸ್ಟಾ 9ನೇ ಸ್ಥಾನ ಪಡೆದು ತಂಡಕ್ಕೆ ಎರಡು ಪಾಯಿಂಟ್ ತಂದುಕೊಟ್ಟರು. ಈ ತಂಡದ ಇನ್ನೊಬ್ಬ ಚಾಲಕ ನಿಕೊ ಹಕನ್‌ಬರ್ಗ್ ಸ್ಪರ್ಧೆ ಪೂರೈಸಲು ವಿಫಲರಾದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT